ಮೈಸೂರಿನ ಯುವಕನ ಮೃತದೇಹಕ್ಕೆ ಸಾಲುಗಟ್ಟಿ ನಿಂತು ಸಲ್ಯೂಟ್ ಮಾಡಿದ ಸಂಪೂರ್ಣ ಆಸ್ಪತ್ರೆ..

 

ಮೈಸೂರಿನ ಯುವಕನ ಮೃತದೇಹಕ್ಕೆ ಸಾಲುಗಟ್ಟಿ ನಿಂತು ಸಲ್ಯೂಟ್ ಮಾಡಿದ ಸಂಪೂರ್ಣ ಆಸ್ಪತ್ರೆ.. ಕಾರಣವೇನು ಗೊತ್ತಾ? ಮೈ ಜುಮ್ಮೆನ್ನುವ ಕತೆ ನೋಡಿ..

 

ನಾವುಗಳು ಸಿನಿಮಾಗಳಲ್ಲಿ ಧಾರಾವಾಹಿಗಳಲ್ಲಿ ಅಥವಾ ದೊಡ್ಡ ದೊಡ್ಡ ಸಾಧನೆ ಮಾಡಿದವರನ್ನು ಮಾತ್ರ ಹೀರೋ ಗಳು ಎಂದುಕೊಳ್ಳುತ್ತೇವೆ.. ಆದರೆ ನಿಜ ಹೇಳಬೇಕೆಂದರೆ ನಮ್ಮ ನಮ್ಮ ಸುತ್ತಮುತ್ತಲೇ ಅದೆಷ್ಟೋ ಜನ ಹೀರೋಗಳಿರುತ್ತಾರೆ.. ಯಾವುದೇ ನಿರೀಕ್ಷೆ ಇಲ್ಲದೆ ನಿಸ್ವಾರ್ಥವಾಗಿ ಮತ್ತೊಬ್ಬರಿಗೆ ನೆರವಾಗುತ್ತಲೇ ಇರುತ್ತಾರೆ.. ಅಂತವರಲ್ಲಿ ಒಬ್ಬ ಚಂದನ್.. ಇದೀಗ ಆತನಿಲ್ಲದಿರಬಹುದು ಆದರೆ ಆತನ ಮೃತದೇಹಕ್ಕೆ ಇಡೀ ಆಸ್ಪತ್ರೆಯೇ ಸಾಲುಗಟ್ಟಿ ನಿಂತು ಸಲ್ಯೂಟ್ ಮಾಡಿದೆ..

ಹೌದು ಆತನ ಹೆಸರು ಚಂದನ್ ಮಲ್ಲಪ್ಪ.. ವೃತ್ತಿಯಲ್ಲಿ ಇಂಜಿನಿಯರ್.. ಮೈಸೂರಿನ ಮಧ್ಯಮ ವರ್ಗದ ಕುಟುಂಬದವ.. ಬದುಕಿದ್ದಾಗ ಸ್ನೇಹಿತರಿಗಾಗಲಿ ಸಂಬಂಧಿಕರಿಗಾಗಲಿ ಕಷ್ಟ ಎಂದ ಕೂಡಲೇ ನೆರವಾಗುತ್ತಿದ್ದವ.. ನೋಡಲು ಯಾವ ಹೀರೋಗೂ ಕಡಿಮೆ ಇಲ್ಲವೆನ್ನುವಷ್ಟು ಚೆನ್ನಾಗಿದ್ದವ.‌ ಆದರೆ ಭಗವಂತನ ನಿರ್ಣಯ ಬೇರೆಯೇ ಇತ್ತೇನೋ..

ಕೆಲ ದಿನಗಳ ಹಿಂದಷ್ಟೇ ಅಪಘಾತಕ್ಕೀಡಾದ ಚಂದನ್ ನನ್ನು ಮೈಸೂರಿನ ಅಪೋಲೋ ಬಿಜಿಎಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.. ಎರಡು ದಿನಗಳ ಕಾಲ ಕೃತಕ ಉಸಿರಾಟದ ವ್ಯವಸ್ಥೆ ಮಾಡಿ ಚಿಕಿತ್ಸೆ ನೀಡಲಾಗುತಿತ್ತು.. ಆದರೆ ಬ್ರೈನ್ ನಿಷ್ಕ್ರಿಯ ಗೊಂಡ ಕಾರಣ ವಿಚಾರವನ್ನು ಮನೆಯವರಿಗೆ ತಿಳಿಸಲಾಯಿತು..

ಚಂದನ್ ಅವರ ತಾಯಿ ನಿಜಕ್ಕೂ ಗಟ್ಟಿಗಿತ್ತಿ ಎನ್ನಲೇಬೇಕು.. ಇದ್ದ ಒಬ್ಬ ಮಗನನ್ನು ಕಳೆದುಕೊಂಡರೂ ಅವನು ಇದ್ದಷ್ಟು ದಿನ ಮತ್ತೊಬ್ಬರಿಗೆ ನೆರವಾಗಿಯೇ ಬದುಕಿದ.. ಈಗಲೂ ಆತನಿಂದ ಇನ್ನೊಬ್ಬರಿಗೆ ನೆರವಾಗಲೆಂದು ಆತನಿಂದ ನೀಡಬಹುದಾದ ಎಲ್ಲಾ ಅಂಗಾಂಗವನ್ನು ದಾನ ಮಾಡುವ ನಿರ್ಧಾರ ತೆಗೆದುಕೊಂಡರು.. ಅದೇ ರೀತಿ ಕುಂಟುಂಬದ ನಿರ್ಣಯಕ್ಕೆ ಸಮ್ಮತಿಸಿದ ಆಸ್ಪತ್ರೆ ಚಂದನ್ ರ ಅಂಗಾಂಗಗಳನ್ನು ಬಳಸಿ ನಾಲ್ಕು ಜನರ ಪ್ರಾಣ ಉಳಿಸಿದರು.. ಚಂದನ್ ರ ಅಂತಿಮ ಯಾತ್ರೆ ಅರ್ಥಪೂರ್ಣವಾಗುವಂತೆ ಮಾಡಿದರು..

ಈ ಬಗ್ಗೆ ಮಾದ್ಯಮದ ಜೊತೆ ಚಂದನ್ ಕುಟುಂಬ ಮಾತನಾಡುವಾಗ ಚಂದನ್ ತಾಯಿ ಮಾತ್ರ ದುಃಖವನ್ನೆಲ್ಲಾ ಒಡಲಲ್ಲಿ ಇಟ್ಟುಕೊಂಡು ಒಂದೂ ಮಾತನಾಡದೇ ಧೃಡವಾಗಿ ಕೂತಿದ್ದು ಮನಕಲಕುವಂತಿತ್ತು.. ಚಂದನ್ ನ ಈ ಅನಿರೀಕ್ಷಿತ ಘಟನೆಗೆ ಸ್ನೇಹಿತರು ಕುಟುಂಬಸ್ಥರು ಪ್ರತಿಯೊಬ್ಬರೂ ಸಹ ಕಂಬನಿ ಮಿಡಿದಿದ್ದಾರೆ.. ಆದರೆ ಸಾವಿನಲ್ಲೂ ಸಾರ್ಥಕತೆ ಮೆರೆದ ಸ್ನೇಹಿತನ ಬಗ್ಗೆ ಹೆಮ್ಮೆಯೂ ಪಟ್ಟಿದ್ದಾರೆ..

ಇನ್ನು ತಾ ಹೋದರೂ ನಾಲ್ಕು ಜನರ ಪ್ರಾಣ ಉಳಿಸಿದ ಚಂದನ್ ರನ್ನು ಅಂತಿಮವಾಗಿ ಆಸ್ಪತ್ರೆಯಿಣ್ದ ಕರೆದೊಯ್ಯುವ ಸಮಯದಲ್ಲಿ ಆಸ್ಪತ್ರೆಯ ಪ್ರತಿಯೊಬ್ಬ ಸಿಬ್ಬಂದಿಯೂ ಹಾಜರಾಗಿ ಚಂದನ್ ಗೆ ಎದ್ದು ನಿಂತು ಸಲ್ಯೂಟ್ ಮಾಡುವ ಮೂಲಕ ಗೌರವ ಅರ್ಪಿಸಿದ್ದಾರೆ.. ದೊಡ್ಡ ವೈದ್ಯರಿಣ್ದ ಹಿಡಿದು ಆಸ್ಪತ್ರೆಯ ಪ್ರತಿಯೊಬ್ಬ ಸಿಬ್ಬಂದಿಯೂ ಹಾಗೂ ಸಾರ್ವಜನಿಕರೂ ಸಹ ಸಾಲುಗಟ್ಟಿ ನಿಂತು ಗೌರವ ಅರ್ಪಿಸಿದ ದೃಶ್ಯ ನಿಜಕ್ಕೂ ಮೈಜುಮ್ಮೆನ್ನುವಂತಿತ್ತು.. ಚಂದನ್ ಗೆ ಸಂಬಂಧವಿಲ್ಲದ ಅದೆಷ್ಟೋ ಜನರು ಅಲ್ಲಿ ನಿಂತಿದ್ದರು.. ಪ್ರತಿಯೊಬ್ಬರ ಮನಸ್ಸಿನಲ್ಲಿಯೂ ದೇವರಲ್ಲಿ ಪ್ರಾರ್ಥನೆ ಮಾಡಿದ್ದು ಮಾತ್ರ ಒಂದೇ..‌ ಮತ್ತೊಮ್ಮೆ ಹುಟ್ಟಿ ಬಾ ಗೆಳೆಯ ಎಂದು.. ..

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version