ಕರೋನ ಸಂಕಷ್ಟ ಕಾಲದಲ್ಲಿ ವೈದ್ಯರ ಸೇವೆ ಅನನ್ಯವಾದದ್ದು _ಜೆ ಸಿ ಮಧುಸ್ವಾಮಿ.
ಕರೋನ ಸಂದರ್ಭದಲ್ಲಿ ವೈದ್ಯರು ಸಲ್ಲಿಸಿದ ಸೇವೆ ನಿಜಕ್ಕೂ ಶ್ಲಾಘನೀಯ ತುಮಕೂರು ಜಿಲ್ಲೆ ಕರೋನ ಸೋಂಕಿತರ ಪಟ್ಟಿಯಲ್ಲಿ ಎರಡು ಹಾಗೂ ಮೂರನೇ ಸ್ಥಾನಕ್ಕೆ ತಲುಪಿದ್ದು ತೀವ್ರ ಆತಂಕ ಸೃಷ್ಟಿಮಾಡಿತ್ತು ಆದರೆ ವೈದ್ಯರು ಅಂತಹ ಕಠಿಣ ಸಂದರ್ಭದಲ್ಲಿ ಸಲ್ಲಿಸಿದ ನಿಷ್ಕಳಂಕ ಸೇವೆಯಿಂದ ಇಂದು ಕರೋನ ಇಳಿಕೆಆಗಿದ್ದು ಇಂತಹ ವೈದ್ಯರ ಸೇವೆಯನ್ನು ಎಲ್ಲರೂ ಸ್ಮರಿಸಬೇಕು ಎಂದು ಸಚಿವ ಮಾಧುಸ್ವಾಮಿ ತಿಳಿಸಿದರು.
ತುಮಕೂರಿನ ಕನ್ನಡ ಭವನದಲ್ಲಿ ನಡೆದ ಕರ್ನಾಟಕ ರಾಜ್ಯ ಕುಂಚಿಟಿಗರ ಸಂಘ , ಬೆಂಗಳೂರು 97 ,ಮಹಿಳಾ ಘಟಕದ ವತಿಯಿಂದ ಕರೋನ ವಾರಿಯರ್ಸ್ ಗಳಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಕಾರ್ಯಕ್ರಮದ ಉದ್ಘಾಟನೆ ಮಾಡಿ ಮಾತನಾಡಿದ ಸಚಿವ ಮಾಧುಸ್ವಾಮಿ ರವರು ವೈದ್ಯರು ,ಪೊಲೀಸರು, ರೈತರು ಹಾಗೂ ಗುರುಗಳು ಸಲ್ಲಿಸುವ ಸೇವೆಗಳು ಯಾರು ಕೂಡ ಮರೆಯಬಾರದು ಪ್ರತಿಯೊಬ್ಬರೂ ಕಾಯಕ ನಿಷ್ಠರಾಗಿಇರಬೇಕು ಆಗ ಮಾತ್ರ ತಾವು ಸಲ್ಲಿಸುವ ಸೇವೆ ಪ್ರತಿಯೊಬ್ಬರೂ ಸ್ಮರಿಸುತ್ತಾರೆ ಎಂದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿದ್ದ ಕೊರಟಗೆರೆಯ ಕುಂಚಿಟಿಗ ಸಂಸ್ಥಾನ ಮಠದ ಶ್ರೀ ಶ್ರೀ ಹನುಮಂತನಾಥ ಸ್ವಾಮೀಜಿ ಗಳು ಮಾತನಾಡಿ ಕರೋನ ಮಹಾಮರಿ ಬಂದ ಸಂದರ್ಭದಲ್ಲಿ ಪ್ರಾಣದ ಹಂಗು ತೊರೆದು ವೈದ್ಯರು ಹಗಲಿರುಳು ಶ್ರಮಿಸಿರುವುದು ನಿಜಕ್ಕೂ ಶ್ಲಾಘನೀಯ ನಾಡು ಕಂಡ ಅಪ್ರತಿಮ ವೈದ್ಯರಾಗಿ ಸೇವೆ ಸಲ್ಲಿಸಿದವರನ್ನು ಗುರುತಿಸಿ ಸನ್ಮಾನಿಸುವುದು ಒಂದು ಅರ್ಥಪೂರ್ಣ ಕಾರ್ಯಕ್ರಮ ಇಂತಹ ಕಾರ್ಯಕ್ರಮಗಳ ಮೂಲಕ ಅವರಿಗೆ ಅಭಿನಂದಿಸುವ ಸಂಘ-ಸಂಸ್ಥೆಗಳ ಕಾರ್ಯವನ್ನು ಪ್ರತಿಯೊಬ್ಬರೂ ಮೆಚ್ಚುವಂತದ್ದು ಎಂದರು.
ವಿಧಾನಪರಿಷತ್ ಶಾಸಕರಾದ ಚಿದಾನಂದ. ಎಂ.ಗೌಡ ರವರು ಮಾತನಾಡಿ ಕರೋನಾ ಮೊದಲನೇ ಹಾಗೂ ಎರಡನೇ ಅಲೆಯಲ್ಲಿ ಇಡೀ ವಿಶ್ವ, ದೇಶ ,ರಾಜ್ಯ ಹೀಗೆ ಇಡೀ ಜಗತ್ತನ್ನು ಆವರಿಸಿ ಆತಂಕ ಹಾಗೂ ಸಾವು-ನೋವು ತಂದೊಡ್ಡಿತ್ತು ಆದರೆ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ವೈದ್ಯರು ಸಲ್ಲಿಸಿದ ಸೇವೆ ಮೆಚ್ಚುವಂತದ್ದು ಸರ್ಕಾರದ ಕಠಿಣ ನಿರ್ಧಾರ ವೈದ್ಯರ ಅತ್ಯುನ್ನತ ಸೇವೆ, ಸಂಘ ಸಂಸ್ಥೆಗಳ ಕೊಡುಗೆ ಹೀಗೆ ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯ ಸೇವೆ ಕರೋನ ಸಂದರ್ಭದಲ್ಲಿ ಸಲ್ಲಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ ಎಂದರು.
ಇನ್ನು ಕಾರ್ಯಕ್ರಮದಲ್ಲಿ ಕರೋನ ವಾರಿಯರ್ಸ್ ಗಳಾದ ವೈದ್ಯರು, ಶುಶ್ರೂಷಕರು ,ವೈದ್ಯಕೀಯ ಸಿಬ್ಬಂದಿಗಳು ಸೇರಿದಂತೆ ಹಲವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು .
ಇನ್ನು ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಕುಂಚಿಟಿಗರ ಸಂಘದ ಮಹಿಳಾ ಘಟಕದ ಅಧ್ಯಕ್ಷರಾದ ಲಲಿತ ಮಲ್ಲಪ್ಪ, ತುಮಕೂರು ನಗರ ಶಾಸಕರಾದ ಜಿ.ಬಿ ಜ್ಯೋತಿ ಗಣೇಶ್, ರೇಷ್ಮೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಎಸ್. ಆರ್. ಗೌಡ, ಜಿಲ್ಲಾ ಪಂಚಾಯತ್ ಸದಸ್ಯರಾದ ಶಿವರಾಮಯ್ಯ, ಡಿ. ಹೆಚ್. ಓ. ಎಂ ಬಿ ನಾಗೇಂದ್ರಪ್ಪ, ಜಿಲ್ಲಾ ಶಸ್ತ್ರಚಿಕಿತ್ಸಕ ರಾದ ವೀರಭದ್ರಯ್ಯ, ಮುತ್ತುರಾಜ್ ಸತೀಶ್, ಕೃಷ್ಣ ,ಶಿವಣ್ಣ, ದೊಡ್ಡ ಲಿಂಗಪ್ಪ ಹಾಗೂ ಮಹಿಳಾ ಘಟಕದ ಸದಸ್ಯರಾದ ಅಂಬುಜ, ನೇತ್ರ, ಕಾತ್ಯಾಯಿನಿ, ಶಶಿಕಲಾ, ಶಾರದಾ, ಶ್ರೀದೇವಿ ,ರಮ್ಯಾ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಹಾಜರಿದ್ದರು.