ಬಾಬಾಸಾಹೇಬ್ ಅಂಬೇಡ್ಕರ್ ದಮನಿತರ ಧ್ವನಿಯಾಗಿದ್ದರು: ಇಕ್ಬಾಲ್ ಅಹಮದ್ ಬಣ್ಣನೆ

ಬಾಬಾಸಾಹೇಬ್ ಅಂಬೇಡ್ಕರ್ ದಮನಿತರ ಧ್ವನಿಯಾಗಿದ್ದರು: ಇಕ್ಬಾಲ್ ಅಹಮದ್ ಬಣ್ಣನೆ

ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ದಮನಿತರ ಧ್ವನಿಯಾಗಿದ್ದು ಶೋಷಣೆಯ ವಿರುದ್ಧ ಸಮರ ಸಾರಿದ ಧೀಮಂತ ನಾಯಕ ಎಂದು ನಗರದ ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಇಕ್ಬಾಲ್ ಅಹಮದ್ ಬಣ್ಣಿಸಿದರು.

 

ಅವರು ಮಹಾನಗರ ಪಾಲಿಕೆ ಕಚೇರಿ ಆವರಣದಲ್ಲಿ ಜಾತ್ಯತೀತ ಸಂಘಟನೆಗಳ ಒಕ್ಕೂಟ ಅಂಬೇಡ್ಕರ್ ಪ್ರಚಾರ ಸಮಿತಿ ಹಾಗೂ ಜಿಲ್ಲಾ ದಲಿತ ಸಂಘರ್ಷ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಸಂವಿಧಾನ ಸಮರ್ಪಣಾ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿ ಬಾಬಾಸಾಹೇಬ್ ಅಂಬೇಡ್ಕರ್ ಅವರು ಶತಶತಮಾನಗಳಿಂದ ರೂಢಿಯಲ್ಲಿರುವ ಜಾತೀಯತೆ ಅಸ್ಪೃಶ್ಯತೆಯ ವಿರುದ್ಧ ಸಮರ ಸಾರಿ ಶೋಷಿತರ ಮತ್ತು ದಮನಿತರ ಧ್ವನಿಯಾಗಿ ನಿಂತ ಮಹಾನ್ ಪುರುಷ. ದೇಶಕ್ಕೆ ಸಂವಿಧಾನ ವೆಂಬ ಮಹಾಗ್ರಂಥವನ್ನು ನೀಡುವುದರ ಮೂಲಕ ಸರ್ವಕಾಲಿಕ ಕಾನೂನುಗಳನ್ನು ರಚಿಸಿ ಸಮಾನತೆಯ ಬೀಜವನ್ನು ಬಿತ್ತಿ ಸರ್ವರಿಗೂ ಸಮಾನವಾದ ಅವಕಾಶ ಒದಗಿಸಿದ ನಿಜವಾದ ಕ್ರಾಂತಿಪುರುಷ. ಇಂದು ನಮ್ಮ ದೇಶದ ಸಂವಿಧಾನವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಅಧ್ಯಯನ ವಿಷಯವಾಗಿ ತೆಗೆದುಕೊಂಡು ಅದರಲ್ಲಿರುವ ಉತ್ತಮ ಅಂಶಗಳನ್ನು ಬೇರೆ ದೇಶಗಳು ಅಳವಡಿಸಿಕೊಳ್ಳುತ್ತಿರುವುದು ನಮ್ಮ ದೇಶಕ್ಕೆ ಹೆಮ್ಮೆಯ ವಿಷಯವಾಗಿದೆ.

ನಮ್ಮ ದೇಶ ಸಂವಿಧಾನವನ್ನು ಅಧಿಕೃತವಾಗಿ ಅಂಗೀಕರಿಸಿದ್ದರ ನೆನಪಿಗಾಗಿ ಇಂದು ಸಂವಿಧಾನ ದಿನ ಅಥವಾ ಸಂವಿಧಾನ ಸಮರ್ಪಣಾ ದಿನ ಎಂದು ಆಚರಣೆ ಮಾಡುತ್ತಿದ್ದು ಈ ದೇಶದ ಜನರೆಲ್ಲರೂ ಬಾಬಾ ಸಾಹೇಬರ ಸಂವಿಧಾನದ ಆಶಯಗಳಿಗೆ ತಕ್ಕಂತೆ ಜೀವನ ನಡೆಸುವ ಹಾಗೂ ಸಂವಿಧಾನವನ್ನು ಸಂರಕ್ಷಿಸುವ ಕೆಲಸ ಮಾಡಬೇಕೆಂದು ಕರೆನೀಡಿದರು.

 

ಈ ಸಂದರ್ಭದಲ್ಲಿ ಪಾಲಿಕೆಯ ವಿರೋಧಪಕ್ಷದ ನಾಯಕ ಜೆ‌.ಕುಮಾರ್ ಡಾ. ಅಂಬೇಡ್ಕರ್ ಪ್ರಚಾರ ಸಮಿತಿಯ ಅಧ್ಯಕ್ಷ ನಿಧಿ ಕುಮಾರ್ ದಲಿತ ಜಿಲ್ಲಾ ಸಂಘರ್ಷ ಸಮಿತಿ ಅಧ್ಯಕ್ಷ ಪಿ.ಎನ್. ರಾಮಯ್ಯ ಸೇರಿದಂತೆ ದಲಿತ ಪರ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version