ಮೈಸೂರು ಹೃದಯಭಾಗದಲ್ಲಿರುವ ಕೆ.ಆರ್.ವೃತ್ತದಲ್ಲಿರುವ ಕೃಷ್ಣರಾಜೇಂದ್ರ ಒಡೆಯರ್ ಅವರ ಪ್ರತಿಮೆಯ ಮುಖಕ್ಕೆ ಜೇನುಹುಳು ಗೂಡನ್ನು ಕಟ್ಟಿಕೊಂಡಿದೆ.
ಸಾರ್ವಜನಿಕರು ಪ್ರತಿದಿನ ಬೆಳಿಗ್ಗೆ ಈ ಭಾಗದಲ್ಲಿ ವಾಯುವಿಹಾರಕ್ಕಾಗಿ ತೆರಳಲಿದ್ದು ಯಾರಾದರೂ ಕಿಡಿಗೇಡಿಗಳು ಅಕಸ್ಮಾತ್ ಕಲ್ಲು ಬಿಸಾಡಿದಲ್ಲಿ ಹುಳುಗಳು ರೊಚ್ಚಿಗೆದ್ದು ದಾಳಿ ನಡೆಸುವ ಸಾಧ್ಯತೆ ಇದೆ. ನಗರದ ಹೃದಯಭಾಗವಾಗಿರುವುದರಿಂದ, ವಾಹನಗಳ ಓಡಾಟವೂ ಹೆಚ್ಚಿರುವುದರಿಂದ ಪಾದಚಾರಿಗಳು ತೊಂದರೆಗೆ ಸಿಲುಕುವ ಸಾದ್ಯತೆ ಇದೆ. ಕೋವಿಡ್ -19 ಬಳಿಕ ಕಳೆದೆರಡು ತಿಂಗಳಿನಿಂದ ಮೈಸೂರಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯಲ್ಲಿಯೂ ಹೆಚ್ಚಳ ಕಂಡು ಬಂದಿದ್ದು, ನಗರದ ಹೃದಯ ಭಾಗದಲ್ಲಿರುವ ಒಡೆಯರ್ ಪ್ರತಿಮೆಯ ಮುಖಕ್ಕೆ ಜೇನುಗೂಡು ಕಟ್ಟಿರುವುದರಿಂದ ಮುಖದ ಭಾಗ ಸಂಪೂರ್ಣ ಕಪ್ಪಾಗಿ ಕಾಣಿಸುತ್ತಿದ್ದು, ಪ್ರತಿಮೆಯ ಮುಖವೇ ಗೋಚರಿಸದಾಗಿದೆ. ಇದರಿಂದ ಪ್ರತಿಮೆ ಕುರೂಪವಾಗಿ ಕಾಣಲಿದ್ದು, ಶೀಘ್ರದಲ್ಲಿ ಜೇನುಗೂಡನ್ನು ಸಂಬಂಧಪಟ್ಟವರು ತೆರವುಗೊಳಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.