ಪಿಎಸ್ಐ ಪರೀಕ್ಷೆ ಅಕ್ರಮ,ADGP ಅಮೃತ್ ಪಾಲ್ ಅರೆಸ್ಟ್
ಬೆಂಗಳೂರು_ ಪಿಎಸ್‌ಐ 545 ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ದೊಡ್ಡ ಬೇಟೆಯಾಡಿದ್ದು, ಎಡಿಜಿಪಿ ಅಮೃತ್ ಪಾಲ್ ಬಂಧಿಸಲಾಗಿದೆ. ಈ ಮೂಲಕ ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಎಡಿಜಿಪಿ ದರ್ಜೆಯ ಅಧಿಕಾರಿ ಬಂಧನವಾಗಿದೆ.
ಪಿಎಸ್‌ಐ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು 4ನೇ ದಿನದ ವಿಚಾರಣೆಗೆ ಹಾಜರಾಗಿದ್ದ ಎಡಿಜಿಪಿ ಅಮೃತ್ ಪಾಲ್ ಅವ್ರನ್ನ ಸಿಐಡಿ ಪೊಲೀಸರು ಬಂದಿಸಿದ್ದಾರೆ. ಮೇಲ್ನೋಟಕ್ಕೆ ಸಾಕ್ಷ್ಯಾಧಾರಗಳು ಸಿಕ್ಕ ಹಿನ್ನೆಲೆ ಪಾಲ್ ಬಂಧಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಇನ್ನು ಈ ಕುರಿತು ಪ್ರತಿಕ್ರಿಯಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ, ‘ಪಿಎಸ್‌ಐ ಅಕ್ರಮ ಕೇಸಲ್ಲಿ ಎಡಿಜಿಪಿ ಅರೆಸ್ಟ್ ಮಾಡಿದ್ದಾರೆ. ಸಾಕ್ಷ್ಯಾಧಾರ ಸಿಕ್ಕದ್ದರಿಂದ ಪಾಲ್ ಬಂಧಿಸಲಾಗಿದೆ. ಯಾಕಂದ್ರೆ, ಅಲ್ಲಿ ಅವ್ರು ನೇಮಕಾತಿ ವಿಭಾಗದ ಸುಪ್ರೀಂ ಆಗಿರುತ್ತಾರೆ. ಅವ್ರಿಗೆ ಗೊತ್ತಿಲ್ಲದೇ ಈ ಅಕ್ರಮ ನಡೆಯಲು ಸಾಧ್ಯವಿಲ್ಲ. ಅವರ ಆಫೀಸಲ್ಲೇ ಒಎಂಆರ್ ಶೀಟ್ ತಿದ್ದುವ ಕೆಲಸವಾಗಿದೆ ಎನ್ನಲಾಗ್ತಿದೆ’ ಎಂದರು.