ದಲಿತರ ಮನೆ ಮೇಲೆ ದುಷ್ಕರ್ಮಿಗಳಿಂದ ಬೆಂಕಿ ಲಕ್ಷಾಂತರ ಮೌಲ್ಯದ ವಸ್ತು ಬೆಂಕಿಗೆ ಆಹುತಿ.

ದಲಿತರ ಮನೆ ಮೇಲೆ ದುಷ್ಕರ್ಮಿಗಳಿಂದ ಬೆಂಕಿ ಲಕ್ಷಾಂತರ ಮೌಲ್ಯದ ವಸ್ತು ಬೆಂಕಿಗೆ ಆಹುತಿ.

 

 

ತುಮಕೂರು ಜಿಲ್ಲೆಯ, ತುರುವೇಕೆರೆ ತಾಲೂಕಿನ, ದಂಡಿನಶಿವರ ಹೋಬಳಿ, ಅಪ್ಪಸಂದ್ರದ ಗುಂಡಿಕಾವಲ್ ಊರಿನ ಲಕ್ಕಯ್ಯ ಮಗ ಈಶ್ವರಪ್ಪ ಎನ್ನುವವರ ತೋಟದ ವಾಸದ ಮನೆಗೆ ಬೆಂಕಿ ಬಿದ್ದು ಅಪಾರ ಪ್ರಮಾಣದ ನಷ್ಟ ಸಂಭವಿಸಿರುವ ಘಟನೆ ಬುಧವಾರ ಸಂಜೆ ನಡೆದಿದೆ. ಗುಂಡಿಕಾವಲ್ ನ ತಮ್ಮ ತೋಟದಲ್ಲಿ ಮನೆಮಾಡಿಕೊಂಡು ವಾಸವಾಗಿದ್ದ ಈಶ್ವರಪ್ಪ ಅವರ ಮನೆಯ ಮೇಲೆ ಹಲವು ದಿನಗಳಿಂದ ಕಲ್ಲು ತೂರುವುದು, ಕರೆಂಟ್ ಕಟ್ ಮಾಡುವುದು ಅಗಿಂದ್ದಾಗೆ ನಡೆಯುತ್ತಿದ್ದು ಈ ಸಂಬಂದ ದಂಡಿನಶಿವರ ಪೊಲೀಸ್ ಠಾಣೆಗೆ ದೂರು ನೀಡಿದ್ದರು ಆದರೆ ಯಾವುದೇ ಕ್ರಮ ಜರುಗಿಸಿರಲಿಲ್ಲ ಎಂದು ಕುಟುಂಬದವರು ಆಕ್ರೋಶ ಹೊರಹಾಕಿದ್ದಾರೆ.

 

ಬುಧವಾರ ಸಂಬಂಧಿಕರ ಮನೆಯಲ್ಲಿ ನಡೆದ ಜಾತ್ರೆಯ ಸಂಬಂಧ ಕುಟುಂಬ ವರ್ಗದವರೆಲ್ಲ ಮನೆಗೆ ಬೀಗ ಹಾಕಿಕೊಂಡು ಹೋಗಿದ್ದು, ಈ ವೇಳೆ ಯಾರೋ ದುಷ್ಕರ್ಮಿಗಳು,ಮನೆಗೆ ಅಳವಡಿಸಿದ್ದ ಸಿಸಿ ಟಿ.ವಿ.ಕ್ಯಾಮರವನ್ನು ಮೇಲ್ಮುಖವಾಗಿ ತಿರುಗಿಸಿ,ಮನೆಗೆ ಬೆಂಕಿ ಹಚ್ಚಿದ್ದು, ಮನೆಯಲ್ಲಿದ್ದ ಸುಮಾರು 30000 ತೆಂಗಿನಕಾಯಿ, ಮನೆಯಲ್ಲಿದ್ದ ದವಸ,ಧಾನ್ಯ, ವಡವೆ.ವಸ್ತ್ರ ಸೇರಿದಂತೆ ಸುಮಾರು ಲಕ್ಷಾಂತರ ರೂಗಳಿಗೂ ಹೆಚ್ಚು ನಷ್ಟ ಸಂಭವಿಸಿದೆ.

 

 

ವಿಷಯ ತಿಳಿದ ತಕ್ಷಣ ಪೊಲೀಸ್ ಠಾಣೆಗೆ ದೂರವಾಣಿ ಮೂಲಕ ದೂರು ನೀಡಿ, ಅಗ್ನಿಶಾಮಕ ದಳಕ್ಕೆ ತಿಳಿಸಲಾಗಿತ್ತು. ಅಗ್ನಿಶಾಮಕ ದಳದ ಸಿಬ್ಬಂದಿ ಬರುವ ವೇಳೆಗೆ ಬಹುತೇಕ ವಸ್ತುಗಳು ಸುಟ್ಟು ಹೋಗಿವೆ ಎಂದು ಮನೆಯ ಮಾಲೀಕರಾದ ಈಶ್ವರಪ್ಪ ತಿಳಿಸಿದ್ದಾರೆ.

ಪೊಲೀಸ್ ಇಲಾಖೆಯವರು, ತಹಸೀಲ್ದಾರ್ ರವರು, ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ನೊಂದಿರುವ ಅಸಹಾಯಕ ಜನರಿಗೆ ಸ್ಪಂದಿಸಿ ನ್ಯಾಯ ಕೊಡಿಸಿ ಮನೆಗೆ ಬೆಂಕಿ ಹಚ್ಚಿದ ಸಮಾಜ ಘಾತುಕರಿಗೆ ಸರಿಯಾದ ಶಿಕ್ಷೆ ಕೊಡಿಸಬೇಕೆಂದು ಜಗದೀಶ್,ಜಿಲ್ಲಾ ಡಿಎಸ್ಎಸ್ ಸಂಚಾಲಕರು ಹಾಗೂ ಇಂದ್ರಯ್ಯ ಹೆಚ್ ,ಅದ್ಯಕ್ಷರು ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ರಕ್ಷಣಾ ಒಕ್ಕೂಟ (ರಿ) ಹಾಗೂ ಅದ್ಯಕ್ಷರು,ಕರ್ನಾಟಕ ರಾಜ್ಯ ರೈತರ ಸೇವಾ ಸಂಘ (ರಿ)ದ ಪರವಾಗಿ ಇವರು ತುಮಕೂರು ಜಿಲ್ಲಾಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆ ಅವರಿಗಾದ ನಷ್ಟವನ್ನು ಸರ್ಕಾರದಿಂದ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

 

 

ಇನ್ನು ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಈಶ್ವರಪ್ಪನವರ ತಂಗಿ ಸುಧಾ ಮಾತನಾಡಿದ್ದು ಇನ್ನು ಗ್ರಾಮದಲ್ಲಿ ಏಕೈಕ ಆದಿ ದ್ರಾವಿಡ ಜನಾಂಗಕ್ಕೆ ಸೇರಿದ ಕುಟುಂಬ ವಾಸವಿದೆ ಹಲವು ದಿನಗಳಿಂದ ನಮ್ಮ ಮನೆಯ ಮೇಲೆ ಕಲ್ಲು ಬೀಳುವುದು, ಕರೆಂಟ್ ಕಟ್ಟು ಮಾಡುವ ಘಟನೆಗಳು ನಡೆಯುತ್ತಿದ್ದವು ಆದರೂ ಸಹ ನಾವು ಧೈರ್ಯ ದಿಂದ ವ್ಯವಸಾಯ ಮಾಡುತ್ತಾ ನಮ್ಮ ಜೀವನವನ್ನು ಸಾಗಿಸುತ್ತಿದ್ದೇವು ಆದರೆ ಕಿಡಿಗೇಡಿಗಳು ನಾವು ಇಲ್ಲದ ಸಮಯವನ್ನು ನೋಡಿಕೊಂಡು ಮನೆಗೆ ಬೆಂಕಿ ಹಚ್ಚಿದ್ದು ಮನೆಯಲ್ಲಿ ಇದ್ದ ಸಂಪೂರ್ಣ ದವಸದಾನ್ಯ ,ದಾಖಲಾತಿ, ಚಿನ್ನ ಸೇರಿದಂತೆ ಸುಮಾರು 30 ಲಕ್ಷಕ್ಕೂ ಹೆಚ್ಚು ಮೌಲ್ಯದ ನಷ್ಟ ಸಂಭವಿಸಿದ್ದು ಈಗ ನಮಗೆ ವಾಸಮಾಡಲು ಮನೆ ಸಹ ಇಲ್ಲದೆ ಬೀದಿಗೆ ಬೀಳುವಂತಾಗಿದೆ ಎಂದು ಬೀಳುವ ಮಳೆಯಲ್ಲಿ ನೆನೆಯುತ್ತ ಕಣ್ಣೀರು ಹಾಕಿದ್ದಾರೆ.

 

 

ಇನ್ನು ಘಟನೆ ಸಂಬಂಧ ತಾಸಿಲ್ದಾರ್ ಅವರನ್ನು ಸಂಪರ್ಕಿಸಲಾಗಿತ್ತು ತಾಸಿಲ್ದಾರ್ ರವರು ಸಹ ಉಡಾಫೆಯ ಉತ್ತರವನ್ನು ನೀಡಿದ್ದಾರೆ  ಇನ್ನು ಕಂದಾಯ ಇಲಾಖೆಯ ಕೆಲ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ ಆದರೆ ಮೇಲಧಿಕಾರಿಗಳು ಯಾರು ಕೂಡ ಸ್ಪಂದಿಸಿಲ್ಲ ಎಂದು ಆರೋಪಿಸಿದ್ದಾರೆ.

 

ಘಟನೆ ಸಂಬಂಧ ಸ್ಥಳೀಯ ಶಾಸಕ ಮಸಾಲ ಜಯರಾಮ್ ಹಾಗೂ ತುಮಕೂರು ಜಿಲ್ಲಾಧಿಕಾರಿಗಳಿಗೂ ಸಹ ಮಾಹಿತಿಯನ್ನು ತಿಳಿಸಿದ್ದೇವೆ ಆದರೆ ನಮಗೆ ಸೂರು ಇಲ್ಲದ ಕಾರಣ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ವಾಸ ಮಾಡಲು ವ್ಯವಸ್ಥೆ ಕಲ್ಪಿಸಿಕೊಡಬೇಕು ಎಂದು ಈಶ್ವರಪ್ಪನವರ ತಂಗಿ ಸುಧಾ ಸರ್ಕಾರವನ್ನು ಒತ್ತಾಯಿಸಿದ್ದಾರೆ.

 

 

ವರದಿ _ಮಾರುತಿ ಪ್ರಸಾದ್ ತುಮಕೂರು

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version