45 ದಿನಗಳ ಹೋರಾಟ ಮುಕ್ತಾಯಗೊಳಿಸಿದ ಪ್ರತಿಭಟನಾಕಾರರು

45 ದಿನಗಳ ಹೋರಾಟ ಮುಕ್ತಾಯಗೊಳಿಸಿದ ಪ್ರತಿಭಟನಾಕಾರರು

 

ತುಮಕೂರು_ಭೂಮಿ ಮತ್ತು ವಸತಿ ಹೋರಾಟಕ್ಕೆ ಸಂಬಂಧಿಸಿದಂತೆ ವಿವಿಧ ಸಂಘಟನೆಗಳು ತುಮಕೂರು ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಕಳೆದ 45 ದಿನಗಳಿಂದ ನಡೆಸುತ್ತಿದ್ದ ಅಹೋರಾತ್ರಿ ಧರಣಿ ಮುಕ್ತಾಯಗೊಂಡಿದೆ.

 

ಭೂಮಿ ಮತ್ತು ವಸತಿ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಜಿಲ್ಲೆಯ ಹಲವು ಸಂಘಟನೆಗಳು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ನಡೆಸುತ್ತಿದ್ದರು. ಹೋರಾಟಕ್ಕೆ ಸಂಬಂಧಿಸಿದಂತೆ ಜಿಲ್ಲಾ ಆಡಳಿತಕ್ಕೆ ರೈತರ ಬೇಡಿಕೆಗಳನ್ನು ಈಡೇರಿಸುವ ಸಲುವಾಗಿ ಒತ್ತಾಯ ಮಾಡಲಾಗಿತ್ತು .

ಅಹೋರಾತ್ರಿ ಧರಣಿ ಗೆ ಸಂಬಂಧಿಸಿದಂತೆ ಹೋರಾಟಗಾರರ ಬೇಡಿಕೆಗಳನ್ನು ಜಿಲ್ಲಾಡಳಿತ ಈಡೇರಿಸುವಲ್ಲಿ ಸಂಪೂರ್ಣ ಸಫಲವಾಗಿದ್ದು ಎರಡು ಮೂರು ಸಮಸ್ಯೆಗಳನ್ನು ಹೊರತುಪಡಿಸಿ ಮಿಕ್ಕ ಎಲ್ಲ ರೈತರ ಭೂಮಿ ಮತ್ತು ವಸತಿಗೆ ಸಂಬಂಧಿಸಿದಂತೆ ಹಲವು ಪ್ರಕರಣಗಳು ಸುಖಾಂತ್ಯ ಕಂಡ ಹಿನ್ನೆಲೆಯಲ್ಲಿ 45 ದಿನಗಳ ನಂತರ ಪ್ರತಿಭಟನಾಕಾರರು ಧರಣಿಯನ್ನು ಮುಕ್ತಗೊಳಿಸಿದ್ದಾರೆ.

 

ಇನ್ನೂ ಪ್ರತಿಭಟನೆಯ ಮುಕ್ತಾಯ ಸಮಾರಂಭದಲ್ಲಿ ಭಾಗವಹಿಸಿದ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ತುಮಕೂರು ಮಹಾನಗರ ಪಾಲಿಕೆ ಆಯುಕ್ತರು, ಅಪಾರ ಜಿಲ್ಲಾಧಿಕಾರಿಗಳು, ತಹಸಿಲ್ದಾರ್ ಮೋಹನ್ಕುಮಾರ್, ಅಸಿಸ್ಟೆಂಟ್ ಕಮಿಷನರ್ ಅಜಯ್ ಸೇರಿದಂತೆ ಹಲವು ಅಧಿಕಾರಿಗಳನ್ನು ಭೂಮಿ ಮತ್ತು ವಸತಿ ಹಕ್ಕು ಹೋರಾಟ ಸಮಿತಿ ವತಿಯಿಂದ ಅಭಿನಂದಿಸಲಾಯಿತು.

ಇನ್ನು ಇದೇ ಸಂದರ್ಭದಲ್ಲಿ ಮಾತನಾಡಿದ ಭೂಮಿ ಮತ್ತು ವಸತಿ ಹಕ್ಕು ಹೋರಾಟ ಸಮಿತಿಯ ಮುಖ್ಯಸ್ಥರಾದ ಹಂದ್ರಾಳ ನಾಗಭೂಷಣ್ ಮಾತನಾಡಿ ಸತತ 45 ದಿನಗಳಿಂದ ಮಹಿಳೆಯರು ವಯೋವೃದ್ಧರು ಎನ್ನದೆ ಜಿಲ್ಲೆಯ ಹಲವು ತಾಲೂಕುಗಳಿಂದ ಹಲವು ರೈತರು ತಮ್ಮ ಸಮಸ್ಯೆಗಳ ಈಡೇರಿಕೆಗಾಗಿ ಆಹೋರಾತ್ರಿ ದರಣೆ ನಡೆಸುತ್ತಿದ್ದು ನಮ್ಮ ಮನವಿಗೆ ಸಂಬಂಧಿಸಿದಂತೆ ಜಿಲ್ಲೆಯ ಎಲ್ಲಾ ಅಧಿಕಾರಿಗಳು ನಮ್ಮ ಮನವಿಗೆ ಸ್ಪಂದಿಸಿ ನಮ್ಮ ಬೇಡಿಕೆಗಳನ್ನು ಈಡೇರಿಸಿ ನಮಗೆ ಸ್ಪಂದಿಸಿದ್ದಾರೆ ಹಾಗಾಗಿ ಧರಣಿಯನ್ನು ಮುಕ್ತಾಯ ಗೊಳಿಸುತ್ತಿರುವುದಾಗಿ ತಿಳಿಸಿದರು.

 

 

 

ಪ್ರತಿಭಟನೆಗೆ ಸಂಬಂಧಿಸಿದಂತೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸಿ 45ದಿನಗಳ ಹೋರಾಟಕ್ಕೆ ಅಂತ್ಯ ಹಾಡಿದ್ದಾರೆ.

 

 

ಇನ್ನು ಪ್ರತಿಭಟನೆಯ ಮುಕ್ತಾಯ ಸಮಾರಂಭದಲ್ಲಿ ಮುಖಂಡರಾದ ಕುಮಾರ್ ,ಸಮತಳ, ಮರಿಯಪ್ಪ, ಮುನಿರಾಜ್, ಕಸವನಹಳ್ಳಿ ರಮೇಶ್, ಮಂಜುನಾಥ್,ಚಂಗುಮಣಿ,ಕುಣಿಗಲ್ ನರಸಿಂಹಮೂರ್ತಿ,ಶಿವಕುಮಾರ್ ಮಾಸ್ಟರ್ ಮನೆ ವಕೀಲರು,ಮಾರನಹಳ್ಳಿ ಗಣೇಶ್,ಇತರರು ಹಾಜರಿದ್ದರು.

 

 

ವರದಿ _ಮಾರುತಿ ಪ್ರಸಾದ್ ತುಮಕೂರು

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version