ಡಾ ಅಂಬೇಡ್ಕರ್ ವಿದ್ಯಾರ್ಥಿ ನಿಲಯ ವಾರ್ಷಿಕೋತ್ಸವ ಮತ್ತು 132ನೇ ಭೀಮ ಜಯಂತೋತ್ಸವ

ಡಾ ಅಂಬೇಡ್ಕರ್ ವಿದ್ಯಾರ್ಥಿ ನಿಲಯ ವಾರ್ಷಿಕೋತ್ಸವ ಮತ್ತು 132ನೇ ಭೀಮ ಜಯಂತೋತ್ಸವ

ಮೈಸೂರು :- ನಗರದ ಮಾನಸ ಗಂಗೋತ್ರಿಯಲ್ಲಿ ವಿದ್ಯಾಭ್ಯಾಸ ಮಾಡುವ ಹಾಸ್ಟೆಲ್ ವಿದ್ಯಾರ್ಥಿಗಳು ಆಯೋಜನೆ ಮಾಡಿದ ಡಾ ಬಿ ಆರ್ ಅಂಬೇಡ್ಕರ್ ವಿದ್ಯಾರ್ಥಿ ನಿಲಯದ ವಾರ್ಷಿಕೋತ್ಸವ ಮತ್ತು 132 ನೇ ಬಾಬಾಸಾಹೇಬ್ ಅಂಬೇಡ್ಕರ್ ರವರ ಜನ್ಮ ದಿನಾಚರಣೆಯನ್ನು ಬಹಳ ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು.ಅಂಬೇಡ್ಕರ್ ಜಯಂತಿಗೆ ಆಗಮಿಸಿದ ಹಲವಾರು ಗಣ್ಯರನ್ನು ವಿದ್ಯಾರ್ಥಿಗಳು ವಾದ್ಯಗೋಷ್ಠಿ ಮೂಲಕ ವೇದಿಕೆಗೆ ಬರಮಾಡಿಕೊಂಡು ವೇದಿಕೆಯಲ್ಲಿ ಬಾಬಾಸಾಹೇಬರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಗಣ್ಯರೆಲ್ಲ ಸೇರಿ ವೇದಿಕೆಯಲ್ಲಿ ದೀಪ ಬೆಳಗಿಸುವುದರ ಮೂಲಕ ಉದ್ಘಾಟನೆ ಮಾಡಿದರು.

 

ಇದೆ ವೇಳೆ ಮಾತನಾಡಿದ ಮೈಸೂರು ಮಾಜಿ ಮೇಯರ್ ಪುರುಷೋತ್ತಮ್ ರವರು ಈಗಿನ ಕಾಲದಲ್ಲಿ ಯುವಕರು ನಿಮಗೆ ವಂಚಿತವಾಗಿರುವ ಸೌಕರ್ಯ ಸೌಲಭ್ಯ ಇದರ ಬಗ್ಗೆ ಪ್ರಶ್ನೆ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು ಯುವಕರು. ಸುಮಾರು ತಿಂಗಳುಗಳಿಂದ ರಾಜ್ಯದಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ಕಡಿತವಾಗಿದೆ. ಅದರ ಬಗ್ಗೆ ಯಾವತ್ತಾದ್ರೂ ಹೋರಾಟ ಮಾಡಿದ್ದೀರಾ ನೀವು. ಈಗಿನ ಯುವಕರು ಹೋರಾಟದ ಮನೋಭಾವ ಹೆಚ್ಚಿಸಿಕೊಳ್ಳಬೇಕು ಅಂಬೇಡ್ಕರ್ ರವರು ಪ್ರತಿಯೊಬ್ಬ ವ್ಯಕ್ತಿಗೂ ಶಿಕ್ಷಣ ಸಿಗಲೇಬೇಕೆಂದು. ಹೋರಾಟ ಮಾಡಿ ನಮಗೆ ನೀಡಿದ್ದಾರೆ

ಶಿಕ್ಷಣ ಇಂದಿನ ಪೀಳಿಗೆಗೆ ತುಂಬಾ ಮುಖ್ಯ ನಿಮ್ಮ ಜ್ಞಾನ ಕ್ಕೆ ಪೂರಕವಾದ ವಿಚಾರಗಳನ್ನು ಪ್ರತಿಪಾದಿಸಬೇಕು ನಿಮಗಾಗಿ ನೀವು ವಿದ್ಯಾವಂತಾರಾಗಬೇಡಿ ಸಮಾಜದ ಒರೆಕೋರೆಗಳನ್ನು ತಿದ್ದುವಂತವರಗಬೇಕು ಆಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾದ್ಯ ದೇಶದಲ್ಲಿ ಸಮಾನತೆಯ ಸಮಾಜ ಕಟ್ಟುವ ಮಕ್ಕಳು ನೀವಾಗಿ ಸ್ವಾಭಿಮಾನದ ಬದುಕನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳೋಳ್ಳಿ ಇವತ್ತು ಸಾಧನೆ ಮಾಡುತ್ತಿರುವ ಬಡ ಮಕ್ಕಳು ಹಾಗೂ ಗ್ರಾಮೀಣ ಭಾಗದ ಮಕ್ಕಳು ಅಂಬೇಡ್ಕರ್ ಹೆಸರು ಯಾರು ಹೇಳ್ತೀರಾ ಅವರ ಹೆಸರು ಉಳಿಸುವವರ ಮಕ್ಕಳಾಗಿ ಈ ದೇಶದಲ್ಲಿ ಮತ ಹಾಕೋ ಹಕ್ಕನ್ನು ಕೊಟ್ಟಿದ್ದು ಬಾಬಾಸಾಹೇಬರು ಅದೇ ರೀತಿ ಅಂಬೇಡ್ಕರ್ ರು ಇಡೀ ಪ್ರಪಂಚವೇ ಮೆಚ್ಚುವ ಬೌದ್ಧ ದಮ್ಮವನ್ನು ನಮಗೆ ಕೊಟ್ಟಿದ್ದಾರೆ ಶಿಕ್ಷಣ ಸಮಾನತೆ.ಸಾಮಾಜಿಕ ಸಮಾನತೆ. ಪ್ರತಿಯೊಂದರಲ್ಲೂ ಬೌದ್ಧ ದಮ್ಮ ನಮಗೆ ಸಮಾನತೆಯ ದಮ್ಮವಾಗಿದೆ ಪ್ರತಿಯೊಬ್ಬರೂ ಅನುಸರಣೆ ಮಾಡಿ ಎಂದು ಹೇಳಿದರು.

 

 

 

 

 

 

 

 

 

 

 

 

 

 

 

 

ಇದೆ ವೇಳೆ ಮಾತನಾಡಿದ ಚಲನಚಿತ್ರ ನಟ ಚೇತನ್ ಅಹಿಂಸಾ ರವರು:ಅಂಬೇಡ್ಕರ್ ವಾದಿಗಳು ಅಂದರೆ ಸಮಾನತೆ ಸಮಾನತೆ ಅಂದ್ರೆ ಅಂಬೇಡ್ಕರ್ ಆ ನಿಟ್ಟಿನಲ್ಲಿ ಅಂಬೇಡ್ಕರ್ ರವರು ನಮಗೆ ಸ್ಫೂರ್ತಿ ಆಗಾಗಿ ನಮಗೆ ಯಾವುದೇ ಪಕ್ಷ ಅಥವಾ ವ್ಯಕ್ತಿಗಳು ವಿರೋಧವಲ್ಲ ಹಿಂದಿನಿಂದಲೂ ಅಸಮಾನತೆಯಿಂದ ತುಳುಕುತ್ತಿರುವ ವ್ಯವಸ್ಥೆಯೆ ನಮಗೆ ವಿರೋಧಿ. ಅದರ ವಿರುದ್ಧ ನೀವು ಹೋರಾಟ ಮಾಡ್ಬೇಕು.ನಮಗೆ ರೋಹಿತ್ ಚಕ್ರತೀರ್ಥ ಪಠ್ಯ ಪುಸ್ತಕನು ಬೇಡ ಬರಗೂರು ರಾಮಚಂದ್ರಪ್ಪ ರವರ ಪಠ್ಯ ಪುಸ್ತಕನು ಬೇಡ ನಮಗೆ ಸಮಾನತೆಯ ಪಠ್ಯ ಪುಸ್ತಕ ಬೇಕು. ಅಂಬೇಡ್ಕರ್ ವಾದ ಎಂದರೆ ಅಂಬೇಡ್ಕರ್ ರವರೆ ನಮಗೆ ಸ್ಫೂರ್ತಿ ಅಂಬೇಡ್ಕರ್ ರವರು ತೋರಿಸಿಕೊಟ್ಟ ಮಾರ್ಗವೇ ನಮ್ಮ ಉತ್ತಮ ಮಾರ್ಗ ಅನ್ಯಾಯ ಎಲ್ಲಿ ಆಗುತ್ತೆ ಅಲ್ಲಿ ನ್ಯಾಯದ ಪರ ಮಾತನಾಡುವವರು ನಾವಾಗಬೇಕು ಆಗ ನಾವು ಅಂಬೇಡ್ಕರ್ ಕೃಷ್ಣ ರಾಜ ಒಡೆಯರ್ ವಾದಿಗಳು ಆಗ್ತಿವಿ ಹಾಗೆಯೇ

ಸಾವಿರಾರು ರಾಜರು ಬಂದು ಹೋದರು ತಮ್ಮ ಸಾಮ್ರಾಜ್ಯ ಮತ್ತು ಜೀವನಕ್ಕಾಗಿ ಜನರನ್ನು ಬಳಸಕೊಂಡ್ರು ಆದರೆ ಸಾಮಾಜಿಕವಾಗಿ ಜನರ ಏಳಿಗೆಗಾಗಿ ರಾಜ್ಯ ಆಳಿದ ರಾಜರುಗಳು ಇದ್ದಾರೆ ಅದರಲ್ಲಿ ಮೀಸಲಾತಿ ಜನಕ ಶ್ರೀ ನಾಲ್ವಡಿ ಕೃಷ್ಣ ರಾಜ ಒಡೆಯರ್ ರವರು ನಮಗೆ ಸ್ಫೂರ್ತಿ ಲಿಂಗ ಸಮಾನತೆ ಪರವಾಗಿ ಹೋರಾಟ ಮಾಡುದ್ರು ಶಿಕ್ಷಣದ ಬಗ್ಗೆ ಅತೀ ಹೆಚ್ಚು ಆದ್ಯತೆ ಕೊಟ್ಟರು

 

 

 

ಅದರಿಂದ ಇವರು ನಮ್ಮ ಸರ್ವ ಸ್ರೇಷ್ಟ ನಾಯಕರು ಅವರ ಮಾರ್ಗದರ್ಶನವೇ ನಮಗೆ ಮೂಲ ದಾರಿ. ಹಿಂದುಳಿದ ವರ್ಗದವರಿಗೆ ಕ್ರಿಕೆಟ್ನಲ್ಲಿ ಮೀಸಲಾತಿ ಬೇಕೇ ಬೇಕು ಇದು ಅಗತ್ಯವಿದೆ.

 

 

 

 

 

 

 

 

 

 

 

ಈ ವಿಚಾರವಾಗಿ ಹೋರಾಟ ಮಾಡುವ ಸರ್ಕಾರ ನಮಗೆ ಬೇಕು. ಹಾಗೂ ಪ್ರಸ್ತುತ ಇರುವ ಸರ್ಕಾರ ರಾಜ್ಯದಲ್ಲಿ ಮಹಿಳೆಯರಿಗೆ ವಿಶೇಷ ಯೋಜನೆಗಳನ್ನು ರೂಪಿಸಿದೆ ಅದು ಸ್ವಾಗತರ್ಹ ಅದೇ ರೀತಿ ದೇಶದಲ್ಲಿ ಕೇವಲ ಒಂದು ಪರ್ಸೆಂಟ್ ಇರುವ ಜನರ ಹತ್ತಿರ ಶೇಕಡಾ ಎಂಬತ್ತರಷ್ಟು ಸಂಪತ್ತಿದೇ ಅವರಿಗೆ ಹೆಚ್ಚಿನ ತೆರಿಗೆ ವಿಧಿಸಿ ಬಡವರು. ಕೂಲಿ ಕಾರ್ಮಿಕರು. ಕಡು ಬಡವರಿಗೆ ಅನುಕೂಲ ಹಾಗುವ ರೀತಿ ಭೂಮಿ ಹಂಚಿಕೆ ಮಾಡಬೇಕು ಆರ್ಥಿಕ ಸಮಾನತೆ ಮಾಡುವ ಗುರಿ ಇರುವ ಸರ್ಕಾರ ನಮಗೆ ಮುಖ್ಯ ಎಂದು ಹೇಳಿದರೂ.

 

 

 

 

 

ಇನ್ನು ಈ ವೇದಿಕೆಯಲ್ಲಿ. ಮಾಜಿ ಸಚಿವ ಜಿ ಎನ್ ನಂಜುಂಡಸ್ವಾಮಿ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ ಹಾಲಿ ಸಚಿವರು ಎ ಆರ್ ಕೃಷ್ಣಮೂರ್ತಿ. ಕುಲಸಚಿವರು ಕೆಎಂ ಮಹಾದೇವನ್.ಮಹಾರಾಜ ಕಾಲೇಜು ಪ್ರಾಂಶುಪಾಲರು ಡಾಕ್ಟರ್ ಶ್ರೀಧರ್.ಮೈಸೂರು ಪೌರಾಡಳಿತ ಸದಸ್ಯರು ಪಲ್ಲವಿ ಬೇಗಮ್. ಇನ್ನು ಹಲವಾರು ಗಣ್ಯರು ಮತ್ತು ಯುವಕರು ಉಪಸ್ಥಿತರಿದ್ದರು.

 

ವರದಿ :- ನಾಗೇಂದ್ರ ಪ್ರಸಾದ್

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version