ದ್ವಜ ಹಾರಿಸುವ ಕಂಬ ನೀಡುವ ವೇಳೆ ವಿದ್ಯುತ್ ಪ್ರವಹಿಸಿ ಬಾಲಕ ಸಾವು.

ದ್ವಜ ಹಾರಿಸುವ ಕಂಬ ನೀಡುವ ವೇಳೆ ವಿದ್ಯುತ್ ಪ್ರವಹಿಸಿ ಬಾಲಕ ಸಾವು.

 

ಇಡೀ ದೇಶವೇ ಸ್ವತಂತ್ರ ದಿನಾಚರಣೆಯ ಸಂಭ್ರಮದಲ್ಲಿ ಇದೆ ಆದರೆ ಇಂಥ ಸಂದರ್ಭದಲ್ಲಿ ತುಮಕೂರು ತಾಲೂಕಿನ ಕೋರ ಹೋಬಳಿಯ ಕರಿಕೆರೆ ಗ್ರಾಮದಲ್ಲಿನ ಸರ್ಕಾರಿ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಆಚರಣೆಯ ಸಮಯದಲ್ಲಿ ಧ್ವಜ ಹಾರಿಸಲು ಕಬ್ಬಿಣದ ಪೈಪನ್ನು ನೆಡುವ ಸಂದರ್ಭದಲ್ಲಿ ವಿದ್ಯುತ್ ಪ್ರವಹಿಸಿ ಬಾಲಕನೊಬ್ಬ ಮೃತ ಪಟ್ಟಿರುವ ಘಟನೆ ತುಮಕೂರು ತಾಲೂಕಿನ ಬ್ರಹ್ಮಸಂದ್ರ ಬಳಿಯ ಕರಿಕೆರೆ ಗ್ರಾಮದಲ್ಲಿ ನಡೆದಿದೆ.

 

ಇಂದು ಬೆಳಗ್ಗೆ ಧ್ವಜ ಹಾರಿಸುವ ಸಲುವಾಗಿ ತಂದಿದ್ದ ಕಬ್ಬಿಣದ ರಾಡನ್ನ ಬಳಸಿ ಧ್ವಜ ಹಾರಿಸಲು ಶಾಲಾ ಶಿಕ್ಷಕಿ ಸೇರಿದಂತೆ ಅದೇ ಗ್ರಾಮದ ಯುವಕರಾದ ಶಶಾಂಕ್ ,ಪವನ್ ಚಂದನ್ ಸೇರಿದಂತೆ ಹಲವರು ಮುಂದಾಗಿದ್ದರು. ಇದೇ ಸಂದರ್ಭದಲ್ಲಿ ಶಾಲಾ ಆವರಣದಲ್ಲೇ ಹಾದುಹೋಗಿದ್ದ 11 ಕೆವಿ ವಿದ್ಯುತ್ ಮಾರ್ಗಕ್ಕೆ ಕಬ್ಬಿಣದ ರಾಡ್ ತಾಕಿ ಸ್ಥಳದಲ್ಲಿದ್ದ ಶಶಾಂಕ್ ಹಾಗೂ ಪವನ್ ಅವರಿಗೆ ಕರೆಂಟ್ ಶಾಕ್ ತಗುಲಿತ್ತು ಅವರ ಜೊತೆಯಲ್ಲಿಯೇ ಇದ್ದ ಚಂದನ್ ಎನ್ನುವ ಮತ್ತೋರ್ವ ಬಾಲಕನಿಗೆ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಮೂವರು ಕುಸಿದುಬಿದ್ದರು ಇದನ್ನು ಗಮನಿಸಿದ ಗ್ರಾಮಸ್ಥರು ಕೂಡಲೇ ಮೂವರು ಬಾಲಕರ ತುಮಕೂರಿನ ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯದ ರವಾನಿಸಿದರು ಕೊನೆಗಳಿಗೆಯಲ್ಲಿ ಚಂದನ ಎನ್ನುವ ಬಾಲಕ ಘಟನೆಯಲ್ಲಿ ಅಸುನೀಗಿತು ಮತ್ತಿಬ್ಬರು ಬಾಲಕರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.

ಹಿಂದೂ ಅಚಾನಕ್ಕಾಗಿ ನಡೆದ ಘಟನೆಗೆ ಇಡೀ ಗ್ರಾಮವೇ ಕಂಬನಿ ಮಿಡಿದಿದೆ . ವಿನೋದ್ ತುಮಕೂರಿನ ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಮೃತಪಟ್ಟ ಚಂದನ್ ಪೋಷಕರ ರೋದನ ಮುಗಿಲು ಮುಟ್ಟಿತ್ತು.

 

ಇನ್ನು ನಡೆದ ಘಟನೆ ಹಿರಿಯ ಅಧಿಕಾರಿಗಳ ಗಮನಕ್ಕೆ ಬಂದ ಕೂಡಲೇ ಎಲ್ಲರೂ ಶ್ರೀ ದೇವಿ ಮೆಡಿಕಲ್ ಕಾಲೇಜಿಗೆ ದೌಡಾಯಿಸಿದರು.

 

ಇಂದು ನಡೆದ ಘಟನೆಗೆ ಸ್ಥಳೀಯವಾಗಿ ಇದ್ದ ಶಿಕ್ಷಕರ ಬೇಜವಾಬ್ದಾರಿಯಿಂದಾಗಿ ಘಟನೆ ನಡೆದಿದೆ ಮೃತರ ಪೋಷಕರು ಆರೋಪಿಸಿದ್ದಾರೆ.

 

ಶಾಲಾ ಆವರಣದಲ್ಲೇ ಹಾದು ಹೋಗಿರುವ ವಿದ್ಯುತ್ ಮಾರ್ಗ

 

ಘಟನೆಗೆ ಸಂಬಂಧಿಸಿದಂತೆ ಕೆರೆಕೆರೆ ಗ್ರಾಮದಲ್ಲಿನ ಸರ್ಕಾರಿ ಶಾಲಾ ಆವರಣದಲ್ಲಿ 11kv ಮಾರ್ಗದ ವಿದ್ಯುತ್ ಲೈನ್ಗಳು ಹಾದುಹೋಗಿದ್ದು ಅದರ ಬದಲಾವಣೆಗೆ ಗ್ರಾಮಸ್ಥರು ಹಲವು ಬಾರಿ ಬೆಸ್ಕಾಮ್ ಅಧಿಕಾರಿಗಳಿಗೆ ಮನವಿ ಮಾಡಿದರು. ಇನ್ನೂ ಎಚ್ಚೆತ್ತುಕೊಳ್ಳದ ಅಧಿಕಾರಿಗಳು ವಿದ್ಯುತ್ ಮಾರ್ಗವನ್ನು ಬದಲಾಯಿಸಲು ಮುಂದಾಗಿರಲಿಲ್ಲ ಆದಕಾರಣ ಇಂದು ಧ್ವಜ ಹಾರಿಸುವ ವೇಳೆ ಕಬ್ಬಿಣದ ಪೈಪಿಗೆ ವಿದ್ಯುತ್ ಪ್ರವಹಿಸಿ ಇಂಥ ದುರ್ಘಟನೆ ನಡೆಯಲು ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಶಾಲೆಯ 20 ಅಡಿ ದೂರದಲ್ಲಿರುವ ವಿದ್ಯುತ್ ಟ್ರಾನ್ಸ್ ಫಾರ್ಮರ್.

ಇನ್ನು ಘಟನೆಗೆ ಸಂಬಂಧಿಸಿದ ಶಾಲೆ ಆವರಣದಲ್ಲಿ ಕೇವಲ ಇಪ್ಪತ್ತು ಅಡಿ ದೂರದಲ್ಲಿ ವಿದ್ಯುತ್ ಟ್ರಾನ್ಸ್ಫಾರ್ಮರ್ ಇದ್ದು ಯಾವುದೇ ಸುರಕ್ಷತೆ ಇಲ್ಲದಿರುವುದು ಕಂಡುಬಂದಿದೆ.

 

ಕಬ್ಬಿಣದ ಪೈಪ್ ಅನ್ನ ನಿಲ್ಲಿಸಲು ತಡವಾಗಿ ಬಂದ ಗ್ರಾಮಸ್ಥ.

 

ಅದೇ ಗ್ರಾಮದ ಯುವಕನೊಬ್ಬ ಹಲವು ವರ್ಷಗಳಿಂದ ಸ್ವತಂತ್ರ ದಿನಾಚರಣೆ ವೇಳೆ ಕಬ್ಬಿಣದ ಪೈಪನ್ನು ನಿಲ್ಲಿಸಿ ಕಾರ್ಯಕ್ರಮದ ಮೇಲುಸ್ತುವಾರಿಯನ್ನು ನಿರ್ವಹಿಸುತ್ತಿದ್ದ ಎಂದು ತಿಳಿದುಬಂದಿದೆ. ಆದರೆ ಇಂದು ಆತ ತಡವಾಗಿ ಬಂದಿದ್ದು ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿದ್ದ ಯುವಕರು ತಾವೇ ಕಬ್ಬಿಣದ ಪೈಪ್ ಅನ್ನ ನಿಲ್ಲಿಸಲು ಮುಂದಾಗಿದ್ದರು. ನಂತರ ಆಕಸ್ಮಿಕವಾಗಿ ಕಬ್ಬಿಣದ ಪೈಪಿಗೆ ವಿದ್ಯುತ್ ಪ್ರವಹಿಸಿ ಇಂಥ ಘಟನೆ ನಡೆದಿದ್ದು ಎಲ್ಲರನ್ನೂ ಆತಂಕ ಮನೆಮಾಡಿದೆ.

 

ಸ್ಥಳಕ್ಕೆ ಮಾಜಿ ಉಪಮುಖ್ಯಮಂತ್ರಿ ಡಾಕ್ಟರ್ ಜಿ ಪರಮೇಶ್ವರ್ ಭೇಟಿ.

ಘಟನೆ ನಡೆದ ಕೂಡಲೇ ಮಾಜಿ ಉಪ ಮುಖ್ಯಮಂತ್ರಿಗಳು ಹಾಗೂ ಕೊರಟಗೆರೆ ಕ್ಷೇತ್ರದ ಶಾಸಕರಾದ ಡಾಕ್ಟರ್ ಜಿ ಪರಮೇಶ್ವರ್ ಆಸ್ಪತ್ರೆಗೆ ಭೇಟಿ ನೀಡಿ ಮೃತಪಟ್ಟ ಪೋಷಕರಿಗೆ ಸಾಂತ್ವನ ಹೇಳಿದರು.

 

ಅದೇನೇ ಇರಲಿ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಸುರಕ್ಷತಾ ಕ್ರಮ ದೊಂದಿಗೆ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಬೇಕಾ ಗಿತ್ತು ಆದರೆ ಆಕಸ್ಮಿಕವಾಗಿ ಬಂದ ಜವರಾಯನ ಆಟ ಬಾಲಕನೊಬ್ಬನ ಜೀವವನ್ನು ಕಸಿದಿದೆ. ಇನ್ನೂ ಮೃತಪಟ್ಟ ಚಂದನ್ ಕುಟುಂಬಕ್ಕೆ ಒಬ್ಬನೇ ಮಗನಾಗಿದ್ದು ಕುಟುಂಬಕ್ಕೆ ಆಧಾರವಾಗ ಬೇಕಾಗಿದ್ದ ಬಾಲಕ ಅಸುನೀಗಿದ್ದು ದುರದೃಷ್ಟಕರ.

 

ಇನ್ನು ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು, ತುಮಕೂರು ಡಿಡಿಪಿಐ ನಂಜಯ್ಯ, ಬೆಸ್ಕಾಂ ಇಂಜಿನಿಯರ್ಗಳು ಸೇರಿದಂತೆ ಹಲವು ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿದರು. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮುಂದಿನ ತನಿಖೆಯನ್ನು ಪೊಲೀಸರು ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version