ಮುಂದಿನ ಆರು ತಿಂಗಳಲ್ಲಿ ರಿಂಗ್ ರಸ್ತೆ ಕಾಮಗಾರಿ ಪೂರ್ಣ _ಟೂಡ ಅಧ್ಯಕ್ಷ ಬಾವಿಕಟ್ಟೆ ನಾಗಣ್ಣ.
ತುಮಕೂರು_ಮುಂದಿನ ಆರು ತಿಂಗಳಿನಲ್ಲಿ ಗುಬ್ಬಿ ಗೇಟ್ ಸರ್ಕಲ್ ಇಂದ ಶಿರಾ ಗೇಟ್ ವರೆಗೂ ಬಾಕಿ ಉಳಿದಿರುವ ರಿಂಗ್ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು ಎಂದು ಟೂಡಾ ಅಧ್ಯಕ್ಷ ಬಾವಿಕಟ್ಟೆ ನಾಗಣ್ಣ ತಿಳಿಸಿದರು.
ತುಮಕೂರಿನ ಗುಬ್ಬಿ ಗೇಟಿನ ರಿಂಗ್ ರಸ್ತೆಯಿಂದ ದಿಬ್ಬೂರು ಸರ್ಕಲ್ ವರೆಗಿನ ರಸ್ತೆ ಅಗಲೀಕರಣ ಮಾಡಲಾಗುತ್ತಿದೆ ಎಂದರು.
ಸುಮಾರು 30 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ರಸ್ತೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದ್ದು ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ರಸ್ತೆ ಅಭಿವೃದ್ಧಿಗೆ ಜಾಗವನ್ನು ಗುರುತಿಸಲಾಗಿದ್ದು 2012ರಲ್ಲಿ ಸರ್ಕಾರದ ಆದೇಶದಂತೆ ರೈತರಿಗೆ ಹಾಗೂ ಕಟ್ಟಡ ಮಾಲೀಕರಿಗೆ ಹಣ ಬಿಡುಗಡೆ ಮಾಡಲಾಗಿದ್ದು ಅದರಂತೆ ರಸ್ತೆ ಅಭಿವೃದ್ಧಿಗೆ ಜಾಗವನ್ನು ಗುರುತಿಸಿರುವ ಮಾಲೀಕರಿಗೆ ಹಣವನ್ನು ನೀಡಲಾಗಿದ್ದು ಈಗ ಬಾಕಿ ಉಳಿದಿದ್ದ ರಿಂಗ್ ರಸ್ತೆ ಕಾಮಗಾರಿ ಅಭಿವೃದ್ದಿ ಪಡಿಸಲಾಗುತ್ತಿದೆ ಎಂದರು.
ಇನ್ನು ಗುಬ್ಬಿ ಗೇಟಿನಿಂದ ಸಿರಾಗೇಟ್ ವರೆಗೂ ರಸ್ತೆ ಅಗಲೀಕರಣಕ್ಕೆ ಸರ್ಕಾರದಿಂದ ಹಣ ಬಿಡುಗಡೆಯಾಗಿದ್ದು ಅದನ್ನ ರೈತರು ಪಡೆದಿದ್ದಾರೆ ಇಂದು ರಸ್ತೆ ಅಗಲೀಕರಣಕ್ಕೆ ಎಲ್ಲರೂ ಸಹಕರಿಸುತ್ತಿದ್ದು ಇದಕ್ಕೆ ಸಂಬಂಧಿಸಿದಂತೆ ರೈತರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಇನ್ನು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ಅವಧಿಯಲ್ಲಿ ಹಣ ಬಿಡುಗಡೆ ಮಾಡಿದ್ದರು ಈಗ ತುಮಕೂರು ಸ್ಮಾರ್ಟ್ ಸಿಟಿ ವತಿಯಿಂದ 8 ಕೋಟಿ ವೆಚ್ಚದಲ್ಲಿ ರಸ್ತೆ ,ಚರಂಡಿ ಹಾಗೂ ಸರ್ವಿಸ್ ರಸ್ತೆ ನಿರ್ಮಾಣ ಮಾಡಲಾಗುತ್ತಿದ್ದು ಸುಮಾರು 165 ಅಡಿಗಳಿಗೆ ರಸ್ತೆ ಅಭಿವೃದ್ಧಿಪಡಿಸಲಾಗುತ್ತಿದೆ ಎಂದರು.
ಇದಕ್ಕೆ ಸಂಬಂಧಿಸಿದಂತೆ ದಿಬ್ಬೂರು ಗೇಟ್ ಬಳಿ ಸುಮಾರು 70 ಮೀಟರ್ (200ಅಡಿ)ಅಗಲದಲ್ಲಿ ಸರ್ಕಲ್ ನಿರ್ಮಾಣ ಮಾಡಲಾಗುತ್ತಿದ್ದು ಸರ್ಕಲ್ ನಿರ್ಮಾಣಕ್ಕೆ ಸಾರ್ವಜನಿಕರು ಸಹಕರಿಸುತ್ತಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಮುಖಂಡರಾದ ರಾಜಣ್ಣ ಸೇರಿದಂತೆ ಸಾರ್ವಜನಿಕರು ಹಾಜರಿದ್ದರು
ವರದಿ_ ಮಾರುತಿ ಪ್ರಸಾದ್ ತುಮಕೂರು