ಕೊರಟಗೆರೆ ವಿ.ಸ ಕ್ಷೇತ್ರಕ್ಕೂ ಹಬ್ಬಿದ ಫ್ಲಕ್ಸ್ ಚಟಾಪಟಿ ಮಾಜಿ ಉಪಮುಖ್ಯಮಂತ್ರಿ ಡಾಕ್ಟರ್ ಜಿ ಪರಮೇಶ್ವರ್ ರವರ ಫ್ಲೆಕ್ಸ್ ಹರಿದು ಉದ್ದಟತನ…??

ಕೊರಟಗೆರೆ ವಿ.ಸ ಕ್ಷೇತ್ರಕ್ಕೂ ಹಬ್ಬಿದ ಫ್ಲಕ್ಸ್ ಚಟಾಪಟಿ ಮಾಜಿ ಉಪಮುಖ್ಯಮಂತ್ರಿ ಡಾಕ್ಟರ್ ಜಿ ಪರಮೇಶ್ವರ್ ರವರ ಫ್ಲೆಕ್ಸ್ ಹರಿದು ಉದ್ದಟತನ…??

 

 

ತುಮಕೂರು – ರಾಜ್ಯದ್ಯಂತ ಸಾರ್ವತ್ರಿಕ ಚುನಾವಣೆ ಹತ್ತಿರವಾಗುತ್ತಿದ್ದಂತೆ ಚುನಾವಣಾ ಕಣ ರಂಗೆರುತ್ತಿದ್ದು ಅಭ್ಯರ್ಥಿಗಳ ಪರ ವಿರೋಧ ಚರ್ಚೆಯ ನಡುವೆ ಫ್ಲಕ್ಸ್ ಜಟಾಪಟಿಯು ಸಹ ಹಲವು ಕ್ಷೇತ್ರಗಳಲ್ಲಿ ಕಂಡು ಬರುತ್ತಿರುವ ಬೆನ್ನಲ್ಲೇ ರಾಜ್ಯದ  ಹೈ ವೋಲ್ಟೇಜ್ ಕ್ಷೇತ್ರಗಳಲ್ಲಿ ಒಂದಾದ  ವಿಧಾನಸಭಾ ಕ್ಷೇತ್ರಕ್ಕೂ ಸಹ ಫ್ಲಕ್ಸ್ ಜಟಾಪಟಿ ಕಾಲಿಟ್ಟಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

 

 

 

 

 

ಇನ್ನು ಮಾಜಿ ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್ ರವರು ಪ್ರತಿನಿಧಿಸುವ ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲೂ ಸಹ ಹಾಲಿ ಹಾಗೂ ಮಾಜಿ ಶಾಸಕರ ಬೆಂಬಲಿಗರ ನಡುವೆ ಪರ ವಿರೋಧ ನಡುವೆ ಫ್ಲೆಕ್ಸ್ ಜಟಾಪಟಿ ಸಹ ಆರಂಭವಾಗಿದೆ.

 

 

 

 

ಇನ್ನು ಶಾಸಕರಾದ ಡಾ. ಜಿ ಪರಮೇಶ್ವರ್ ರವರು ಮಂಗಳವಾರ ಕೊರಟಗೆರೆ ವಿಧಾನಸಭಾ ಕ್ಷೇತ್ರದ ಹಲವು ಗ್ರಾಮಗಳಿಗೆ ಭೇಟಿ ನೀಡಿ ಮತದಾರರನ್ನು ಭೇಟಿ ಮಾಡಿ ಕ್ಷೇತ್ರದಲ್ಲಿ ತಾವು ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಜನರೊಂದಿಗೆ ಚರ್ಚಿಸಿ ಅವರ ಬೆಂಬಲ ಪಡೆಯುವ ನಿಟ್ಟಿನಲ್ಲಿ ಕೋರ ತಿಮ್ಮರಾಜನಹಳ್ಳಿ ಪಂಚಾಯಿತಿ ಸೇರಿದಂತೆ ಹಲವು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಇಂದು ಡಾ. ಜಿ ಪರಮೇಶ್ವರ್ ಅವರ ಕಾರ್ಯಕ್ರಮ ನಿಗದಿಯಾಗಿದ್ದು.

 

 

ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಶಾಸಕ ಡಾಕ್ಟರ್ ಜಿ ಪರಮೇಶ್ವರ್ ರವರ ಬೆಂಬಲಿಗರು ನೆಚ್ಚಿನ ನಾಯಕನ ಆಗಮನಕ್ಕಾಗಿ ಹಲವು ಫ್ಲಕ್ಸ್ ಗಳನ್ನು ಹಲವು ಗ್ರಾಮಗಳಲ್ಲಿ ಅಳವಡಿಸಿದ್ದು ಅದರಂತೆ ಕೋರ ಹೋಬಳಿಯ ಮುದ್ದೇನಹಳ್ಳಿ ಗ್ರಾಮದಲ್ಲೂ ಸಹ ಫ್ಲಕ್ಸ್ ಅಳವಡಿಸಿದ್ದು ಗ್ರಾಮದ ವ್ಯಕ್ತಿಯವರ ಜೆಡಿಎಸ್ ಕಾರ್ಯಕರ್ತನೊಬ್ಬ ಡಾ ಜಿ ಪರಮೇಶ್ವರ್ ಅವರ ಆಗಮನಕ್ಕಾಗಿ ಅಳವಡಿಸಿದ್ದ ಫ್ಲಕ್ಸನ್ನ ಮೆಚ್ಚಿನಲ್ಲಿ ಹರಿದು ಹಾಕಿ ತನ್ನ ಉದ್ಧಟಾತನ ಪ್ರದರ್ಶಿಸಿರುವುದು ಡಾ. ಜಿ ಪರಮೇಶ್ವರ್ ಅವರ ಬೆಂಬಲಿಗರ ಕೆಂಗಣ್ಣಿಗೆ ಕಾರಣವಾಗಿದೆ.

 

 

 

 

ಇನ್ನು ಘಟನೆ ಪೊಲೀಸ್ ಠಾಣೆಯ ಮೆಟ್ಟಿಲನ್ನು ಸಹ ಏರಿದ್ದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ ಎನ್ನಲಾಗಿದೆ.

 

 

 

ಅದೇನೇ ಇರಲಿ ಚುನಾವಣಾ ಹೋಸ್ತಿಲಲ್ಲಿ ಇಂತಹ ಸಣ್ಣಪುಟ್ಟ ಘಟನೆಗಳು ಕಾರ್ಯಕರ್ತರ ನಡುವೆ ಗೊಂದಲ ಹಾಗೂ ದ್ವೇಷಕ್ಕೆ ಕಾರಣವಾಗುತ್ತಿರುವುದಂತೂ ಸತ್ಯ ಇನ್ನಾದರೂ ಅಭ್ಯರ್ಥಿಗಳು ತಮ್ಮ ಹಿಂಬಾಲಕರಿಗೆ ತಿಳಿ ಹೇಳಿದರೆ ಇಂತಹ ಘಟನೆಗಳು ನಡೆಯುವುದಿಲ್ಲ ಎನ್ನುವ ಚರ್ಚೆ ಸಹ ಕ್ಷೆತ್ರದಲ್ಲಿ ಕೇಳಿ ಬರುತ್ತಿದೆ.

 

 

ವರದಿ -ಮಾರುತಿ ಪ್ರಸಾದ್ ತುಮಕೂರು

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version