ತೆಲಂಗಾಣ ರಾಜ್ಯದ ಉನ್ನತ ಮಟ್ಟದ ಹುದ್ದೆಗೆ ಎರಿದ ಏಕೈಕ ಕನ್ನಡ ಅಧಿಕಾರಿ
ತೆಲಂಗಾಣ ಆರಟಿಸಿ ಎಂಡಿಯಾಗಿ ವಿ.ಸಿ.ಸಜ್ಜನರ ಐಪಿಎಸ್ ನೇಮಕ ಮಾಡಿ ಆದೇಶ ಹೊರಡಿಸಿದ ಸರ್ಕಾರ
ಹೈದರಾಬಾದ್ ; ತೆಲಂಗಾಣ ರಾಜ್ಯದ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾಗಿ ೧೯೯೬ ಬ್ಯಾಚ್‌ನ ಐಪಿಎಸ್ ಅಧಿಕಾರಿ ಕನ್ನಡಿಗರಾದ ಶ್ರೀ ವಿಶ್ವನಾಥ. ಸಿ. ಸಜ್ಜನರ್ ಅವರನ್ನು ರಾಜ್ಯ ಸರ್ಕಾರ ನೇಮಕ ಮಾಡಿ ಆದೇಶ ಹೊರಡಿಸಿದೆ. ಸರ್ಕಾರದ ಮುಖ್ಯಕಾರ್ಯದರ್ಶಿ ಸೋಮೇಶಕುಮಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.
ಸಜ್ಜನರ ಅವರ ಸೇವೆಯನ್ನು ಗುರುತಿಸಿ ಸಾರಿಗೆ ಇಲಾಖೆಯಲ್ಲಿ ಒಳ್ಳೆಯ ಸೇವೆಯನ್ನು ಮಾಡುತ್ತಾರೆ ಎಂಬ ಉದ್ದೇಶದಿಂದ ಎಂ.ಡಿ ಆಗಿ ನೇಮಕ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಸಜ್ಜನರ ಅವರು ಮೂಲತ ಕರ್ನಾಟಕದವರಾದ ಶ್ರೀ ವಿ.ಸಿ.ಸಜ್ಜನರ ಐಪಿಎಸ್ ಅವರು ಹುಬ್ಬಳ್ಳಿಯ ನಿವಾಸಿಗಳು. ತೆಲಂಗಾಣ ರಾಜ್ಯದ ಪೊಲೀಸ ಇಲಾಖೆಯಲ್ಲಿ ಒಳ್ಳೆಯ ಹೆಸರು ಮಾಡಿರುವ ಏಕೈಕ ಕನ್ನಡ ಅಧಿಕಾರಿ. ವರಂಗಲ ಹಾಗೂ ಹೈದರಾಬಾದನಲ್ಲಿ ನಡೆದ ಮಹಿಳೆಯರ ಮೇಲೆ ಆತ್ಯಾಚಾರ ಮಾಡಿದ ಕಾಮುಕರನ್ನು ಸ್ಥಳದಲ್ಲಿಯೇ ಎನಕೌಂಟರ ಮಾಡಿ ನ್ಯಾಯ ಒದಗಿಸಿದ ಹೆಮ್ಮೆಯ ಅಧಿಕಾರಿ ಎನ್ನಿಸಿಕೊಂಡವರು. ಪೊಲೀಸ ಇಲಾಖೆಯಲ್ಲಿ ಈ ತರಹ ಅಧಿಕಾರಿಗಳು ಇದ್ದರೆ ಸಮಾಜದಲ್ಲಿ ಯಾವುದೇ ಅಪರಾಧಗಳು ಜರುಗುವುದಿಲ್ಲ ಎಂಬ ಸಂದೇಶವನ್ನು ನೀಡಿದ ಖಡಕ ಅಧಿಕಾರಿಗೆ ದೇಶಾದ್ಯಂತ ಜೈಕಾರ ಹಾಕಿದರು ಜನ ಸಾಮಾನ್ಯರು. ೪ ಎನಕೌಂಟ ಇಡೀ ದೇಶದಲ್ಲಿ ಸಂಚಲನ ಮೂಡಿದರು.
ಸಜ್ಜನರ ಅವರು ಎಎಸಪಿ ಆಗಿ ಮೊದಲ ಸೇವೆ ಆರಂಭಿಸಿ ಅನೇಕ ಸ್ಥಳಗಳಲ್ಲಿ ನ್ಯಾಯಯುತ್ತವಾಗಿ ಸೇವೆ ಮಾಡಿರುವ ಹೆಗ್ಗಳಿಕೆ ಪಾತ್ರರಾಗಿದ್ದಾರೆ. ಕಡಪ. ವರಂಗಲ. ಜಿಲ್ಲೆಯಲ್ಲಿ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿಯಾಗಿ ಸೇವೆ ಮಾಡಿ. ತೆಲಂಗಾಣ ರಾಜ್ಯ ನಿರ್ಮಾಣದ ನಂತರ ಮೊದಲ ಇಂಟಲಿಜನ್ಸ ಐಜಿಯಾಗಿ ನಾಲ್ಕು ವರ್ಷ. ಹಾಗೂ ಸೈಬರಾಬಾದ ಪೊಲೀಸ ಆಯುಕ್ತರಾಗಿ ಮೂರುವರೆ ವರ್ಷ ಸೇವೆಯನ್ನು ಮಾಡಿ ಉತ್ತಮ ಅಧಿಕಾರಿ ಎಂಬ ಸರ್ಕಾರದ ಪ್ರಶಸ್ತಿಗೆ ಪಾತ್ರರಾದ್ದರು. ೨೫.೮.೨೦೨೧ ರಂದು ತೆಲಂಗಾಣ ರಾಜ್ಯದ ಆರ.ಟಿ.ಸಿ. ಎಂ.ಡಿ. ಆಗಿ ನೇಮವಾಗಿದ್ದಾರೆ.
ಅಭಿನಂದನೆಗಳು ; ತೆಲಂಗಾಣ ರಾಜ್ಯದ ಆರ್.ಟಿ.ಸಿ. ಎಂ.ಡಿ ಆಗಿ ನೇಮಕವಾಗಿರುವ ಕನ್ನಡಿಗ ಶ್ರೀ ವಿಶ್ವನಾಥ ಸಜ್ಜನರ ಐಪಿಎಸ್ ಅವರನ್ನು ಹೈದರಾಬಾದನ ಕನ್ನಡಿಗರ ಕಲ್ಯಾಣ ಅಭಿವೃದ್ದಿ ಸಂಘಟನೆಯು ಹರ್ಷ ವ್ಯಕ್ತಪಡಿಸಿವೆ. ನೇಮಕಕ್ಕೆ ಅನೀಲಕುಮಾರ ಪಾಟೀಲ. ಧರ‍್ಮೇಂದ್ರ ಪೂಜಾರಿ ಬಗ್ದೂರಿ. ಸಂತೋಷ ಪಾಟೀಲ. ನಾಗನಾಥ ಮಾಶೆಟ್ಟಿ, ಪ್ರದೀಪಕುಮಾರ ಚಿಂಚೆನಸೂರೆ, ಪ್ರದೀಪ ವಾತಡೆ, ಗಣೇಶ ಚಿಂಚೋಳಿ, ಶಿವಕಾಂತ ಸ್ವಾಮಿ. ಅನೇಕ ಕನ್ನಡಿಗರು ಅಭಿನಂದಿಸಿದ್ದಾರೆ.