ಕವಿ ಸಿದ್ದಲಿಂಗಯ್ಯನವರನ್ನು ಒಂದು ಜಾತಿಗೆ ಸೀಮಿತವಾಗಿ ಬಿಂಬಿಸುವುದು ಸರಿಯಲ್ಲ _ಎನ್ ನಿಧಿ ಕುಮಾರ್

 

ತುಮಕೂರು:

 

ನಾಡಿನ ಉದ್ದಗಲಕ್ಕೂ ಹೋರಾಟದ ಕಿಚ್ಚು ಹತ್ತಿಸಿ, ಬಂಡಾಯ ಸಾಹಿತ್ಯ ಪ್ರಕಾರಕ್ಕೆ ಕಾರಣೀಭೂತರಾದ ಕವಿ, ಚಿಂತಕ, ಹೋರಾಟಗಾರ ಸಿದ್ಧಲಿಂಗಯ್ಯ ಅವರನ್ನು ಜಾತಿಗೆ ಸೀಮಿತವಾಗಿ ಬಿಂಬಿಸುತ್ತಿರುವುದು ಸರಿಯಲ್ಲ ಎಂದು ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಎನ್.ಕೆ.ನಿಧಿಕುಮಾರ್ ಅಭಿಪ್ರಾಯಪಟ್ಟರು.

ನಗರದ ಟೌನ್‌ಹಾಲ್‌ನಲ್ಲಿ ಅಖಿಲಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿ, ಛಲವಾದಿ ಮಹಾಸಭಾ ವತಿಯಿಂದ ನಡೆದ ಕವಿ ಸಿದ್ಧಲಿಂಗಯ್ಯ ಅವರಿಗೆ ನುಡಿನಮನ ಸಲ್ಲಿಸಿ ಮಾತನಾಡಿದ ಅವರು, ಉಚ್ರಾö್ಛಯ ಸ್ಥಿತಿಯಲ್ಲಿದ ದಲಿತ ಸಂಘರ್ಷ ಸಮಿತಿ ಹೋರಾಟದಲ್ಲಿ ಸಕ್ರಿಯವಾಗಿ ಹೋರಾಟಗಾರರಲ್ಲಿ ಶಕ್ತಿಯನ್ನು ತುಂಬುವAತೆ ಹೋರಾಟ ಗೀತೆಗಳನ್ನು ರೂಪಿಸಿ ಮಾರ್ಗದರ್ಶನ ಮಾಡಿದರು, ಅವರಿಲ್ಲದೇ ರಾಜ್ಯದಲ್ಲಿ ದಲಿತ ಹೋರಾಟ ಈ ಮಟ್ಟ ತಲುಪುತ್ತಿರಲಿಲ್ಲ ಎಂದರು.

ದಲಿತ ಸಮುದಾಯ ಅನುಭವಿಸಿದ ನೋವುಗಳನ್ನೇ ಸಾಹಿತ್ಯವನ್ನಾಗಿ ರೂಪಿಸಿ, ಶೋಷಿತ ಸಮುದಾಯದ ಯುವಕರಲ್ಲಿ ಜಾಗೃತಿಯನ್ನು ಮೂಡಿಸುವ ಮೂಲಕ ದಲಿತ ಸಮುದಾಯದ ಯುವಕರು ವಿದ್ಯೆಯನ್ನು ಪಡೆಯುವ ಮೂಲಕ ಉನ್ನತ ಸ್ಥಾನಗಳನ್ನು ಪಡೆಯುವಂತೆ ಪ್ರೇರೇಪಿಸಿದ ಸಿದ್ಧಲಿಂಗಯ್ಯ ಅವರು ಬಹುಮುಖ ಪ್ರತಿಭೆ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ ಎಂದರು.

ಉಪನ್ಯಾಸಕರಾಗಿ, ನಾಟಕಕಾರರಾಗಿ, ವಿಧಾನ ಪರಿಷತ್ ಸದಸ್ಯರಾಗಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ದಕ್ಷತೆಯಿಂದ ಕಾರ್ಯನಿರ್ವಹಿಸಿದ ಅವರ ಸೇವೆ ಸ್ಮರಣೀಯವಾದದ್ದು, ತಣ್ಣನೆಯ ಮಾತುಗಳಿಂದಲೇ ಸಮುದಾಯ ಪ್ರಜ್ಞೆಯನ್ನು ಎಚ್ಚರಗೊಳಿಸುವಂತೆ ಮಾಡುತ್ತಿದ್ದ ಅವರು, ಶೋಷಿತ ಸಮುದಾಯವಷ್ಟೇ ಅಲ್ಲದೇ, ಇಡೀ ಬಡ, ದಲಿತ, ಹಿಂದುಳಿದ ವರ್ಗದ ಆಶಾಕಿರಣವಾಗಿದ್ದರು ಎಂದು ಅಭಿಪ್ರಾಯಪಟ್ಟರು.

ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿ ಯುವ ಘಟಕದ ಜಿಲ್ಲಾಧ್ಯಕ್ಷ ಗೋವಿಂದರಾಜು ಕೆ ಮಾತನಾಡಿ, ರಾಜ್ಯದಲ್ಲಿರುವ ಅಂಬೇಡ್ಕರ್ ಅಧ್ಯಯನ ಪೀಠಗಳ ಅಧ್ಯಕ್ಷರಾಗಿ ಸಿದ್ಧಲಿಂಗಯ್ಯ ಅವರು, ಅಂಬೇಡ್ಕರ್ ಚಿಂತನೆಗಳನ್ನು, ಅಧ್ಯಯನವನ್ನು ಜನರಿಗೆ ತಲುಪುವಂತೆ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅಂಬೇಡ್ಕರ್ ಬಗೆಗಿನ ಹೆಚ್ಚಿನ ಅಧ್ಯಯನದಿಂದಾಗಿಯೇ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯವಿದೆ ಎಂದು ನಂಬಿದ್ದರು ಎಂದರು.

ಅAಬೇಡ್ಕರ್ ಅವರ ಪ್ರಭಾವದಿಂದಲೇ ಬೌದ್ಧ ಧರ್ಮವನ್ನು ಪಾಲಿಸುತ್ತಿದ್ದ ಸಿದ್ಧಲಿಂಗಯ್ಯ ಅವರು, ಬೌದ್ಧ ಧರ್ಮದ ಸಮಾನತೆಯನ್ನು ಎಲ್ಲೆಡೆ ಪ್ರತಿಪಾದಿಸುತ್ತಿದ್ದರು, ಚಿಕ್ಕವರೊಂದಿಗೆ ಚಿಕ್ಕವರಾಗಿ ಬೆರೆಯುತ್ತಿದ್ದ ಅವರ ಸಹಜ ಗುಣದಿಂದಲೇ ಎಲ್ಲರನ್ನು ಆಕರ್ಷಿಸುತ್ತಿದ್ದರು, ಅದಕ್ಕಾಗಿಯೇ ದಲಿತ ಸಮುದಾಯದ ಆಶಾಕಿರಣವಾಗಿ ಗೋಚರಿಸುತ್ತಿದ್ದರು ಎಂದು ಅಭಿಪ್ರಾಯಪಟ್ಟರು.

ಈ ವೇಳೆ ಛಲವಾದಿ ಮಹಾಸಭಾ ಮುಖಂಡರಾದ ಟಿ.ಆರ್.ನಾಗೇಶ್, ಗುರುಪ್ರಸಾದ್ ಟಿ.ಆರ್, ಹೆಗ್ಗೆರೆ ಕೃಷ್ಣಪ್ಪ, ಎ.ಎಸ್.ರಾಜು, ಜಿ.ಆರ್.ಗಿರೀಶ್, ಮನು ಟಿ, ತಾಜುದ್ದೀನ್ ಷರೀಪ್, ಎಲ್ಲಪ್ಪ, ಸಿದ್ಧಲಿಂಗಯ್ಯ.ಕೆ.ಎನ್, ರಾಮಯ್ಯ ಪಿ.ಎನ್, ರಂಜನ್, ಸುರೇಶ್ ಜಿ.ಆರ್, ಕೆಸರುಮಡು ಗೋಪಾಲ್, ಹಬ್ಬತ್ತನಹಳ್ಳಿ ಶ್ರೀನಿವಾಸ್, ಸಿದ್ಧಲಿಂಗಯ್ಯ ಜಿ.ಸಿ, ಶಿವರಾಜು, ರಂಗಸ್ವಾಮಯ್ಯ ಸೇರಿದಂತೆ ಇತರರಿದ್ದರು.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version