ಚಿನ್ನಹಳ್ಳಿ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ನರಸಿಂಹರಾಜು ಟಿ.ಕೆ. ಅವಿರೋಧವಾಗಿ ಆಯ್ಕೆ.
ಕೊರಟಗೆರೆ: ತಾಲೂಕು ಕೊಳಲ ಹೋಬಳಿಯ ಚಿನ್ನಹಳ್ಳಿ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ನರಸಿಂಹರಾಜು ಟಿ.ಕೆ. ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಉಪಾಧ್ಯಕ್ಷರಾಗಿ ವಿಜಯ ಮುಂದುವರೆದಿದ್ದು ಇಂದು ನಡೆದ ಚುನಾವಣೆಯಲ್ಲಿ ನರಸಿಂಹರಾಜು ಅವರನ್ನು ಎಲ್ಲಾ ಸದಸ್ಯರು ಅವಿರೋಧವಾಗಿ ಆಯ್ಕೆ ಮಾಡುವ ಮೂಲಕ ಮತ್ತೊಮ್ಮೆ ಚಿನ್ನಹಳ್ಳಿ ಪಂಚಾಯಿತಿ ಜೆಡಿಎಸ್ ವಶವಾಗಿದೆ.
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ನರಸಿಂಹರಾಜು ಟಿ.ಕೆ. ಮಾತನಾಡಿ ಈ ಪಂಚಾಯಿತಿಯನ್ನು ನಂಬರ್ ೧ ಗ್ರೇಡ್ ಗೆ ತೆಗೆದುಕೊಂಡು ಹೋಗುವುದರ ಜೊತೆಗೆ. ನರೇಗಾ ಕಾಮಗಾರಿಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಉದ್ಯೋಗ ಸೃಷ್ಟಿಸಿ, ಪಂಚಾಯಿತಿಯ ಯುವಜನರಿಗೆ ಮಹಿಳೆಯರಿಗೆ ಜಾಬ್ ಕಾರ್ಡ್ ಕೊಡುವ ಮೂಲಕ ಹೊಸ ಉದ್ಯೋಗ ಸೃಷ್ಟಿ ಮಾಡುತ್ತೇನೆ ಹಾಗೂ ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡುವುದರ ಜೊತೆಗೆ ಕುಡಿಯುವ ನೀರು ಚರಂಡಿ ರಸ್ತೆ ಅಭಿವೃದ್ಧಿಪಡಿಸಿ ಜನತೆಗೆ ಪೂರಕ ವಾತಾವರಣವನ್ನು ಸೂಚಿಸುತ್ತೇನೆ. ಎಲ್ಲಾ ಸದಸ್ಯರು ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿ ಕೆಲಸಗಳನ್ನು ಮಾಡುತ್ತೇನೆ ಎಂದು ತಿಳಿಸಿದರು.
ಉಪಾಧ್ಯಕ್ಷರಾದ ವಿಜಯಮ್ಮ ಮಾತನಾಡಿ ನೂತನ ಅಧ್ಯಕ್ಷರಿಗೆ ಅಭಿವೃದ್ಧಿ ಕೆಲಸ ಮಾಡಲು ಸಂಪೂರ್ಣ ಸಹಕಾರ ನೀಡುತ್ತೇನೆ ಹಾಗೂ ನನ್ನ ಅನುಭವಗಳನ್ನು ನೂತನ ಅಧ್ಯಕ್ಷರಿಗೆ ನೀಡಿ ಪಂಚಾಯತಿ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತೇವೆ ಎಂದರು.
ಮಾಜಿ ಜೆಡಿಎಸ್ ಜಿಲ್ಲಾ ಪಂಚಾಯಿತಿ ಸದಸ್ಯರಾದ ಶಿವರಾಮಯ್ಯ ಮಾತನಾಡಿ ಈ ಪಂಚಾಯಿತಿ ಜಾತಿ-ಮತಭೇದವಿಲ್ಲದೆ ಹಿರಿಯರನ್ನು ಕಿರಿಯರನ್ನು ಜೋತೆ-ಜೋತೆಗೆ ಕರೆದುಕೊಂಡು ಹೋಗುವ ಸಂಪ್ರದಾಯ ಹಿಂದಿನಿಂದಲೂ ಪಂಚಾಯಿತಿಯಲ್ಲಿ ನಡೆದುಬಂದಿದೆ.ಅಧ್ಯಕ್ಷ,ಉಪಾಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆ ಮಾಡುವುದು ಈ ಪಂಚಾಯಿತಿ ವಿಶೇಷವಾಗಿದೆ. ಮುಂದಿನ ದಿನಗಳಲ್ಲಿ ಕೂಡ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷರಗಳನ್ನು ಅವಿರೋಧವಾಗಿ ಆಯ್ಕೆ ಮಾಡುವ ಮೂಲಕ ವಿಷ ಪಂಚಾಯಿತಿಯಾಗಿ ಗುರುತಿಸಿಕೊಳ್ಳುತ್ತೆದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶಿವರಾಮಯ್ಯ, ಜಗದೀಶ್, ಸಿದ್ದಗಂಗಯ್ಯ ವಾಸುದೇವಮೂರ್ತಿ, ಸುರೇಶ್, ನಾಗರಾಜ್, ಮಲ್ಲಿಕಾರ್ಜುನಯ್ಯ, ಮಂಜುನಾಥ್, ಹರೀಶ್, ರಾಜೇಶ್, ಮುಂತಾದವರು ಅಧ್ಯಕ್ಷರ ಆಯ್ಕೆ ಸಕ್ರಿಯವಾಗಿ ಭಾಗವಹಿಸಿದ್ದರು.
ಪಂಚಾಯತಿಯ ಸದಸ್ಯರುಗಳಾದ ವಿಜಯ್, ಸುಜಾತ, ಯಶೋದ, ಲಕ್ಷ್ಮಮ್ಮ, ಭಾಗ್ಯ ಅಶ್ವಥ್, ಚಂದ್ರಣ್ಣ, ನಾಗೇಂದ್ರಪ್ಪ ,ನಾಗರಾಜು ,ರವಿಕುಮಾರ್,ನೂತನ ಅಧ್ಯಕ್ಷರಿಗೆ ಶುಭಾಶಯ ಕೋರಿ ಮುಂಬರುವ ದಿನಗಳು ಒಳ್ಳೆಯ ಅಭಿವೃದ್ಧಿ ಕೆಲಸವಾಗಲಿ ಎಂದು ಹರಸಿದರು.
ವರದಿ_ಮಾರುತಿ ಪ್ರಸಾದ್ ತುಮಕೂರು