ಸರ್ಕಾರ ಎಂದು ನಿಂತ ನೀರಲ್ಲ _ಸಚಿವ ವಿ ಸೋಮಣ್ಣ.

ಸರ್ಕಾರ ಎಂದು ನಿಂತ ನೀರಲ್ಲ _ಸಚಿವ ವಿ ಸೋಮಣ್ಣ.

 

ಸರ್ಕಾರ ಎಂದಿಗೂ ನಿಂತ ನೀರಲ್ಲ ಅದು ಸದಾ ಹರಿಯುವ ನೀರು ರಾಜ್ಯದ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜ್ಯವನ್ನು ಸಮರ್ಥವಾಗಿ ಮುನ್ನಡೆಸಲಿದ್ದಾರೆ ಎಂದು ನೂತನ ಸಚಿವ ವಿ ಸೋಮಣ್ಣ ತಿಳಿಸಿದರು.

 

ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಂಪುಟಕ್ಕೆ ಸೇರ್ಪಡೆಯಾದ ನೂತನ ಸಚಿವ ವಿ ಸೋಮಣ್ಣ ರವರು ಇಂದು ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದರು ಶಿವಕುಮಾರ ಶ್ರೀಗಳ ಗದ್ದುಗೆ ಭೇಟಿ ನೀಡಿ ಪೂಜೆ ಸಲ್ಲಿಸಿ ನಂತರ ಸಿದ್ದಗಂಗಾ ಶ್ರೀಗಳ ಆಶೀರ್ವಾದ ಪಡೆದರು.

ಇದೇ ವೇಳೆ ಪತ್ರಕರ್ತರೊಂದಿಗೆ ಮಾತನಾಡಿದ ನೂತನ ಸಚಿವರಾದ ವಿ ಸೋಮಣ್ಣ ರವರು ತಮಗೆ ಯಾವುದೇ ಖಾತೆಯ ನಿರೀಕ್ಷೆಯಿಲ್ಲ ಯಾವುದೇ ಖಾತೆ ನೀಡಿದರು ಅದನ್ನು ಸಮರ್ಥವಾಗಿ ನಿಭಾಯಿಸಲಾಗುವುದು ಎಂದರು.

 

ಬಂದಿಖಾನೆ, ಗೃಹರಕ್ಷಕ ಹಾಗೂ ಸಾರ್ವಜನಿಕರ ಕುಂದು ಕೊರತೆ ಆಲಿಸುವ ಕೆಲಸ ಪ್ರಾರಂಭ ಮಾಡಿದ ತಾನು ಯಾವ ಖಾತೆ ನೀಡಿದರೂ ಅದಕ್ಕೆ ಶಕ್ತಿ ಇರುತ್ತದೆ ಅದನ್ನು ಉತ್ತಮ ರೀತಿಯಲ್ಲಿ ಬಳಸಿಕೊಂಡು ನೀಡಿರುವ ಖಾತೆಯನ್ನು ಸಮರ್ಥವಾಗಿ, ವ್ಯವಸ್ಥಿತವಾಗಿ ನಿಭಾಯಿಸುತ್ತೇನೆ ಎಂದರು.

 

ಸಾರ್ವಜನಿಕ ಜೀವನದ ಅನುಭವ ಪಡೆದಿದ್ದು ಅದರ ಮೂಲಕ ನಿರ್ವಹಣೆ ಮಾಡುವೆ.

ಇನ್ನು ತಮ್ಮ 45 ವರ್ಷದ ರಾಜಕೀಯ ಜೀವನದಲ್ಲಿ ಸಾರ್ವಜನಿಕರೊಂದಿಗೆ ಬೆರೆತು ಅನುಭವ ಪಡೆದಿದ್ದು ಅದರ ಮೂಲಕ ತಮಗೆ ನೀಡುವ ಖಾತೆಯನ್ನು ಸಮರ್ಥವಾಗಿ ನಿರ್ವಹಣೆ ಮಾಡುವೆ ಎಂದರು

 

ಚಾಮರಾಜನಗರ ದಿಂದ ಬೀದರ್ ವರೆಗೂ ಕೋಲಾರ ದಿಂದ ದಕ್ಷಿಣಕನ್ನಡದ ವರೆಗೂ ತಮ್ಮದೇ ಆದ ಪಡೆ ಇದ್ದು 45 ವರ್ಷದ ರಾಜಕೀಯ ಜೀವನದಲ್ಲಿ ಕಾಂಗ್ರೆಸ್, ಬಿಜೆಪಿ ,ಜೆಡಿಎಸ್ ಹಾಗೂ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಗೆ ನಿಂತು ಸೋಲು-ಗೆಲುವುಗಳನ್ನು ಸಮಾನಾಂತರವಾಗಿ ಸ್ವೀಕರಿಸಿದ್ದು ಇಂತಹ ಎಲ್ಲಾ ಸಮಯದಲ್ಲೂ ನೋಡಿರುವ ನನಗೆ ಆ ತರಹದ ಭಾವನೆ ಇಲ್ಲ ತಾವು ಎಲ್ಲೆ ಹೋದರು ಜಾತ್ಯಾತೀತವಾಗಿ ಪಕ್ಷತೀತವಾಗಿ ತಮ್ಮದೇ ಆದ ಪಡೆಯನ್ನು ರಚಿಸುವ ಸಾಮರ್ಥ್ಯ ಇದ್ದು ಅದರಂತೆ ಸಿಕ್ಕ ಅವಕಾಶವೆ ನಮಗೆ ಶ್ರೀರಕ್ಷೆ ಎಂದರು.

 

ಯಡಿಯೂರಪ್ಪನವರ ಬದಲಾವಣೆಗೆ ಪ್ರತಿಕ್ರಿಯಿಸಿದ ಅವರು ಪಕ್ಷದ ಹಿರಿಯರು ಆದ ಯಡಿಯೂರಪ್ಪನವರು ಹಾಗೂ ಪಕ್ಷ ಪದ್ಧತೆ ಮುಖ್ಯ ಮಾಜಿ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪನವರು ರಾಜ್ಯದ ಮುಖ್ಯಮಂತ್ರಿಗಳಾಗಿ ರಾಜ್ಯವನ್ನು ಸಮರ್ಥವಾಗಿ ,ಬದ್ಧತೆಯಿಂದ ರಾಜ್ಯವನ್ನು ಮುನ್ನಡೆಸಿದ್ದರು ಅದರಂತೆ ನೂತನ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ರಾಜ್ಯವನ್ನು ಸಮರ್ಥವಾಗಿ ಮುನ್ನಡೆಸಲಿದ್ದಾರೆ ಎಂದರು.

ತಮಗೆ ನೀಡಿರುವ ಜಿಲ್ಲೆಗಳ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ.

ಕೋವಿಡ್ ಮೂರನೇ ಅಲೆ ಹಾಗೂ ಪ್ರವಾಹ ಪರಿಸ್ಥಿತಿಗೆ ಅನುಗುಣವಾಗಿ ಈಗಾಗಲೇ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದು ಅದರಂತೆ ನಾಳೆ ನಮಗೆ ಉಸ್ತುವಾರಿ ನೀಡಿರುವ ಜಿಲ್ಲೆಗೆ ಭೇಟಿ ನೀಡಿ ರಾಯಚೂರಿನ ತಾಲೂಕುಗಳ ಅಧಿಕಾರಿಗಳೊಂದಿಗೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗುವುದು ಅದರಂತೆ ರಾಜ್ಯದ ಎಲ್ಲಾ ನೂತನ ಸಚಿವರು ತಮಗೆ ನೀಡಿರುವ ಜಿಲ್ಲೆಗಳ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ ಎಂದು ತಿಳಿಸಿದರು.

 

ವಿಜಯೇಂದ್ರಗೆ ಸಚಿವ ಸ್ಥಾನ ಕೈ ತಪ್ಪಿರುವ ವಿಷಯಕ್ಕೆ ಪ್ರತಿಕ್ರಿಯಿಸಿದ ಅವರು ಆಗಲೇ ಈ ವಿಷಯಕ್ಕೆ ಸಂಬಂಧಿಸಿದಂತೆ ಎಲ್ಲ ಸಮಸ್ಯೆಗಳು ಬಗೆಹರಿದಿದೆ ಎಂದರು.

 

ಇನ್ನು ತಮ್ಮ ರಾಜಕೀಯ ಜೀವನದಲ್ಲಿ 10 ಚುನಾವಣೆಗಳನ್ನು ಎದುರಿಸಿದ್ದು ಏಳು ಬಾರಿ ಗೆದ್ದು, ಮೂರು ಬಾರಿ ಸೋತಿದ್ದೇನೆ ರಾಜಕೀಯ ಎಂದು ಶಾಶ್ವತವಲ್ಲ ಸರ್ಕಾರ ಎಂದು ನಿಂತ ನೀರಲ್ಲ ಅದು ಎಂದಿಗೂ ಹರಿಯುತ್ತಲೇ ಇರುತ್ತದೆ ಅದರಂತೆ ರಾಜ್ಯದ ನೂತನ ಮುಖ್ಯಮಂತ್ರಿಗಳು ರಾಜ್ಯವನ್ನು ಸಮರ್ಥವಾಗಿ ಮುನ್ನಡೆಸಲಿದ್ದಾರೆ ಎಂದರು.

24*7 ಸರ್ಕಾರ

ಸರ್ಕಾರದ ಚಲಾವಣೆ ಶುರುವಾಗಿದ್ದು ಮುಂದಿನ ದಿನಗಳಲ್ಲಿ 24*7 ರಂತೆ ನೂತನ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ರಾಜ್ಯವನ್ನು ಮುನ್ನಡೆಸಲಿದ್ದಾರೆ ಅದರ ಮೂಲಕ ರಾಜ್ಯವನ್ನು ಸರ್ವಾಂಗೀಣ ಅಭಿವೃದ್ಧಿಯತ್ತ ಕೊಂಡೊಯ್ಯಲಾಗುವುದು ಎಂದರು.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version