ಅಧಿಕಾರಿಗಳಿಂದ ಮನನೊಂದ ವ್ಯಕ್ತಿಯೊಬ್ಬ 400ಕೆವಿ ವಿದ್ಯುತ್ ಕಂಬ ವೇರಿ ಪ್ರತಿಭಟನೆ.

ಅಧಿಕಾರಿಗಳಿಂದ ಮನನೊಂದ ವ್ಯಕ್ತಿಯೊಬ್ಬ 400ಕೆವಿ ವಿದ್ಯುತ್ ಕಂಬ ವೇರಿ ಪ್ರತಿಭಟನೆ.

 

 

 

ಗುಬ್ಬಿ_ತುಮಕೂರು ಜಿಲ್ಲೆಯ ಗುಬ್ಬಿ ತಾ.ಪ್ರಭುವನಹಳ್ಳಿ ಗೇಟ್ ಬಳಿ ಘಟನೆ ನಡೆದಿದೆ ತಾಳಗೊಪ್ಪದಿಂದ ನೆಲಮಂಗಲ ಹಾದುಹೋಗಿರುವ ವಿದ್ಯುತ್ ಕಂಬ ವೇರಿ ಆತ್ಮಹತ್ಯೆಗೆ ಯತ್ನಸಿದ ರಾಮು ಕಂಬ ವೇರಿ ಪ್ರತಭಟನೆಗೆ ಮುಂದಾದ ವ್ಯಕ್ತಿ.

 

 

 

ಗ್ರಾಮ ಪಂಚಾಯಿತಿ ಅಧಿಕಾರಿಗಳು ಮೂಲಭೂತ ಸೌಕರ್ಯ ನೀಡುವಲ್ಲಿ ವಿಳಂಬ ಮಾಡುತ್ತಿದ್ದಾರೆ ಎಂದು ವ್ಯಕ್ತಿ ಯೋರ್ವ 4000 ಕೆವಿ ವಿದ್ಯುತ್ ಹೈ ಟೆನ್ಷನ್ ಕಂಬ ಏರಿ ಕುಳಿತು ಪ್ರತಿಭಟಿಸಿದ ಘಟನೆ ಜರುಗಿದೆ.

 

ಗುಬ್ಬಿ ಕಸಬಾ ಹೋಬಳಿ ಹಳೇಗುಬ್ಬಿ ಗ್ರಾಮದ ವಾಸಿ ರಾಮು ಎಂಬ ವ್ಯಕ್ತಿಯು ಸರ್ಕಾರದ ಮೂಲಭೂತ ಸೌಕರ್ಯ ಕಲ್ಪಿಸಲು ಗ್ರಾಮ ಪಂಚಾಯಿತಿ ಪಿಡಿಓ ಮತ್ತು ತಹಶೀಲ್ದಾರ್ ರವರಿಗೆ ಹಲವು ಬಾರಿ ತಮ್ಮ ಮನೆಗೆ ರಸ್ತೆ ಮತ್ತು ಮನೆ ಮಂಜೂರು ಮಾಡಿ ಕೊಡುವ ಬಗ್ಗೆ ಅರ್ಜಿ ಸಲ್ಲಿಸಿದ್ದರೂ ಸಹ ಇಲ್ಲಿಯವರೆಗೆ ಯಾರು ಸ್ಪಂದಿಸುತ್ತಿಲ್ಲ ಹಳೇಗುಬ್ಬಿ ಗ್ರಾಮದ ಸರ್ಕಾರಿ ಗೋಮಾಳದಲ್ಲಿ ನಮ್ಮದೇ ಗ್ರಾಮದ ಬೇರೆ ಬೇರೆ ವ್ಯಕ್ತಿಗಳು ವಾಸದ ಮನೆಗಳನ್ನು ಕಟ್ಟಿಕೊಂಡಿದ್ದು ತನಗೂ ಕೂಡ ಅದೇ ರೀತಿ ವಾಸದ ಮನೆ ಕಟ್ಟಿಕೊಳ್ಳಲು ಜಾಗ ಮಂಜೂರು ಮಾಡಲು ಅವಕಾಶವನ್ನು ನೀಡಿ ಎಂದು ಕೇಳಿದರೆ ಅಡಗೂರು ಗ್ರಾಮ ಪಂಚಾಯಿತಿ ಪಿಡಿಓ ಅವರು ನಾನು ಮನೆ ನಿರ್ಮಾಣ ಮಾಡುವ ಜಾಗದ ಬಳಿ ಬಂದು ನನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸುವ ಜೊತೆಗೆ ನಮ್ಮ ಗ್ರಾಮದ ಗ್ರಾಮ ಪಂಚಾಯತ್ ಸದಸ್ಯರು ನನಗೆ ನ್ಯಾಯ ಒದಗಿಸುವಲ್ಲಿ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಆರೋಪಿಸಿ ಇಂದು ತನ್ನ ಪ್ರಾಣವನ್ನು ಲೆಕ್ಕಿಸದೆ ಪ್ರಭುವನ ಹಳ್ಳಿ ಗೇಟ್ ಬಳಿಯಿರುವ ತಾಳಗೊಪ್ಪದಿಂದ ನೆಲಮಂಗಲ ಸರಬರಾಜಾಗುವ ಹೈಟೆನ್ಷನ್ ಕಂಬ ವನ್ನು ಏರಿ ಕುಳಿತ ಘಟನೆ ನಡೆದಿದೆ.

 

ತಸಿಹಲ್ದಾರ್ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಬರುವವರೆವಿಗೂ ಕೆಳಗಿಳಿಯುವುದಿಲ್ಲವೆಂದು ಹೈಟೆನ್ಷನ್ ತಂತಿ ಕಂಬದ ಮೇಲೆ ಕುಳಿತು ತನ್ನ ನೋವನ್ನು ತೋಡಿಕೊಳ್ಳುತ್ತಿದ್ದಾನೆ.

 

ಸ್ಥಳಕ್ಕೆ ಗುಬ್ಬಿ ತಹಶೀಲ್ದಾರ್ ಆರತಿ ಅವರು ತಡವಾಗಿ ಬಂದು ಸಂತ್ರಸ್ತ ಶ್ರೀನಿವಾಸ್ ಅವರ ಮನವೊಲಿಸುವ ಪ್ರಯತ್ನ ನಡೆಯಿತು.ತದ ನಂತರ ಪೊಲೀಸ್ ಇಲಾಖೆ ಅಧಿಕಾರಿಗಳು ಮತ್ತು ತಾಲ್ಲೂಕು ಆಡಳಿತ ವ್ಯಕ್ತಿ ಯ ಮನವೋಲಿಸುವಲ್ಲಿ ಯಶಸ್ವಿಯಾದರು ನಂತರ ಕಂಬವೇ ರಿಂದ ವ್ಯಕ್ತಿಯನ್ನು ಕೆಳಗಿಳಿಸಿ ತನ್ನ ಸಮಸ್ಯೆಗಳನ್ನು ಶೀಘ್ರವೇ ಬಗೆಹರಿಸುತ್ತೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 

ವರದಿ_ಮಾರುತಿ ಪ್ರಸಾದ್ ತುಮಕೂರು

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version