ತುಮಕೂರು ನಗರ ವಿ.ಸ ಕ್ಷೇತ್ರದಲ್ಲಿ ಹದಿನೈದು ಸಾವಿರಕ್ಕೂ ಹೆಚ್ಚು ಹಿಂದೂ ಮತದಾರರನ್ನು ಕೈ ಬಿಟ್ಟಿದ್ದಾರೆ- ಪಂಚಾಕ್ಷರಯ್ಯ ಗಂಭೀರ ಆರೋಪ
ತುಮಕೂರು ನಗರದಲ್ಲಿ ಇತ್ತೀಚೆಗೆ ಮತದಾರರ ಪಟ್ಟಿಯಲ್ಲಿ ಹೆಸರುಗಳನ್ನು ಕೈ ಬಿಡಲಾಗಿದೆ, ತೆಗೆದುಹಾಕಲಾಗಿದೆ, ಇತ್ಯಾದಿಯಾಗಿ ಮತದಾರರ ಪಟ್ಟಿಯಲ್ಲಿನ ಗೊಂದಲಗಳ ಸರಮಾಲೆಯನ್ನೇ ಹಲವಾರು ನಾಯಕರು ಬಹಿರಂಗವಾಗಿ ಅಥವಾ ಮಾದ್ಯಮಗಳ ಮೂಲಕ ಹೇಳಿಕೆಗಳನ್ನು ನೀಡುತ್ತಿದ್ದಾರೆ ಅಷ್ಟೇ, ಆದರೆ ಯಾರೂ ಸಹ ಯಾವ ಯಾವ ಬೂತುಗಳಲ್ಲಿ ಎಷ್ಟೇ ಎಷ್ಟು ಮತದಾರರನ್ನು ಕೈಬಿಡಲಾಗಿದೆಂದು ಯಾರೂ ಸ್ಪಷ್ಟೀಕರಣ ನೀಡುವಂತಹ ಕೆಲಸವನ್ನು ಮಾಡುತ್ತಿಲ್ಲ.
ಇದರ ಬೆನ್ನಲ್ಲೇ ಕಳೆದ ಬಾರಿ ಚುನಾವಣೆ ಸಂದರ್ಭದಲ್ಲಿ ಬೋಗಸ್ ಮತದಾರರ ವಿರುದ್ಧ ಕಾನೂನು ಹೋರಾಟ ಮಾಡಿದ್ದ ಸಾಮಾಜಿಕ ಹೋರಾಟಗಾರ ಸದಾಶಿವನಗರದ ನಿವಾಸಿ ಎಂ.ಬಿ.ಪಂಚಾಕ್ಷರಯ್ಯ ಮತ್ತೊಮ್ಮೆ ಸುದ್ಧಿಯಲ್ಲಿದ್ದು, ಮುಂಬರುವ ಚುನಾವಣಾ ಮತದಾರರ ಪಟ್ಟಿಯಲ್ಲಿನ ಲೋಪದೋಷಗಳ ಬಗ್ಗೆ ಧ್ವನಿ ಎತ್ತಿದ್ದು ಇದರ ಬೆನ್ನಲ್ಲೆ ರಾಜಕೀಯ ಪಕ್ಷಗಳು ಸಹ ಮತದಾರ ಪಟ್ಟಿಯಲ್ಲಿನ ಲೋಪ ದೋಷಗಳನ್ನು ಹುಡುಕುವಲ್ಲಿ ನಿರತರಾಗಿದ್ದಾರೆಂದು ತಿಳಿಸುತ್ತಾರೆ.
ಇದಕ್ಕೆ ಸಂಬಂಧಿಸಿದಂತೆ ಮತ್ತೊಂದು ಸ್ಪೋಟಕ ಮಾಹಿತಿಯನ್ನು ನೀಡಿರುವ ಎಂ.ಬಿ.ಪಂಚಾಕ್ಷರಯ್ಯ ತುಮಕೂರು ನಗರಸಭಾ ವಿಧಾನಸಭಾ ಕ್ಷೇತ್ರದಲ್ಲಿ ೧೫ ಸಾವಿರಕ್ಕೂ ಅಧಿಕ ಹಿಂದು ಸಮುದಾಯದ ಮತದಾರರನ್ನು ಮತಪಟ್ಟಿಯಿಂದ ಕೈ ಬಿಟ್ಟಿದ್ದಾರೆ / ತೆಗೆದುಹಾಕಲಾಗಿದೆಂದು ಬಹಿರಂಗಪಡಿಸಿದ್ದಾರೆ.
ಪಂಚಾಕ್ಷರಯ್ಯ ಸಂಬಂಧಪಟ್ಟ ಇಲಾಖೆಯಿಂದ ಮಾಹಿತಿ ಹಕ್ಕು ಅಧಿನಿಯಮದಡಿ ಮಾಹಿತಿಯನ್ನು ಸಂಗ್ರಹಿಸಿದ್ದು ಇದರೊಂದಿಗೆ ತುಮಕೂರು ನಗರದ ೨೫೪ ವಿವಿಧ ಮತಗಟ್ಟೆಗಳನ್ನು ಸಂಪರ್ಕ ಮಾಡಿ ಅಲ್ಲಿನ ಮಾಹಿತಿಯನ್ನೂ ಸಹ ಸಂಗ್ರಹಿಸಿದ್ದು ಈ ಪ್ರಕರಣಕ್ಕೆ ಅವರ ಹೇಳಿಕೆ ಪುಷ್ಠಿಯನ್ನು ನೀಡುತ್ತದೆ.
ಇನ್ನುಳಿದಂತೆ ಕಳೆದ ೨೦೨೨ರ ಜನವರಿ ಮಾಹೆಯಲ್ಲಿ ಜಿಲ್ಲಾ ಮತದಾರರ ಪರಿಷ್ಕೃತ ಪಟ್ಟಿಯನ್ನು ಜಿಲ್ಲಾಡಳಿತದಿಂದ ಹೊರತಂದಿದ್ದು, ಅದರಲ್ಲಿಯೇ ೧೭೯೩೭ ಮತದರರನ್ನು ಕಳೆದ ೧೦ ತಿಂಗಳ ಹಿಂದೆಯೇ ತೆಗೆದು ಹಾಕಲಾಗಿದೆಂಬ ಮಾಹಿತಿಯನ್ನು ಮಹಾನಗರ ಪಾಲಿಕೆಯ ಚುನಾವಣಾ ಸಿಬ್ಬಂದಿ, ಜಿಲ್ಲಾ ಚುನಾವಣಾ ಶಾಖೆಯ ಸಿಬ್ಬಂದಿ, ಇನ್ನಿತರೆ ಸಿಬ್ಬಂದಿಗಳು ಆ ಸಮಯಕ್ಕೆ ತೆಗೆದು ಹಾಕಿದ್ದಾರೆಂಬುದು ಗಂಭೀರ ಆರೋಪವಾಗಿದೆ.
ಕಳೆದ ೨೦2೨ರ ಜುಲೈ ಮಾಹೆಯಲ್ಲಿ ಕೇಂದ್ರ ಸರ್ಕಾರ ವೋಟರ್ ಐಡಿಗೆ ಆಧಾರ್ ಲಿಂಕ್ ಮಾಡಲು ಆದೇಶ ಹೊರತಂದಿದ್ದು, ನಂತರ ನಗರದ ಕೆಲ ಮತದಾರರು ಆಧಾರ್ ಲಿಂಕ್ ಮಾಡುವ ಸಂದರ್ಭದಲ್ಲಿ ಬೃಹತ್ ಪ್ರಮಾಣದ ಮತದಾರರನ್ನು ಕೈ ಬಿಟ್ಟಿರುವುದು ಬೆಳಕಿಗೆ ಬಂದಿದೆಂದು ತಿಳಿಸಿದ್ದಾರೆ.
ತುಮಕೂರು ನಗರ ವಿಧಾನಸಭೆಯ ೨೫೪ ಮತಗಟ್ಟೆಗಳಲ್ಲಿ ಈಗಾಗಲೇ ಕೈಬಿಟ್ಟಿರುವ ಮತದಾರರು ಯಾವುದೇ ವಿಧವಾದ ಅಂದರೆ ತಿದ್ದುಪಡಿ ಪಟ್ಟಿ, ಡಿಲೀಟ್ ಆಗಿರುವ ಪಟ್ಟಿ, ವರ್ಗಾವಣೆ ಪಟ್ಟಿ, ಮರಣಹೊಂದಿರುವ ಪಟ್ಟಿಗಳಲ್ಲಿ ಕಾಣ ಸಿಗುತ್ತಿಲ್ಲ, ಅಂದರೆ ಇವರುಗಳನ್ನು ಈ ಅಧಿಕಾರಿಗಳು ನಾಪತ್ತೆ ಮಾಡಿಬಿಟ್ಟರಾ!!!!!! ಇವರುಗಳನ್ನು ಬದುಕಿದ್ದು ಸತ್ತಂತೆ ಮಾಡುವ ಪ್ರಯತ್ನವನ್ನು ಈ ಅಧಿಕಾರಿಗಳ ಲೋಪದಿಂದ ಆಗಿದೆಂದು ಗಂಭೀರವಾದ ಸ್ಪಷ್ಠೀಕೃತ ವಿಸ್ತೃತ ಮಾಹಿತಿಯನ್ನು ಪಂಚಾಕ್ಷರಯ್ಯರವರು ನೀಡಿದ್ದು, ಉಳಿದಂತೆ ತುಮಕೂರು ನಗರದಲ್ಲಿ ಒಟ್ಟಾರೆ ೧೮೫೫೩ ಮತದಾರರನ್ನು ಈ ಬಾರಿಯ ಮತಪಟ್ಟಿಯಲ್ಲಿ ಕೈಬಿಟ್ಟಿದ್ದು, ಅದರಲ್ಲಿ ೧೫ ಸಾವಿರಕ್ಕೂ ಅಧಿಕ ಮತದಾರರು ಹಿಂದೂಗಳೇ ಆಗಿರುತ್ತಾರೆಂದು ಪಂಚಾಕ್ಷರಯ್ಯರವರು ಸ್ಪಷ್ಠೀಕರಣ ನೀಡುತ್ತಾರೆ.
ಉಳಿದಂತೆ ಎರಡು ಸಾವಿರಕ್ಕೂ ಅಧಿಕ ಮಂದಿ ಅಲ್ಪಸಂಖ್ಯಾತರು, ಕ್ರೈಸ್ತ ಸಮುದಾಯದವರು, ಇನ್ನುಳಿದ ಸಮುದಾಯದ ಮತದಾರರುಗಳಾಗಿದ್ದಾರೆಂದು ತಿಳಿಸಿದ್ದಾರೆ.
ಒಟ್ಟಾರೆಯಾಗಿ ಅತ್ಯಧಿಕ ಹಿಂದು ಮತದಾರರನ್ನು ಮತಪಟ್ಟಿಯಿಂದ ತೆಗೆದುಹಾಕುವಲ್ಲಿ ಈಗಿನ ಸರ್ಕಾರ, ಅಧಿಕಾರಿ ವರ್ಗ, ಚುನಾವಣಾ ಇಲಾಖೆಯವರ ನಡೆ ಅಚ್ಚರಿಯನ್ನೂ ಮೂಡಿಸುತ್ತಿದೆಂದು ಆರೋಪಿಸಿದ್ದಾರೆ. ಇದರೊಂದಿಗೆ ತಾವು ಯಾವೊಬ್ಬ ಅಧಿಕಾರಿಯನ್ನು ಸಂಪರ್ಕಿಸಿಲ್ಲ ಕಾರಣ ಕಳೆದ ಬಾರಿಯ ಚುನಾವಣೆಯ ಸಂದರ್ಭದಲ್ಲಿ ಬೋಗಸ್ ಮತದಾರರ ವಿರುದ್ಧ ಹೋರಾಟವನ್ನು ನಾನು ಮಾಡಿದ್ದು, ಅದಕ್ಕೆ ಸಂಬಂಧಿಸಿದಂತೆ ಅಂತಿಮ ವರದಿಯನ್ನೂ ಸಹ ಇದುವರೆವಿಗೂ ನನಗೆ ನೀಡಿಲ್ಲ, ರಾಜ್ಯ ಚುನಾವಣಾ ಆಯೋಗವೂ ಸಹ ನಿರ್ದೇಶನ ನೀಡಿದ್ದರೂ, ಸ್ಥಳೀಯ ಚುನಾವಣಾ ಇಲಾಖೆಯವರು ಉದಾಸೀನತೆಯಿಂದ ಇದುವರೆವಿಗೂ ಸ್ಪಷ್ಠೀಕರಣ ನೀಡಿದೇ ಇರುವುದರ ಪ್ರಯುಕ್ತ ನಾನು ಯಾರೊಬ್ಬ ಅಧಿಕಾರಿಯನ್ನು ಭೇಟಿ ಮಾಡಿರುವುದಿಲ್ಲ.
ಆದರೆ ಈ ಬೃಹತ್ ಪ್ರಮಾಣದಲ್ಲಿ ಮತದಾರರನ್ನು ಮತಪಟ್ಟಿಯಿಂದ ತೆಗೆದುಹಾಕಿರುವುದರ ವಿರುದ್ಧ ನನ್ನ ಹೋರಾಟ ನಿರಂತರವಾಗಿರುತ್ತದೆಂದು ಖಡಕ್ ಸಂದೇಶ ರವಾನಿಸಿದ್ದಾರೆ.
ಚುನಾವಣೆ ಹೊಸ್ತಿಲಲ್ಲಿ ಈ ರೀತಿಯಾದ ಆವಾಂತರಗಳು ಬೇಕಿತ್ತಾ ಎಂಬುದೇ ಪ್ರಜ್ಞಾವಂತ ನಾಗರೀಕರ ಪ್ರಶ್ನೆಯಾಗಿದೆ ಎಂಬುದು ಪಂಚಾಕ್ಷರಯ್ಯನವರ ಸಂದೇಶ !!!!!