ವಿಶ್ವವಿದ್ಯಾನಿಲಯ ನೀಡಿದ ಅಂಕ ನೋಡಿ ವಿದ್ಯಾರ್ಥಿ ತಬ್ಬಿಬ್ಬು……ಆಗಿದ್ದೇನು ಅಂತೀರಾ..?
ಬೆಂಗಳೂರು: ನಗರದ ಬೆಂಗಳೂರು ವಿವಿ ಎಡವಟ್ಟು ಒಂದೆರಡಲ್ಲ. ಆಗಾಗ ಪದೇ ಪದೇ ಇದೇ ಕಾರಣಕ್ಕಾಗಿ ಸುದ್ದಿ ಆಗ್ತಾ ಇರುತ್ತದೆ. ಈಗ ಮತ್ತೆ ಸುದ್ದಿಯಾಗಿದೆ. ಬೆಂಗಳೂರು ವಿವಿ ನೀಡಿದಂತ ಅಂಕಪಟ್ಟಿಯಲ್ಲಿನ ಅಂಕವನ್ನು ಕಂಡ ವಿದ್ಯಾರ್ಥಿಯೇ ತಬ್ಬಿಬ್ಬಾಗಿದ್ದಾನೆ.
ಅಷ್ಟಕ್ಕೂ ಆಗಿದ್ದೇನು ಅಂತ ಮುಂದೆ ಓದಿ..
ಬೆಂಗಳೂರು ವಿಶ್ವವಿದ್ಯಾಲಯ ಬಿಕಾಂ 3ನೇ ಸೆಮಿಸ್ಟಾರ್ ಪರೀಕ್ಷೆ ಕಳೆದ ಆಗಸ್ಟ್ ನಲ್ಲಿ ನಡೆಸಲಾಗಿತ್ತು. ಈ ಪರೀಕ್ಷೆಯ ಫಲಿತಾಂಶ ಕೂಡ ಘೋಷಣೆ ಮಾಡಿ, ಈಗ ವಿದ್ಯಾರ್ಥಿಗಳಿಗೆ ಸಮಿಸ್ಟರ್ ಪರೀಕ್ಷೆಯ ಅಂಕಪಟ್ಟಿ ನೀಡಿದೆ.
ವಿವಿ ನೀಡಿದಂತ ಬಿಕಾಂ 3ನೇ ಸೆಮಿಸ್ಟರ್ ಅಂಕಪಟ್ಟಿಯಲ್ಲಿನ ಅಂಕ ಕಂಡಂತ ವಿದ್ಯಾರ್ಥಿಯೊಬ್ಬ ಶಾಕ್ ಆಗಿದ್ದಾನೆ. ಯಾಕೆಂದ್ರೇ.. 100 ಅಂಕಗಳ ಪರೀಕ್ಷೆಯಲ್ಲಿ 70 ಅಂಕಗಳಿಗೆ ಥಿಯೇರಿ ಹಾಗೂ 30 ಅಂಕಗಳಿಗೆ ಇಂಟರ್ನಲ್ ನಿಗದಿ ಪಡಿಸಲಾಗಿತ್ತು.
ಆದ್ರೇ ವಿವಿ 70 ಅಂಕಗಳ ಥಿಯೇರಿ ಪರೀಕ್ಷೆಗೆ 70 ಅಂಕಗಳನ್ನು ನೀಡೋ ಬದಲು ಅಂಕಪಟ್ಟಿಯಲ್ಲಿ 73 ಅಂಕಗಳನ್ನು ನೀಡಲಾಗಿತ್ತು. ಈ ಮಾರ್ಕ್ಸ್ ಕಾರ್ಡ್ ನೋಡಿದಂತ ಬಿಕಾಂ 3ನೇ ಸೆಮಿಸ್ಟರ್ ವಿದ್ಯಾರ್ಥಿ ತಬ್ಬಿಬ್ಬಾಗಿದ್ದಾನೆ. ಬೆಂಗಳೂರು ವಿವಿ ಈ ಎಡವಟ್ಟು ಅನೇಕ ಇತರೆ ಕಾಲೇಜುಗಳಲ್ಲಿಯೂ ಆಗಿದೆ ಎನ್ನಲಾಗುತ್ತಿದೆ.