ಗುಬ್ಬಿ ಶಾಸಕ ಎಸ್ ಆರ್ ಶ್ರೀನಿವಾಸ್ ಮೇಲೆ ಹರಿಹಾಯ್ದ ಬಿಜೆಪಿ ನಾಯಕರು.
ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನಲ್ಲಿ ಗುಬ್ಬಿ ಶಾಸಕ ಎಸ್ ಆರ್ ಶ್ರೀನಿವಾಸ್ ರವರು ಸಂಸದ ಜಿ ಎಸ್ ಬಸವರಾಜು ರವರ ನಿಂದಿಸಿದ ವಿರುದ್ಧ.ತುಮಕೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಬಿಜೆಪಿ ನಾಯಕರು ಗುಬ್ಬಿ ಶಾಸಕರ ವಿರುದ್ಧ ಹರಿಹಾಯ್ದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕುಂದರನಹಳ್ಳಿ ರಮೇಶ್ ಮಾತನಾಡಿ ಇಂದಿನ ಬೆಳವಣಿಗೆ ಪ್ರತಿಯೊಬ್ಬ ನಾಗರಿಕನು ಖಂಡಿಸುವಂಥ ವಿಷಯವಾಗಿದೆ ತುಮಕೂರು ಜಿಲ್ಲೆಯ ಹಿರಿಯ ಮುಖಂಡರು ಹಾಗೂ ಸಂಸದರ ಮೇಲೆ ಗುಬ್ಬಿ ಶಾಸಕ ಶ್ರೀನಿವಾಸ್ ರವರು ಬಳಸಿರುವ ಪದಗಳು ಹಾಗೂ ನಿಂದಿಸಿರುವ ವಿರುದ್ಧ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ಶಾಸಕರ ವಿರುದ್ಧ ಹರಿಹಾಯ್ದರು.
ಇನ್ನು ಕಳೆದ ಸರ್ಕಾರದಲ್ಲಿ ಎಕ್ಸ್ಪ್ರೆಸ್ ಕೆನಾಲ್ ಮೂಲಕ ಗುಬ್ಬಿ ತಾಲೂಕಿನ ಅಂಸಂದ್ರ ದಿಂದ ಹೇಮಾವತಿಯ 166ನೇ ಕಿಲೋಮೀಟರ್ ನಲ್ಲಿ ಹೇಮಾವತಿ ನೀರನ್ನು ಡೈವರ್ಟ್ ಮಾಡಲು ಯೋಜನೆ ರೂಪಿಸಲಾಗಿತ್ತು ನಂತರ ಹೇಮಾವತಿ ಲಿಂಕಿಂಗ್ ಕೆನಾಲ್ ಮಾಡಿದ್ದು ಆ ಕಾಮಗಾರಿ ಮುಂದುವರೆದಿದ್ದೆ ಹಾಗಿದ್ದರೆ ನಮ್ಮ ತುಮಕೂರು ಜಿಲ್ಲೆಯ ಭಾಗಕ್ಕೆ ಮರಣಶಾಸನ ಆಗುತ್ತಿತ್ತು ಅದರ ವಿರುದ್ಧ ತುಮಕೂರಿನ ಸಂಸದರಾದ ಜಿಎಸ್ ಬಸವರಾಜು ರವರು ಕಳೆದ ಎರಡು ವರ್ಷಗಳಿಂದ ನಿರಂತರ ಹೋರಾಟ ಮಾಡುವ ಮೂಲಕ ಸರ್ಕಾರದ ಗಮನ ಸೆಳೆದು ಸರ್ಕಾರದ ಮೇಲೆ ನಿರಂತರ ಒತ್ತಡ ತಂದಿರುವ ಮೂಲಕ ಆಯೋಜನೆಯನ್ನು ನಿಲ್ಲಿಸಲು ಸಿಎಂ ಯಡಿಯೂರಪ್ಪನವರು ಆದೇಶ ಮಾಡಿದರು ನಂತರ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಅದಕ್ಕೆ ಪೂರಕವಾಗುವಂತೆ ಯೋಜನೆ ರೂಪಿಸಿ ನಾಲೆಯ ಆಧುನೀಕರಣ ಮಾಡುವ ನಿರ್ಣಯವನ್ನು ಮುಖ್ಯಮಂತ್ರಿ ಯಡಿಯೂರಪ್ಪನವರ ಕೊನೆಯ ಸಂಪುಟ ಸಭೆಯಲ್ಲಿ ಅಂತಿಮವಾಗಿ ನಿರ್ಣಯ ಕೈಗೊಳ್ಳಲಾಗಿತ್ತು ನಂತರ ಕೋವಿಡ್ ಕಾರಣದಿಂದ ಟೆಂಡರ್ ಕರೆಯಲು ಸಾಧ್ಯವಾಗಿರಲಿಲ್ಲ ಆದರೆ ಈಗ ಸುಮಾರು 550 ಕೋಟಿ ಮೊತ್ತದ ಟೆಂಡರನ್ನು ಬಿ .ಎಸ್ .ಆರ್ ಇನ್ಫ್ರಾಸ್ಟ್ರಕ್ಚರ್ ರವರಿಗೆ ಟೆಂಡರ್ ನೀಡಿದೆ ಇಂತಹ ಸಂದರ್ಭದಲ್ಲಿ ಸ್ಥಳೀಯರೊಂದಿಗೆ ಮಾಹಿತಿ ವಿನಿಮಯ ಮಾಡಿಕೊಳ್ಳುವಂತಹ ಸಂದರ್ಭದಲ್ಲಿ ಗುಬ್ಬಿ ಶಾಸಕ ಶ್ರೀನಿವಾಸ್ ರವರು ಸಂಸದ ಜಿ ಎಸ್ ಬಸವರಾಜು ಮೇಲೆ ಏಕಾಏಕಿ ಸಂಸದರನ್ನು ನಿಂದಿಸಿದ್ದು ಅವರ ನಡವಳಿಕೆ ಅವರ ಮೇಲೆ ಬಳಸಿದ ಪದಪ್ರಯೋಗದ ವಿರುದ್ಧ ನಮ್ಮ ಹೋರಾಟ ಮುಂದುವರೆಯಲಿದೆ, ಮುಂದಿನ ದಿನದಲ್ಲಿ ಜಿಲ್ಲೆಯಾದ್ಯಂತ ಇದರ ಬಗ್ಗೆ ಜನಜಾಗೃತಿ ಮೂಡಿಸಲು ಕಾರ್ಯಕರ್ತರು ಮುಂದಾಗಲಿದ್ದಾರೆ ಎಂದರು.
ತುಮಕೂರು ಸಂಸದ ಜಿ ಎಸ್ ಬಸವರಾಜು ಅವರು ಅಭಿವೃದ್ಧಿ ವಿಚಾರದಲ್ಲಿ ಸಾಕಷ್ಟು ಹೋರಾಟಗಳನ್ನು ಮಾಡಿದ್ದಾರೆ ಆದರೆ ಶಾಸಕರಾದ ಅವರು ಕ್ಷೇತ್ರವನ್ನು ಅಭಿವೃದ್ಧಿ ಮಾಡಲು ಸಾಧ್ಯವಾಗಿಲ್ಲ ಆದರೆ ಸಂಸದರ ಅಭಿವೃದ್ಧಿ ಕಾರ್ಯಗಳನ್ನು ಸಹಿಸಲು ಆಗುತ್ತಿಲ್ಲ ಎಂದರು .
ಕಳೆದ ಸರ್ಕಾರದಲ್ಲಿ ಡಿಕೆ ಶಿವಕುಮಾರ್ ಹಾಗೂ ಸಂಸದ ಸುರೇಶ್ ರವರು ಅವರ ಭಾಗಕ್ಕೆ ನೀರನ್ನು ಕೊಂಡೊಯ್ಯಲು ಯೋಜನೆ ರೂಪಿಸಿದ್ದರು ಅದರ ವಿರುದ್ಧ ಎಂದು ಮಾತನಾಡದ ಗುಬ್ಬಿ ಶಾಸಕರು ಇಂದು ಏಕಾಏಕಿ ಸಂಸದರ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ.
ಶಾಸಕ ಡಿ.ಕೆ ಶಿವಕುಮಾರ್ ಹಾಗೂ ಸಂಸದ ಡಿ.ಕೆ ಸುರೇಶ್ ರವರ ವಿರುದ್ಧ ಹೋರಾಡಲು ಕೈಲಾಗದ ಶಾಸಕರು, ಅಂದು ಈ ವಿಚಾರವಾಗಿ ಎಂದು ತುಟಿಬಿಚ್ಚಲಿಲ್ಲ ಅವರ ಸರ್ಕಾರದಲ್ಲಿ ಆಗದ ಕೆಲಸವನ್ನು ಎಂದು ತುಮಕೂರು ಸಂಸದ ಜಿ ಎಸ್ ಬಸವರಾಜು ಮಾಡುವ ಮೂಲಕ ಕ್ಷೇತ್ರದ ಜನತೆಗೆ ಪರವಾಗಿದ್ದಾರೆ ಎಂದರು.
ಪಕ್ಷ ಬಿಡಲು ಯೋಜನೆ…..?
ಕಳೆದ ಕೆಲವು ತಿಂಗಳುಗಳಿಂದ ಗುಬ್ಬಿ ಶಾಸಕರು ಪಕ್ಷ ಬಿಡುವ ಊಹಾಪೋಹಗಳ ಎದ್ದಿರುವ ಬೆನ್ನೆಲ್ಲೆ ಡಿಕೆ ಶಿವಕುಮಾರ್ ರವರನ್ನು ಮೆಚ್ಚಿಸಲು ಈ ತರದ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಶಾಸಕರು ಇಸ್ಪೀಟ್ ನಲ್ಲಿ ತಲ್ಲೀನರಾಗಿದ್ದಾರೆ…
ಕ್ಷೇತ್ರದ ಜನತೆ ಹಾಗೂ ಕ್ಷೇತ್ರದ ಅಭಿವೃದ್ಧಿಗೆ ಮನಸು ಮಾಡದ ಶಾಸಕರು ಕೇವಲ ಇಸ್ಪೀಟ್ ಆಟದಲ್ಲಿ ತಲ್ಲೀನರಾಗಿದ್ದ ಕ್ಷೇತ್ರದ ಅಭಿವೃದ್ಧಿಯನ್ನು ಮರೆತಿದ್ದಾರೆ, ಅವರ ಅರ್ಧ ಜೀವನವನ್ನು ಕೇವಲ ಇಸ್ಪೀಟ್ ಆಟದಲ್ಲಿ ಕಳೆದಿರುವ ಶಾಸಕರು ಜನರ ಅಭಿವೃದ್ಧಿ ಹಾಗೂ ಕ್ಷೇತ್ರದ ಅಭಿವೃದ್ಧಿಯನ್ನು ಹೇಗೆ ತಾನೇ ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು.
ಇನ್ನು ಬಿಜೆಪಿ ಮುಖಂಡ ಹೆಬ್ಬಕ ರವಿ ಮಾತನಾಡಿ ಜಿಲ್ಲೆಯ ಹಿರಿಯ ಸಂಸದರ ಮೇಲೆ ಮಾಡಿರುವ ಆರೋಪ ಹಾಗೂ ನಿಂದಿಸಿರುವ ಬಗ್ಗೆ ಇಡೀ ಜಿಲ್ಲೆಯ ಜನ ಖಂಡಿಸುತ್ತಿದ್ದಾರೆ. ಯಾವುದೇ ಜಾತಿ ಪಕ್ಷ ಎನ್ನದೆ ಎಲ್ಲರೂ ಸಂಸದರ ಪರವಾಗಿದ್ದು ಎಲ್ಲರೂ ಗುಬ್ಬಿ ಶಾಸಕ ಎಸ್ ಆರ್ ಶ್ರೀನಿವಾಸ್ ರವರ ಹೇಳಿಕೆಗಳನ್ನು ಖಂಡಿಸುತ್ತಿದ್ದಾರೆ ಹಾಗಾಗಿ ಇಂಥ ಸಂದರ್ಭದಲ್ಲಿ ಜನ ಜಾಗೃತಿಯನ್ನು ಮೂಡಿಸುವ ಮೂಲಕ ಜನರಿಗೆ ಸತ್ಯವನ್ನು ತಿಳಿಸಲಿದ್ದೇವೆ ಎಂದರು.
ಇನ್ನು ಪತ್ರಿಕಾಗೋಷ್ಠಿಯಲ್ಲಿ ಮುಖಂಡ ಶಿವಪ್ರಸಾದ್ ಕೊಪ್ಪಳ ನಾಗರಾಜ್ ಸೇರಿದಂತೆ ಹಲವರು ಹಾಜರಿದ್ದರು.