ಖಾಸಗಿ ಬಸ್ ನಡೆಸುವವರಿಗೆ ಸರ್ಕಾರದ ಅಧಿನಿಯಗಳನ್ನು ಪಾಲಿಸುವಂತೆ ಆದೇಶಿಸಬೇಕು : ಮಾಜಿ ಶಾಸಕ ಡಾ. ರಫೀಕ್ ಅಹ್ಮದ್

ಖಾಸಗಿ ಬಸ್ ನಡೆಸುವವರಿಗೆ ಸರ್ಕಾರದ ಅಧಿನಿಯಗಳನ್ನು ಪಾಲಿಸುವಂತೆ ಆದೇಶಿಸಬೇಕು : ಮಾಜಿ ಶಾಸಕ ಡಾ. ರಫೀಕ್ ಅಹ್ಮದ್.

 

 

ತುಮಕೂರು: ಪಾವಗಡದ ಪಳವಳ್ಳಿಯ ಬಳಿ ನಡೆದ ಬಸ್ ದುರಂತದಿoದ ತುಮಕೂರು ಜಿಲ್ಲೆಯ ಜನ ಬೆಚ್ಚಿಬಿದ್ದಿದ್ದಾರೆ. ಮೃತರ ಕುಟುಂಬ ಮತ್ತು ಗಾಯಾಳುಗಳ ಕುಟುಂಬದಲ್ಲಿ ದುಃಖ ಮಡುಗಟ್ಟಿದೆ. ಈಗಾಗಲೇ ೬ ಜನರು ಮೃತಪಟ್ಟಿದ್ದು. ಹಲವರಿಗೆ ತೀವ್ರತರನಾದ ಗಾಯಗಳಾಗಿದ್ದು ತುಮಕೂರು ಜಿಲ್ಲಾಸ್ಪತ್ರೆ ಸೇರಿದಂತೆ ನಿಮ್ಹಾನ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆಯಲ್ಲಿ ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ಹೆಚ್ಚು ಸಾವು ನೋವು ಸಂಭವಿಸಿರುವುದು ದುರದೃಷ್ಟಕರವಾಗಿದೆ ಎಂದು ಡಾ.ರಫೀಕ್ ಅಹ್ಮದ್ ತಿಳಿಸಿದ್ದಾರೆ.

 

ಖಾಸಗಿ ಬಸ್ ನಡೆಸುವವರು ಹೆಚ್ಚು ಕಲೆಕ್ಷನ್ ಮಾಡುವ ದುರಾಸೆಯೇ ಈ ದುರ್ಘಟನೆಗೆ ಪ್ರಮುಖ ಕಾರಣವಾಗಿದೆ. ಖಾಸಗಿ ಬಸ್ ಮಾಲೀಕರಿಗೆ ಸಾರಿಗೆ ಇಲಾಖೆ ವಿಧಿಸಿರುವ ನೀತಿ ನಿಯಮಗಳನ್ನು ಉಲ್ಲಂಘನೆ ಮಾಡುವುದು ಟಿಕೆಟ್ ಹರಿದಷ್ಟೇ ಸುಲಭವಾಗಿದೆ ಎಂದರೆ ತಪ್ಪಾಗಲಾರದು. ಇವರ ಬೇಜವಾಬ್ದಾರಿ ಮತ್ತು ಅಸಡ್ಡೆತನದಿಂದ ಇಂದು ಹಲವು ಕುಟುಂಬಗಳು ನೋವು ಅನುಭವಿಸುವಂತಾಗಿದೆ ಎಂದು ಮಾಜಿ ಶಾಸಕರು ಈ ಘಟನೆಯನ್ನು ಖಂಡಿಸಿದ್ದಾರೆ.

 

ಆನೆ ನಡೆದದ್ದೇ ದಾರಿ ಎಂಬ ಮಾತಿನಂತೆ ಖಾಸಗಿ ಬಸ್‌ಗಳು ನಡೆಸಿದ್ದೇ ನಿಯಮಗಳಾಗಿವೆ. ಖಾಸಗಿ ಬಸ್ ಚಲಿಸುವ ವೇಳೆ ಆ ರಸ್ತೆಯಲ್ಲಿ ಬೇರೆ ವಾಹನಗಳು ಸ್ವತಂತ್ರವಾಗಿ ಚಲಿಸಲು ಆಸ್ಪದವೇ ಇಲ್ಲದಂತೆ ಓವರ್‌ಟೇಕ್ ಮಾಡಿ ಹಾವಳಿ ಇಡುತ್ತಾರೆ. ಆದ್ದರಿಂದ ವಿಶೇಷವಾಗಿ ವೇಗಮಿತಿ ಕಡಿಮೆ ಮಾಡಬೇಕು. ನಿಗದಿ ಮಾಡಿರುವಷ್ಟು ಮಾತ್ರ ಪ್ರಯಾಣಿಕರನ್ನು ಸಾಗಿಸುವಂತೆ ಕಠಿಣ ನಿಯಮ ಜಾರಿಗೊಳಿಸಬೇಕು ಹಾಗೂ ಪ್ರಯಾಣಿಕರಿಗೂ ಸಹ ಇದರ ಬಗ್ಗೆ ಅರಿವು ಮೂಡಿಸಬೇಕು ಎಂದು ಮಾಜಿ ಶಾಸಕರು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version