ರಾಜ್ಯಾದ್ಯಂತ ’ಟ್ರಾಫಿಕ್ ಸ್ಪಾಟ್ ಫೈನ್’ ಕ್ಯಾನ್ಸಲ್; ಗೃಹ ಸಚಿವ ಆರಗ ಜ್ಞಾನೇಂದ್ರ ಆದೇಶ

ರಾಜ್ಯಾದ್ಯಂತ ’ಟ್ರಾಫಿಕ್ ಸ್ಪಾಟ್ ಫೈನ್’ ಕ್ಯಾನ್ಸಲ್; ಸಚಿವ ಆರಗ ಜ್ಞಾನೇಂದ್ರ ಆದೇಶ

ಬೆಂಗಳೂರು: ವಾಹನ ಸವಾರರಿಗೆ ಗೃಹ ಸಚಿವ ಆರಗ ಜ್ಞಾನೆಂದ್ರ ಭರ್ಜರಿ ಸಿಹಿಸುದ್ದಿ ನೀಡಿದ್ದು, ಬೆಂಗಳೂರು ಸೇರಿ ರಾಜ್ಯಾದ್ಯಂತ ಟ್ರಾಫಿಕ್ ಸ್ಪಾಟ್ ಫೈನ್ ಕ್ಯಾನ್ಸಲ್ ಮಾಡುವಂತೆ ಪೊಲೀಸ್ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.

ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ವಾಹನಗಳನ್ನು ಅಡ್ಡಗಟ್ಟಿ ಸ್ಪಾಟ್ ಫೈನ್ ಕಲೆಕ್ಷನ್ ಮಾಡದಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಟ್ರಾಫಿಕ್ ಪೊಲೀಸರು ಬಳಸುತ್ತಿದ್ದ ಮಷಿನ್ ಗಳನ್ನು ಆಯಾ ಪೊಲೀಸ್ ಠಾಣೆಗಳಲ್ಲಿ ಸರಂಡರ್ ಮಾಡಲು ಸೂಚನೆ ನೀಡಿದ್ದಾರೆ.

ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿದ ವಾಹನ ಸವಾರರಿಗೆ ಪೊಲೀಸರು ಪಿಡಿಎ ಮಷಿನ್ ಗಳನ್ನು ಬಳಸಿ ಸ್ಪಾಟ್ ಫೈನ್ ಕಲೆಕ್ಷನ್ ಮಾಡುತ್ತಿದ್ದರು. ಪಿಡಿಎ ಮಷಿನ್ ಗಳ ವಿರುದ್ಧ ಸಾರ್ವಜನಿಕರಿಂದ ದೂರು ಬರ್ತಿತ್ತು. ಫೈನ್ ಕಟ್ಟಿದ್ರೂ, ಮಷಿನ್ ಗಳು ಹಿಂದಿನ ದಾಖಲೆಯನ್ನೇ ತೋರಿಸುತ್ತಿದ್ದವು. ಈ ಸಂಬಂಧ ಮಾಹಿತಿ ಪಡೆದಿದ್ದ ಗೃಹ ಸಚಿವ ಆರಜ ಜ್ಞಾನೇಂದ್ರ ಇದೀಗ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಟ್ರಾಫಿಕ್ ಸ್ಪಾಟ್ ಫೈನ್ ಕ್ಯಾನ್ಸಲ್ ಮಾಡುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಟ್ರಾಫಿಕ್ ಜಂಟಿ ಆಯುಕ್ತ ರವಿಕಾಂತೇಗೌಡ, ತಾತ್ಕಾಲಿಕವಾಗಿ ಪಿಡಿಎ ಮಷಿನ್ ಗಳ ಮೂಲಕ ಫೈನ್ ನಿಲ್ಲಿಸಲಾಗಿದ್ದು, ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ರೆ ಡಿಜಿಟಲ್ ಕ್ಯಾಮೆರಾದಲ್ಲಿ ಸೆರೆಯಾಗಲಿದೆ. ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ರೆ ಫೈನ್ ರೆಸಿಪ್ಟ್ ಮನೆಗೆ ಬರಲಿದೆ ಎಂದು ತಿಳಿಸಿದ್ದಾರೆ.

 

 

ಬೆಂಗಳೂರು ನಗರ ಸಂಚಾರಿ ಆಯುಕ್ತರಿಂದ ಸ್ಪಷ್ಟೀಕರಣ.

 

ರಾಜ್ಯಾದ್ಯಂತ ಸಂಚಾರಿ ಪೊಲೀಸರು ವಿಧಿಸುತ್ತಿದ್ದ ಕ್ಯಾನ್ಸಲ್ ಆಗಿದೆ ಎನ್ನುವ ಸುದ್ದಿ ಜೊತೆ ಪಿಡಿಎ ಡಿವೈಸ್ ಗಳನ್ನು ಹಿಂಪಡೆಯಲಾಗಿದೆ ಎಂದು ಮಾಧ್ಯಮದಲ್ಲಿ ಸುದ್ದಿಗಳು ಹರಿದಾಡುತ್ತಿವೆ ಆದರೆ ಇದಕ್ಕೆ ಸಂಬಂಧಿಸಿದಂತೆ ಕೆಲವು ವಿಷಯಗಳು ಸತ್ಯಕ್ಕೆ ದೂರವಾಗಿದ್ದು ಇದುವರೆಗೂ ಯಾವುದೇ ಪಿಡಿಎ ಡಿವೈಸ್ ಗಳನ್ನು ಹಿಂಪಡೆಯಲಾಗಿಲ್ಲ ಬೆಂಗಳೂರು ಸಂಚಾರಿ ಪೊಲೀಸ್ ಆಯುಕ್ತರಾದ ರವಿಕಾಂತೇಗೌಡ ರವರು ಸ್ಪಷ್ಟೀಕರಣ ನೀಡಿದ್ದಾರೆ.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version