ಹೆದ್ದಾರಿಯಲ್ಲಿ ರಸ್ತೆಯುದ್ಧಕ್ಕೂ ಬೆಳೆದು ನಿಂತ ಗಿಡ ಗಂಟಿಗಳು ತೆರವು ಗೊಳಿಸದೆ ಅಧಿಕಾರಿಗಳ ನಿರ್ಲಕ್ಷ್ಯ
ನರಸೀಪುರ :- ಕೊಳ್ಳೇಗಾಲ ಮತ್ತು ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲವೇ ದಿನಗಳ ಹಿಂದೆ ಭೀಕರ ಅಪಘಾತ ನಡೆದು ಹದಿಮೂರು ಮಂದಿ ಪ್ರಾಣ ಚೆಲ್ಲಿದರು. ಅದೇ ರಸ್ತೆಯಲ್ಲಿಯೇ ಟಗರುಪುರ ಮತ್ತು ಮೂಗೂರು ಮಾರ್ಗ ಮಧ್ಯ ರಸ್ತೆಯ ಪಕ್ಕದಲ್ಲಿ ಬೆಳೆದು ರಸ್ತೆಯೊಳಗೆ ಬಾಗಿ ನಿಂತಿರುವ ಗಿಡ ಗಂಟಿಗಳನ್ನು ತೆರವು ಗೊಳಿಸದೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಲಕ್ಷ್ಯ ತೋರುತ್ತಿದೆ. ಹಾಗೂ ರಸ್ತೆಯಲ್ಲಿ ತಿರುವುಗಳು ಇರುವ ಕಾರಣ ಮುಂಬರುವ ವಾಹನಗಳು ಕಾಣದೆ ಅಪಘಾತಗಳು ಆಗುತ್ತಿದ್ದರು ಸಂಬಂಧ ಪಟ್ಟ ಇಲಾಖೆ ಕಣ್ಣು ಮುಚ್ಚಿ ಕುಳಿತಿದೆ.
ಇನ್ನು ಈ ರಸ್ತೆಗೆ ನಿರಂತರವಾಗಿ ಗರ್ಗೆಶ್ವರಿ ಸಮೀಪ ಟೋಲ್ ಸಂಗ್ರಹ ಮಾಡುತ್ತಿರುವುದು ನಾಚಿಕೆ ಗೇಡಿನ ಸಂಗತಿ. ಇನ್ನು ಈ ಟೋಲ್ ನಲ್ಲಿ ಯಾವುದೇ ಸರ್ವಿಸ್ ರಸ್ತೆ ಇಲ್ಲ ಹಾಗೂ ವಿಶ್ರಾಂತಿ ಕೊಠಡಿ ಇಲ್ಲ ವಾಹನ ಸವಾರರಿಗೆ ಶೌಚಾಲಯ ವ್ಯವಸ್ಥೆಯಂತೂ ಇಲ್ಲವೇ ಇಲ್ಲ ಗರ್ಗೆಶ್ವರಿ ಸಮೀಪದಲ್ಲಿ ಇರುವ ಟೋಲ್ ಅಂತೂ ಹಗಲು ದರೋಡೆಯoತಾಗಿದೆ.
ಸಂಬಂಧ ಪಟ್ಟ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಸ್ಥಳೀಯ ಶಾಸಕರು ಈ ರಸ್ತೆಯಲ್ಲಿ ವಾಹನ ಸವಾರರಿಗೆ ಅನುಕೂಲವಾಗುವಂತೆ ಸುಗಮ ಸಂಚಾರ ಮಾಡಲು ಮೂಲ ಸೌಕರ್ಯ ಒದಗಿಸದಿದ್ದರೆ ಮುಂದಿನ ದಿನಗಳಲ್ಲಿ ಹೊರಾಟ ನಡೆಸಲಾಗುವುದು ಎಂದು ಕರ್ನಾಟಕ ಭೀಮ್ ಸೇನೆ ಸಂಘಟನೆಯ ಚಾಮರಾಜನಗರ ಮತ್ತು ಮೈಸೂರು ಜಿಲ್ಲಾ ಅಧ್ಯಕ್ಷರು ಗಳಾದ ಮನು ಮೌರ್ಯ ಮತ್ತು ಅಶೋಕ್ ತುಂಬುಶೋಗೆ ಪತ್ರಿಕೆಗೆ ತಿಳಿಸಿದ್ದಾರೆ.
ವರದಿ :- ನಾಗೇಂದ್ರ ಪ್ರಸಾದ್