ಉಕ್ರೇನ್ ಯುದ್ಧದ ನಡುವೆ ಹಸಿದವರ ಹೊಟ್ಟೆಗೆ ಆಸರೆಯಾದ ಬಾಳೆಹಣ್ಣಿನ ಕಥೆ.
ತುಮಕೂರು_ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧ ತಾರಕಕ್ಕೆ ಏರಿದ್ದು ಉಕ್ರೇನ್ ಮೇಲೆ ಹಿಡಿತ ಸಾಧಿಸಲು ರಷ್ಯಾ ಉಕ್ರೇನ್ ಮೇಲೆ ನಿರಂತರ ದಾಳಿ ಮಾಡುತ್ತಿದ್ದು.
ಉಕ್ರೇನ್ ದೇಶದಲ್ಲಿರುವ ನಾಗರಿಕರು ಜೀವ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ.
ಇಂತಹ ಸಂದರ್ಭದಲ್ಲಿ ತುಮಕೂರು ಜಿಲ್ಲೆಯಿಂದ ಉಕ್ರೇನ್ ದೇಶಕ್ಕೆ ವಿದ್ಯಾಭ್ಯಾಸಕ್ಕಾಗಿ ತೆರಳಿರುವ ವಿದ್ಯಾರ್ಥಿಗಳು ಜೀವ ಉಳಿಸಿಕೊಂಡು ಸ್ವದೇಶಕ್ಕೆ ಆಗಮಿಸಲು ಪರದಾಡುತ್ತಿದ್ದು.
ಇದಕ್ಕೆ ಸಂಬಂಧಿಸಿದಂತೆ ತುಮಕೂರಿನ ಮಧುಗಿರಿ ಪಟ್ಟಣದ ಪೋಷಕರೊಬ್ಬರು ಜಿಲ್ಲಾಧಿಕಾರಿ ವೈ ಎಸ್ ಪಾಟೀಲ್ ಅವರೊಂದಿಗೆ ಮಾತನಾಡಿ ವಿದೇಶದಲ್ಲಿರುವ ಮಕ್ಕಳನ್ನು ಶೀಘ್ರವೇ ಕರೆತರಲು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಮಧುಗಿರಿ ಮೂಲದ ಪೋಷಕರು ಲತಾ ಎಂಬುವವರು ಉಕ್ರೇನ್ ದೇಶದಲ್ಲಿ ತಮ್ಮ ಮಕ್ಕಳು ಯಾವ ರೀತಿ ಕಷ್ಟದ ಪರಿಸ್ಥಿತಿಯಲ್ಲಿ ಇದ್ದಾರೆ ಎನ್ನುವ ಬಗ್ಗೆ ಮಾಹಿತಿ ನೀಡಿದ್ದು ಎಲ್ಲರಲ್ಲೂ ಕಣ್ಣೀರು ತರಿಸುವಂತಿತ್ತು.
ಉಕ್ರೇನ್ ದೇಶದಲ್ಲಿರುವ ತಮ್ಮ ಮಕ್ಕಳು ಕಾರ್ಕಿವ್ ಪಟ್ಟಣದಲ್ಲಿಯ ಬಂಕರ್ ನಲ್ಲಿ ಅಡಗಿ ಕುಳಿತಿದ್ದು ಒಪ್ಪತ್ತಿನ ಊಟಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ನನ್ನ ಮಗನ ಜೊತೆ ಇರುವ ಸ್ನೇಹಿತರು ಹಸಿವು ನೀಗಿಸಿಕೊಳ್ಳಲು ಇದ್ದ ಒಂದು ಬಾಳೆಹಣ್ಣನ್ನು 11 ಜನ ಹಂಚಿತಿನ್ನುವ ಮೂಲಕ ಹಸಿವನ್ನು ನೀಗಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ ಎಂದು ಜಿಲ್ಲಾಧಿಕಾರಿಗಳ ಬಳಿ ಅಳಲು ತೋಡಿಕೊಂಡಿದ್ದಾರೆ.
ಅದೇನೇ ಇರಲಿ ರಷ್ಯಾದ ಯುದ್ಧದ ದಾಹಕ್ಕೆ ಅಲ್ಲಿನ ನಾಗರಿಕರು ತತ್ತರಿಸಿದ್ದಾರೆ ಎಂಬುದನ್ನು ಸಾರಿ …….ಸಾರಿ…….. ಹೇಳುತ್ತಿದೆ………
ವರದಿ -ಮಾರುತಿ ಪ್ರಸಾದ್ ತುಮಕೂರು