ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ವಿರುದ್ಧ ಎಸ್ಟಿಪಿಐ ರಾಜ್ಯ ಕಾರ್ಯದರ್ಶಿ ಭಾಸ್ಕರ್ ಪ್ರಸಾದ್ ಕಿಡಿ.
ತುಮಕೂರು_ವಿದ್ಯಾರ್ಥಿಗಳ ಭವಿಷ್ಯವನ್ನು ಹಾಳು ಮಾಡುವಲ್ಲಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಮುಂದಾಗಿದೆ ಈ ಮೂಲಕ ಅಖಿಲಭಾರತ ವಿದ್ಯಾರ್ಥಿ ಪರಿಷತ್ ವಿದ್ಯಾರ್ಥಿಗಳ ಭವಿಷ್ಯವನ್ನು ಹಾಳು ಮಾಡುತ್ತಾ ಅಖಿಲಭಾರತ ವಿನಾಶ ಪರಿಷತ್ ಆಗಿ ಬದಲಾಗಿದೆ ಎಂದು ಎಸ್ಡಿಪಿಐ ರಾಜ್ಯ ಕಾರ್ಯದರ್ಶಿ ಭಾಸ್ಕರ್ ಪ್ರಸಾದ್ ಕಿಡಿಕಾರಿದ್ದಾರೆ.
ತುಮಕೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಭಾಸ್ಕರ್ ಪ್ರಸಾದ್ ರವರು ವಿದ್ಯಾರ್ಥಿಗಳು ಹಿಜಬ್ ದರಿಸಿದ್ದಾರೆ ಎನ್ನುವ ಕಾರಣಕ್ಕಾಗಿ ಕೆಲವು ವಿದ್ಯಾರ್ಥಿಗಳು ತಾವೇ ಓದಿದ ಶಾಲೆಗಳಿಗೆ ಕಲ್ಲು ತೂರುವ ಕೆಲಸ ಮಾಡಿದ್ದಾರೆ .
ಇನ್ನು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ಶಾಲೆ ಸರಸ್ವತಿ ಮಂದಿರ ದಂತೆ ಇದೆ ಆದರೆ ಇಂತಹ ಶಾಲೆಗೆ ಕಲ್ಲು ತೂರುವ ಕೆಲಸವನ್ನು ಕೆಲವರು ಮಾಡಿದ್ದಾರೆ ಹಾಗಾದರೆ ಇದೇನಾ ತಾವು ಕಲಿತ ಶಾಲೆಗೆ ಗೌರವ ನೀಡುವ ರೀತಿ ಎಂದು ಪ್ರಶ್ನಿಸಿದ್ದಾರೆ.
ಇನ್ನು ಹಿಜಾಬ್ ಹಾಗೂ ಕೇಸರಿ ಶಾಲೆ ಜಟಾಪಟಿಯಲ್ಲಿ ಮುಗ್ಧ ಬಾಲಕರು, ಶಾಲಾ ಕಾಲೇಜು ವಿದ್ಯಾರ್ಥಿಗಳು ಜೈಲು ಸೇರುವಂತಾಗಿದೆ ಈ ಮೂಲಕ ವಿದ್ಯಾರ್ಥಿಗಳ ಮೇಲೆ ಪೊಲೀಸ್ ಕೇಸ್ ಗಳು ದಾಖಲಾಗುತ್ತವೆ.
ಈ ಮೂಲಕ ವಿದ್ಯಾರ್ಥಿಗಳ ಭವಿಷ್ಯ ದ ಮೇಲೆ ಪರಿಣಾಮ ಬೀರಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಇನ್ನು ಗಲಾಟೆ ಸಂಬಂಧ ರಾಜ್ಯದ ಹಲವು ನಾಯಕರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ ಅದರಲ್ಲಿ ಪ್ರತಾಪ್ ಸಿಂಹ, ಯತ್ನಾಳ್, ಕಲ್ಲಡ್ಕ ಪ್ರಭಾಕರ್, ಮುತಾಲಿಕ್ ಅವರಂತಹ ನಾಯಕರು ಇಂತಹ ವಿದ್ಯಾರ್ಥಿಗಳ ರಕ್ಷಣೆಗೆ ಮುಂದಾಗುವರೆ ಎಂದು ಪ್ರಶ್ನಿಸಿದ್ದಾರೆ.
ಅದೇನೇ ಇರಲಿ ಇಂತಹ ಗಲಾಟೆ ಗಳಿಂದ ಮುಗ್ಧ ಬಡವರು ಯಾರದೋ ಪ್ರೇರಣೆಯಿಂದ ಇಂತಹ ಕೆಲಸಕ್ಕೆ ಕೈಹಾಕಿತು ಅವರ ಕುಮ್ಮಕ್ಕುನಿಂದ ಇಂತಹ ಕೆಲಸ ಮಾಡುತ್ತಿದ್ದಾರೆ ಇಂಥವರು ಜೀವನದಲ್ಲಿ ಎಂದು ಕೂಡ ಮೇಲೆ ಬರಲು ಸಾಧ್ಯವಿಲ್ಲ ಇಂತಹ ದುಷ್ಟರು ಬಹುಬೇಗನೆ ಸರ್ವನಾಶ ಆಗುತ್ತಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಇನ್ನು ಹಿಜಾಬ್ ಸಂಬಂಧ ಮುಂಚೂಣಿಯಲ್ಲಿರುವ ಕೆಲ ವಿದ್ಯಾರ್ಥಿಗಳಿಗೆ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಹಾಗೂ ಎಸ್. ಡಿ. ಪಿ.ಐ ಸಂಘಟನೆ ಅವರ ಬೆಂಬಲಕ್ಕೆ ನಿಂತಿದೆ ಎನ್ನುವ ಆರೋಪ ಕೇಳಿಬಂದಿದೆ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಸಂವಿಧಾನಬದ್ಧವಾಗಿ ಯಾರೇ ಹೋರಾಡಲಿ ಅದು ಹಿಜಾಬ್ ಹಾಕಿದ ಹೆಣ್ಣುಮಗಳೇ ಆಗಲಿ , ದಲಿತರ ಆಗಲಿ, ಇತರ ಯಾವುದೇ ಸಮುದಾಯದವರೇ ಆಗಲಿ ಅದಕ್ಕೆ ಎಸ್ಡಿಪಿಐ ಬೆಂಬಲ ಕೊಡುತ್ತದೆ ಎಂದಿದ್ದಾರೆ.
ಇನ್ನು ಇಂತಹ ಆರೋಪಗಳು ನಮ್ಮ ಮೇಲೆ ಕೇಳಿಬಂದರೆ ಅದನ್ನು ಹೆಮ್ಮೆ ಪಡುವುದಾಗಿ ತಿಳಿಸಿದ್ದಾರೆ ಸಂವಿಧಾನದ ವಿರುದ್ಧವಾಗಿ ನಾವು ಎಂದು ಭಾಗಿಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.