ದಲಿತರ ಪ್ರಗತಿ ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ :ಆರ್ ನರೇಂದ್ರ
ಹನೂರು :- ವಿಧಾನಸಭಾ ಕ್ಷೇತ್ರದ ಕಣ್ಣೂರು ಗ್ರಾಮದಲ್ಲಿ ಶಾಸಕ ಆರ್ ನರೇಂದ್ರ ಮತಯಾಚನೆ ಮಾಡಿದ್ದಾರೆ ಗ್ರಾಮದ ಯಜಮಾನರು ಯುವಕರು ಕಾಂಗ್ರೆಸ್ ಪಕ್ಷದ ಮುಖಂಡರುಗಳು ಆರ್ ನರೇಂದ್ರ ರಿಗೆ ಅದ್ದೂರಿಯಾಗಿ ಸ್ವಾಗತ ಕೋರಿ ಬರಮಾಡಿಕೊಂಡಿದ್ದಾರೆ.ನಂತರ ಕಣ್ಣೂರು ಮಾರಮ್ಮ ದೇವಸ್ಥಾನದ ಹತ್ತಿರ ಗ್ರಾಮದ ಜನರನ್ನು ಉದ್ದೇಶೀಸಿ ಮಾತನಾಡಿದ ಆರ್ ನರೇಂದ್ರ ರವರು ಕಣ್ಣೂರು ಗ್ರಾಮದ ಮುಖಂಡರಾದ ಬಸವಣ್ಣ ಮತ್ತು ಲಿಂಗರಾಜುರವರು ಕಳೆದ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪರವಾಗಿ ಕೆಲಸ ಮಾಡಿದ್ದರು ಕಾರಣಾಂತರಗಳಿಂದ ಬೇರೆ ಪಕ್ಷಗಳಲ್ಲಿ
ಜೊತೆ ಇದ್ದರು ಇಂದು ಅವರೇ ಕೂಡ ಸ್ವಯಂ ಪ್ರೇರಿತವಾಗಿ ನಮ್ಮ ಪಕ್ಷಕ್ಕೆ ಬಂದು ಸೇರ್ಪಡೆಯಾಗಿರುವುದು ಖುಷಿಯಾಗಿದೆ ನನಗೆ ಆನೆ ಬಲ ಬಂದಂತಾಗಿದೆ. ಎಲ್ಲರಿಗೂ ಗೊತ್ತಿರುವ ಹಾಗೆ ಬಿಜೆಪಿ ಪಕ್ಷ ಕೇಂದ್ರದಲ್ಲಿ ಜನರ ರಕ್ತ ಇರುವ ಕೆಲಸಗಳನ್ನು ಮಾಡ್ತಾ ಇದೆ ಸದಾ ಮುಸಲ್ಮಾನರನ್ನು ಟಿಕೀಸುತ್ತ ಧರ್ಮ ಧರ್ಮಗಳ ನಡುವೆ ಬೆಂಕಿ ಹಚ್ಚುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ.
ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ..ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇದ್ದಾಗ ಕೊಟ್ಟಿದ್ದಂತಹ ಹಲವಾರು ಜನಪ್ರಿಯ ಯೋಜನೆಗಳನ್ನು ಬಿಜೆಪಿ ಪಕ್ಷ ತೆಗೆದು ಹಾಕಿದ್ದಾರೆ ಗ್ಯಾಸ್. ಪೆಟ್ರೋಲ್ ದಿನನಿತ್ಯ ಬಳಸುವ ಸಾಮಗ್ರಿಗಳ ಬೆಲೆ ಗಗನಕ್ಕೆ ಏರಿದೆ ಜನಸಾಮಾನ್ಯರು ಬದುಕು ತುಂಬಾ ಕಷ್ಟ ಇದೆ.ಆದ್ದರಿಂದ ಕಾಂಗ್ರೆಸ್ ಪಕ್ಷ. ದಲಿತರು ಮತ್ತು ಹಿಂದುಳಿದ ವರ್ಗದವರನ್ನು
ಕಾಪಾಡುವ ಪಕ್ಷ ಆಗಾಗಿ ಕಾಂಗ್ರೆಸ್ ಬೆಂಬಲಿಸಿ ಮತ ನೀಡಿ ಎಂದು ಹೇಳಿದರು ಹಾಗೂ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡ್ನಲ್ಲಿ ಮಹಿಳೆಯರಿಗೆ ತಿಂಗಳಿಗೆ 2000 ಸಹಾಯ ಧನ ತಲಾ ಹತ್ತು ಕೆಜಿ ಹಕ್ಕಿ.200ಯೂನಿಟ್ ವಿದ್ಯುತ್ ಉಚಿತ ಇನ್ನು ಹಲವಾರು ಯೋಜನೆಗಳನ್ನು ಕಲ್ಪಿಸುಕೊಡುವ ವ್ಯವಸ್ಥೆ ಮಾಡುವ ಗುರಿ ಹೊಂದಿದ್ದೇವೆ ಬಿಜೆಪಿ ಪಕ್ಷ ಮುಸಲ್ಮಾನರ ವಿರೋಧಿಸುವುದು
ಪರಿಶಿಷ್ಟ ಪಂಗಡ ಪರಿಶಿಷ್ಟ ಜಾತಿ ಲಕ್ಷಾಂತರ ಮಕ್ಕಳ ಸ್ಕಾಲರ್ಷಿಪ್ಪನ್ನು ತೆಗೆದು ಹಾಕಿದೆ ಮತ್ತು ಇನ್ನಿತರ ಹಕ್ಕುಗಳನ್ನು ಕಿತ್ತುಕೊಳ್ಳುವುದು ಭ್ರಷ್ಟ ಬಿಜೆಪಿ ಪಕ್ಷದ ಕೆಲಸ ಸನ್ಮಾನ್ಯ ನರೇಂದ್ರ ಮೋದಿಯವರು ಚುನಾವಣೆ ಸಮೀಪಿಸುತ್ತಿದ್ದಂತೆ ವಾರಕ್ಕೊಮ್ಮೆ ರಾಜ್ಯಕ್ಕೆ ಬೇಡಿ ಕೊಡ್ತಾರೆ ಆದರೆ ಕರ್ನಾಟಕದಲ್ಲಿ ಪ್ರವಾಹ ಬಂದು ಸಾವಿರಾರು ಜನರು ತಮ್ಮ ಪ್ರಾಣವನ್ನು ಕಳೆದುಕೊಂಡರು
ನಮ್ಮ ಚಾಮರಾಜನಗರ ಜಿಲ್ಲೆಯ ಆಸ್ಪತ್ರೆಯಲ್ಲೂ ಕೂಡ ಕೋವಿಡ್ ಸಮಸ್ಯೆಯಿಂದ 30ಕ್ಕೂ ಹೆಚ್ಚು ಜನ ಆಕ್ಸಿಜನ್ ಸಿಗದೇ ಪ್ರಾಣ ಕಳೆದುಕೊಂಡರು ನಮ್ಮ ಕ್ಷೇತ್ರದ ಸುಲ್ವಾಡಿ ದುರಂತದಲ್ಲೂ ಕೂಡ 28 ಮಂದಿ ವಿಷ ಪ್ರಸಾದ ಸೇವಿಸಿ ಸಾವನ್ನಪ್ಪಿದರೂ ಅಂತಹ ಸಮಯದಲ್ಲಿ ಭೇಟಿ ಕೊಡಲಿಲ್ಲ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ
ಬಿಜೆಪಿ ಪಕ್ಷದ ರಾಷ್ಟ್ರ ನಾಯಕರುಗಳು ಕ್ಷೆತ್ರಕ್ಕೆ ಬರುತಿದ್ದಾರೆ ಬಿಜೆಪಿ ಪಕ್ಷದವರಿಗೆ ನಿಮ್ಮ ಮತ ಮಾತ್ರ ಬೇಕು ನಿಮ್ಮ ಹಿತ ಬೇಕಾಗಿಲ್ಲ ಆಗಾಗಿ ನನ್ನ ಕ್ಷೇತ್ರದಲ್ಲಿ ಅವರಿಗೆ ಮತ ಕೇಳುವ ನೈತಿಕತೆಯನ್ನು ಕಳೆದುಕೊಂಡಿದ್ದಾರೆ ಬಿಜೆಪಿ ಪಕ್ಷವನ್ನು ಯಾವುದೇ ಕಾರಣಕ್ಕೂ ನಂಬಬೇಡಿ.ಈ ಬಾರಿ ನಿಮ್ಮ ಅತ್ಯಂತ ಅಮೂಲ್ಯವಾದ ಮತವನ್ನು ಕಾಂಗ್ರೆಸ್ ಪಕ್ಷದ
ಹಸ್ತದ ಗುರುತಿಗೆ ಮತನೀಡಿ ನನ್ನನ್ನು ಮತ್ತೊಮ್ಮೆ ಹನೂರು ಕ್ಷೇತ್ರದ ಸಮಗ್ರ ಅಭಿವೃದ್ಧಿ ಗಾಗಿ ಸೇವೆ ಮಾಡಲು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು ಇನ್ನು ಇದೇ ಸಂದರ್ಭದಲ್ಲಿ ಕಣ್ಣೂರು ಗ್ರಾಮ ಪಂಚಾಯತ್ ಸದಸ್ಯರು ಯಜಮಾನರು ಮುಖಂಡರು ಯುವಕರು ಉಪಸ್ಥಿತರಿದ್ದರು
ವರದಿ: ನಾಗೇಂದ್ರ ಪ್ರಸಾದ್