ಸಂವಿಧಾನ ಸಮರ್ಪಣ ದಿನಾಚರಣೆಯನ್ನು ಆಚರಿಸದ ಗ್ರಾಮ ಪಂಚಾಯತ್ ವಿರುದ್ಧ ದಲಿತ ಸಂಘಟನೆಗಳ ಆಕ್ರೋಶ.

ಸಂವಿಧಾನ ಸಮರ್ಪಣ ದಿನಾಚರಣೆಯನ್ನು ಆಚರಿಸದ ಗ್ರಾಮ ಪಂಚಾಯತ್ ವಿರುದ್ಧ ದಲಿತ ಸಂಘಟನೆಗಳ ಆಕ್ರೋಶ.

 

ದೇಶಾದ್ಯಂತ ಇಂದು ಬಾಬಾಸಾಹೇಬ್ ಅಂಬೇಡ್ಕರ್ ಅವರು ಬರೆದ ಸಂವಿಧಾನವನ್ನು ಸಮರ್ಪಿಸಿದ ದಿನಾಚರಣೆಯ ಅಂಗವಾಗಿ ಸಮರ್ಪಣಾ ದಿನಾಚರಣೆಯನ್ನು ದೇಶಾದ್ಯಂತ ಸಂಭ್ರಮ-ಸಡಗರದಿಂದ ಆಚರಿಸಲಾಗುತ್ತಿದೆ.

 

 

ಆದರೆ ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಚೇಳೂರು ಗ್ರಾಮ ಪಂಚಾಯತ್ ಮಾತ್ರ ಇದಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದು ಗ್ರಾಮ ಪಂಚಾಯತ್ ಅಧಿಕಾರಿಗಳ ವಿರುದ್ಧ ದಲಿತ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ದಲಿತರ ಏಳಿಗೆಗೆ ಹಾಗೂ ದೇಶದ ಸಾರ್ವಜನಿಕರಿಗೆ ಮೂಲಭೂತ ಹಕ್ಕುಗಳ ಗ್ರಂಥವಾಗಿ ಸಂವಿಧಾನವನ್ನು ರಚಿಸಿ ಎಲ್ಲರೂ ಸಮಬಾಳು ಸಹಬಾಳ್ವೆ ಎಂತೆ ದೇಶದ ಪ್ರತಿಯೊಬ್ಬ ನಾಗರಿಕನು ಸರಿಸಮನಾಗಿ ಬದುಕಲು ಅಂಬೇಡ್ಕರ್ ಅವರ ಸಂವಿಧಾನ ಪ್ರಮುಖ ಪಾತ್ರವಹಿಸುತ್ತದೆ ಆದರೆ ಇಂತಹ ಸಂವಿಧಾನವನ್ನು ಸಮರ್ಪಿಸಿದ ದಿನಾಚರಣೆಯನ್ನು ಆಚರಿಸದೆ ಅಂಬೇಡ್ಕರ್ ಅವರಿಗೆ ಅವಮಾನ ಎಸಗಲಾಗಿದೆ ಎಂದು ದಲಿತ ಸಂಘಟನೆಗಳು ಚೇಳೂರಿನಲ್ಲಿ ಗ್ರಾಮ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿದರು.

 

 

ಇನ್ನು ಪ್ರತಿಭಟನೆಯ ನಂತರ ಎಚ್ಚೆತ್ತುಕೊಂಡ ಅಧಿಕಾರಿಗಳು ಮಧ್ಯಾಹ್ನ ಗ್ರಾಮ ಪಂಚಾಯತ್ ನಲ್ಲಿ ಸಂವಿಧಾನ ಸಮರ್ಪಣಾ ದಿನಾಚರಣೆ ಯನ್ನು ಆಚರಿಸಿದರು ನಂತರ ಮಾತನಾಡಿದ ಗ್ರಾಮಪಂಚಾಯತ್ನ ಅಧಿಕಾರಿ ಮಾಹಿತಿ ಕೊರತೆಯಿಂದ ಈ ಘಟನೆ ನಡೆದಿದ್ದು ಮುಂದಿನ ದಿನದಲ್ಲಿ ಈ ತರಹದ ಘಟನೆ ನಡೆಯದಂತೆ ಎಚ್ಚರ ವಹಿಸಲಾಗುವುದು ಈ ಸಂಬಂಧ ಎಲ್ಲರಲ್ಲಿ ಕ್ಷಮೆ ಕೋರುತ್ತೇನೆ ಎಂದು ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ.

 

 

ನಂತರ ಗ್ರಾಮ ಪಂಚಾಯಿತಿ ಅಧ್ಯಕ್ಷರು ಸದಸ್ಯರು ಹಾಗೂ ಅಧಿಕಾರಿಗಳು ಸೇರಿದಂತೆ ಗ್ರಾಮ ಪಂಚಾಯತಿಯಲ್ಲಿ ಸರಳವಾಗಿ ಸಂವಿಧಾನ ಸಮರ್ಪಣಾ ದಿನಾಚರಣೆಯನ್ನು ಆಚರಿಸಲಾಯಿತು ಈ ಸಂದರ್ಭದಲ್ಲಿ ಅಂಬೇಡ್ಕರ್ ಸೇನೆಯ ನರಸಿಂಹಮೂರ್ತಿ, ದಲಿತ ಸಂಘರ್ಷ ಸಮಿತಿಯ ವೆಂಕಟೇಶ್ ,ಅಮರ್, ಸೋಮಶೇಖರ್ ,ಶಿವನಂಜಪ್ಪ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಹಾಜರಿದ್ದರು.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version