ಮಂಗಳಮುಖಿಯರಿಗೆ ದಿನಸಿ ಕಿಟ್ ವಿತರಿಸಿದ_ ತುಮಕೂರು ಗ್ರಾಮಾಂತರ ಶಾಸಕ ಗೌರಿಶಂಕರ್

 

ಅಂಬೇಡ್ಕರ್ ಅವರ ಆಶಯದಂತೆ ದೇಶದ ಪ್ರತಿಯೊಬ್ಬರಿಗೂ ಸಮಾನತೆ ಸಿಗುವಂತಾಗಬೇಕು ಆದರೆ ಇಂದಿನ ದಿನಗಳಲ್ಲಿ ಸಮಾನತೆಯಲ್ಲಿ ಎಂಬುದು ಮರೀಚಿಕೆಯಾಗಿದೆ ಸಮಾನತೆಗಾಗಿ ದೇಶದ ಪ್ರತಿಯೊಬ್ಬರು ಹೋರಾಡುವಂತ ಸಂದರ್ಭಗಳು ನಿರ್ಮಾಣವಾಗುತ್ತಿರುವುದು ದುರದೃಷ್ಟಕರ ಎಂದು ತುಮಕೂರು ಗ್ರಾಮಾಂತರ ಶಾಸಕ ಗೌರಿಶಂಕರ್ ತಿಳಿಸಿದರು.

 

ತುಮಕೂರು ನಗರದ ಶೆಟ್ಟಿಹಳ್ಳಿ ಎಲ್ಲಿ ಇರುವ ರೇಣುಕಾದೇವಿ ದೇವಾಲಯದಲ್ಲಿ ಮಂಗಳಮುಖಿಯರಿಗೆ  ದಿನಸಿ ಕಿಟ್ ವಿತರಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಸಮಾನತೆ ಎಂಬುದು ಪ್ರತಿಯೊಬ್ಬರ ಹಕ್ಕು ಅದನ್ನು ಕಸಿದುಕೊಳ್ಳುವ ಪ್ರಯತ್ನ ವಾಗಬಾರದು ಇನ್ನು ಮಂಗಳಮುಖಿಯರ ಜೀವನ ಕಷ್ಟಕರವಾಗಿದ್ದು ಅವರು ಜೀವನ ನಡೆಸಲು ಹರಸಾಹಸಪಡುತ್ತಿದ್ದಾರೆ ಇನ್ನು ಅವರು ಬದುಕು ಕಟ್ಟಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ ಇಂಥ ಸಮಯದಲ್ಲಿ ಸಾರ್ವಜನಿಕರು ಅವರನ್ನು ತಾತ್ಸಾರ ಮನೋಭಾವದಿಂದ ನೋಡುವ ಬದಲು ನಮ್ಮ ಕುಟುಂಬದವರು ನಮ್ಮ ಅಕ್ಕ ತಂಗಿಯರು ಎನ್ನುವ ದೃಷ್ಟಿಯಿಂದ ಅವರನ್ನು ನಡೆಸಿಕೊಳ್ಳಬೇಕು ಆಗಮಾತ್ರ ಮನುಷ್ಯತ್ವಕ್ಕೆ ಬೆಲೆ ಸಿಕ್ಕಂತಾಗುತ್ತದೆ ಎಂದರು.

 

ಇದೇ ಸಂದರ್ಭದಲ್ಲಿ ಮಾತನಾಡಿದ ಮಂಗಳಮುಖಿಯರ ಜಿಲ್ಲಾಧ್ಯಕ್ಷರಾದ ದೀಪಿಕಾ ರವರು ಕರೋನ ಸಂಕಷ್ಟ ಕಾಲದಲ್ಲಿ ನಮ್ಮ ಜೀವನ ಕಷ್ಟದಲ್ಲಿದ್ದು ನಾವು ಕೂಡ ನಮ್ಮ ಜೀವನವನ್ನು ಕಟ್ಟಿಕೊಳ್ಳಲು ಹರಸಾಹಸಪಡುತ್ತಿದ್ದೇವೆ ನಮಗೆ ಇರಲು ಮನೆ ಇಲ್ಲ, ಜೀವನ ರೂಪಿಸಿಕೊಂಡು ಸ್ವಯಂ ಉದ್ಯೋಗ ಮಾಡಲು ಸರ್ಕಾರದಿಂದ ಯಾವ ಸೌಲತ್ತು ಸಿಗುತ್ತಿಲ್ಲ ಆದ್ದರಿಂದ ನಮ್ಮ ಸಮುದಾಯಕ್ಕೆ ಜೀವನ ರೂಪಿಸಿಕೊಳ್ಳಲು ಸ್ವಯಂ ಉದ್ಯೋಗ ಕಟ್ಟಿಕೊಂಡು ನಾವು ಕೂಡ ಎಲ್ಲರಂತೆ ಜೀವನ ನಡೆಸಬೇಕು ಎಂಬುದು ನಮ್ಮ ಆಶಯ ವಾಗಿದ್ದು ಇದಕ್ಕೆ ತಮ್ಮ ಸಹಕಾರ ಬೇಕೆಂದು ಕೋರಿದರು.

 

ಇದೇ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಶಾಸಕರಾದ ಗೌರಿಶಂಕರ್ ರವರು ನಿಮ್ಮ ಪರ ಧ್ವನಿ ಎತ್ತಲು ನಾನು ಸದಾ ಸಿದ್ದ ಮುಂದಿನ ದಿನಗಳಲ್ಲಿ ನಮ್ಮ ಪಕ್ಷದ ಮುಖಂಡರು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಸರ್ಕಾರದ ಗಮನ ಸೆಳೆಯಲು ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ತಿಳಿಸಿದರು ನಿಮ್ಮ ಸಮುದಾಯದ ಏಳಿಗೆಗಾಗಿ ತಾನು ಸದಾ ಸಿದ್ದನಿರುವುದಾಗಿ ತಿಳಿಸಿದರು. ಇದೇ ಸಂದರ್ಭದಲ್ಲಿ ಮಂಗಳಮುಖಿಯರಿಗೆ ದಿನಸಿ ಕಿಟ್ ವಿತರಿಸಿ ಸಂಘಕ್ಕೆ ಹತ್ತು ಸಾವಿರ ರೂಗಳ ದೇಣಿಗೆ ನೀಡಿದರು

 

ಇದೇ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ರಾಮಚಂದ್ರಯ್ಯ, ಜೆಡಿಎಸ್ ಐ. ಟಿ ವಿಂಗ್ ಜಿಲ್ಲಾಧ್ಯಕ್ಷರಾದ ದರ್ಶನ್, ವಿನಯ್ ಮಲ್ಲೇಶ್ ಸುಹಾಸ್ ಸೇರಿದಂತೆ ಹಲವರು ಹಾಜರಿದ್ದರು.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version