ಮೊಬೈಲ್ ಲ್ಯಾಬ್ ವಾಹನಕ್ಕೆ ಸಚಿವ ಜೆ.ಸಿ. ಮಾಧುಸ್ವಾಮಿ ಚಾಲನೆ

 

ತುಮಕೂರು

 

ಗ್ರಾಮೀಣ ಪ್ರದೇಶಗಳಲ್ಲಿಯೂ ವೈದ್ಯಕೀಯ ಸೌಲಭ್ಯಗಳ ಕೊರತೆ ನೀಗಿಸುವ ಮತ್ತು ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಲ್ಯಾಬ್ ಬ್ಯುಲ್ಟ್ ಆನ್‌ ವೀಲ್ಸ್ (ಮೊಬೈಲ್‌ ಲ್ಯಾಬ್ ವಾಹನ) ಮೊಬೈಲ್ ಕ್ಲಿನಿಕ್ ವಾಹನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಚಾಲನೆ ನೀಡಿದರು.

 

ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿಂದು ಬೆಂಗಳೂರು ಹೈಗ್ರೌಂಡ್ಸ್ ರೋಟರಿಯವರು ಸಾಯಿಕಾರ್ಪ ಸಂಸ್ಥೆಯೊಂದಿಗೆ ಸೇರಿ AUTOMOTIVE AXLE ರವರ CSR ನಿಧಿ ಹಾಗೂ TATA Medical and Dianostic ಸಂಸ್ಥೆಯವರ CRISPR ತಂತ್ರಜ್ಞಾನದ ಉಪಕರಣ ಬಳಸಿಕೊಂಡು ತಯಾರಿಸಲಾಗಿರುವ ಈ ಮೊಬೈಲ್ ಲ್ಯಾಬ್ ವಾಹನವನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಲಾಯಿತು.

 

ಹಸ್ತಾಂತರದ ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.‌ಮಾಧಸ್ವಾಮಿ ಅವರು ಚಾಲನೆ ‌ನೀಡಿದರು. ಶಾಸಕರು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ವಾಹನಕ್ಕೆ‌ ಪೂಜೆ ಸಲ್ಲಿಸಿ‌ ಕ್ಲಿನಿಕ್ ಲ್ಯಾಬ್ ಮತ್ತು ಫಾರ್ಮಸಿಯನ್ನು ವಿಕ್ಷೀಸಿದರು.

 

 

 

*ವಾಹನದ ವಿಶೇಷ:*

CRISPR ತಂತ್ರಜ್ಞಾನದ TATAMD CHECK ಉಪಕರಣವಿರುವ ಈ ಮೊಬೈಲ್ ಲ್ಯಾಬ್ ವಾಹನವನ್ನು BSL2 ಮಾನದಂಡದೊಂದಿಗೆ ತಯಾರಿಸಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಎರಡನೇ ಅಲೆಯ ಕೋಡ್ 19 ವೈರಾಣುವಿನ ನಿಯಂತ್ರಣ ಮತ್ತು ಮೂರನೆ ಅಲೆಗೆ ಮುನ್ನಚ್ಚರಿಕಾ ಕ್ರಮವಾಗಿ ವೈದ್ಯರ ನಡೆ ಹಳ್ಳಿಗಳ ಕಡೆ ಎಂಬ ಅಭಿಯಾನಕ್ಕೆ ಪೂರಕವಾಗಿ ಸೇವೆ ಸಲ್ಲಿಸಲು ಸಿದ್ಧವಾಗಿದ್ದು ಇಂದು‌ ಅಧಿಕೃತವಾಗಿ ಜಿಲ್ಲೆಯಲ್ಲಿ ಲೋಕಾರ್ಪಣೆಗೊಂಡಿದೆ. ಸುಮಾರು ಒಂದು ಮುಕ್ಕಾಲು ಕೋಟಿ ರೂ. ವೆಚ್ಚದಲ್ಲಿ ತಯಾರಿಸಲಾಗಿರುವ ಈ ಮೊಬೈಲ್ ಲ್ಯಾಬ್‌ ವಾಹನವು ಲ್ಯಾಬ್, ಕ್ಲಿನಿಕ್ ಮತ್ತು ಫಾರ್ಮಸಿಯನ್ಜು ಹೊಂದಿದ್ದು ಒಂದೇ ಸೂರಿನಡಿ ಆರೋಗ್ಯ ಸಿಬ್ಬಂದಿ ಮತ್ತು ವೈದ್ಯರು ಗ್ರಾಮೀಣ ಪ್ರದೇಶಗಳಿಗೆ ತೆರಳಿ ವೈದ್ಯಕೀಯ ನೆರವನ್ನು ಸಕಾಲದಲ್ಲಿ ನೀಡಲು ಸಹಾಯವಾಗುತ್ತದೆ. ದೇಶದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಕರ್ನಾಟಕದಲ್ಲಿ ಈ ಎಲ್ಲಾ ಸವಲತ್ತುಗಳುಳ್ಳ ಮೊಬೈಲ್ ಕ್ಲಿನಿಕ್ ತುಮಕೂರಿನಲ್ಲಿ ಲೋಕಾರ್ಪಣೆಗೊಂಡಿದೆ. ದೇಶಕ್ಕೆ ಮಾದರಿಯಾದ ಉತ್ಕೃಷ್ಟ ದರ್ಜೆಯ ಮೊಬೈಲ್ ಲ್ಯಾಬ್‌ನಲ್ಲಿ ಸುಮಾರು 10 ರಿಂದ 12 ಗಂಟೆಯ ಅವಧಿಯಲ್ಲಿ 1000 ಕ್ಕೂ ಹೆಚ್ಚು ಕೋವಿಡ್ ಟೆಸ್ಟ್ ಮಾಡಬಹುದು. ಅಲ್ಲದೆ ಈ ವಾಹನದಲ್ಲಿ ನೊಬಲ್ ಪ್ರಶಸ್ತಿ ವಿಜೇತ CRISPR ತಂತ್ರಜ್ಞಾನದ TATAMD CHECK ಉಪಕರಣ 2 ರಿಂದ 8 ಡಿಗ್ರಿ ಮತ್ತು 16 ರಿಂದ -21 ಡಿಗ್ರಿಯ ಎರಡು ರೆಫ್ರಿಜಿರೇಟರ್ ಇದ್ದು, ಕೋವಿಡ್ ವ್ಯಾಕ್ಸಿನ್ ಮತ್ತಿತರ ಔಷಧಿಗಳನ್ನು ಗ್ರಾಮೀಣ ಪ್ರದೇಶಗಳಲ್ಲಿ ನೀಡಲು ಉಪಯುಕ್ತವಾಗಿದೆ. ತಡೆಯಿಲ್ಲದೆ ವಿದ್ಯುತ್ ಪೂರೈಕೆಗಾಗಿ 5KVAಯ ಸೋಲಾರ್‌ ಮತ್ತು ಯುಪಿಎಸ್ ಹೊಂದಿದ್ದು, ಟೆಲಿಮೆಡಿಸಿನ್ ಮುಖಾಂತರ ನುರಿತ ವೈದ್ಯರೊಂದಿಗೆ ಸಂಪರ್ಕ ಹೊಂದಬಹುದಾಗಿದೆ. ಕೋವಿಡ್ ನಂತರವೂ ಕೂಡ ಉಪಯೋಗಿಸುವಂತೆ ಲ್ಯಾಬ್ ಅನ್ನು ವಿನ್ಯಾಸಗೊಳಿಸಲಾಗಿದ್ದು, ಗ್ರಾಮೀಣ ಭಾಗದ ಜನರಿಗೆ ನಿರಂತರವಾಗಿ ವೈದ್ಯಕೀಯ ಸೌಲಭ್ಯಗಳನ್ನು ನೀಡಲು ಸಹಾಯವಾಗುತ್ತದೆ.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version