ಬೆಳಗೋಡು ಗ್ರಾಮ ಛಲವಾದಿ ಮಹಾಸಭಾದಿಂದ ಹೈ ಕೋರ್ಟ್ ಸಿಜಿಸಿ ಮೋಹನ್ ಕುಮಾರ್ ದಾನಪ್ಪಗೆ ಸನ್ಮಾನ
ಕಂಪ್ಲಿ: ಆ:3:- ಕಂಪ್ಲಿಯ ಅತಿಥಿ ಗೃಹದಲ್ಲಿ ಕಂಪ್ಲಿ ಸಮೀಪದ ಬೆಳಗೋಡು ಹಾಳ್ ಗ್ರಾಮದ ಛಲವಾದಿ ಮಹಾಸಭಾದ ವತಿಯಿಂದ ಇತ್ತಿಚ್ಚೆಗೆ ಬೆಂಗಳೂರಿನ ಕರ್ನಾಟಕ ಉಚ್ಚ ನ್ಯಾಯಾಲಯಕ್ಕೆ ಕೇಂದ್ರ ಸರ್ಕಾರಿ ವಕೀಲರಾಗಿ ನೇಮಕವಾದ ಕಂಪ್ಲಿಯ ಮೋಹನ್ ಕುಮಾರ್ ದಾನಪ್ಪನವರಿಗೆ ಸನ್ಮಾನಿಸಿ ಸಿಹಿ ಹಂಚಿ ಸಂಭ್ರಮಿಸಿದರು.
ನಂತರ ಸನ್ಮಾನ ಸ್ವೀಕರಿಸಿದ ಮೋಹನ್ ಕುಮಾರ್ ದಾನಪ್ಪನವರು “ಮನುಷ್ಯ ಏನನ್ನಾದರೂ ಸಾಧಿಸಲು, ಯಾವುದೇ ಸ್ಥಾನ ಪಡೆಯಲು ಶಿಕ್ಷಣದಿಂದಲೇ ಸಾಧ್ಯ, ಗ್ರಾಮೀಣ ಭಾಗದಲ್ಲಿನ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ಪ್ರತಿಮಕ್ಕಳಿಗೂ ಕಡ್ಡಾಯವಾಗಿ ಶಿಕ್ಷಣ ಕೊಡಿಸುವಲ್ಲಿ ಪ್ರತಿಯೊಬ್ಬರೂ ಕಾಳಜಿವಹಿಸಬೇಕು, ಮಕ್ಕಳು ಫೇಲ್ ಆದಾಗ ಶಿಕ್ಷಣವನ್ನ ಅಲ್ಲಿಗೆ ಕುಂಠಿತಗೊಳಿಸಿ ಕೆಲಸಕ್ಕೆ ಕಳಿಸದೆ ಮರು ಪ್ರಯತ್ನಿಸಿ ಶಿಕ್ಷಣ ಮುಂದುವರೆಸುವಂತೆ ಉತ್ತೇಜನ ನೀಡಬೇಕೆಂದರು”,
ಕಾರ್ಯಕ್ರಮ ಉದ್ದೇಶಿಸಿ ಮುದ್ದಾಪುರ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರಾದ ಛಲವಾದಿ ಟಿ.ದುರುಗಪ್ಪರವರು” ಹಿಂದುಳಿದ ಬಳ್ಳಾರಿ ಜಿಲ್ಲೆಯ ಕಂಪ್ಲಿಯ ಮೋಹನ್ ಕುಮಾರ್ ದಾನಪ್ಪನವರು ಬೆಂಗಳೂರಿನ ಕರ್ನಾಟಕ ಉಚ್ಛ ನ್ಯಾಯಾಲಯಕ್ಕೆ ಕೇಂದ್ರ ಸರ್ಕಾರಿ ವಕೀಲರಾಗಿ ನೇಮಕವಾಗಿರುವುದು ಜಿಲ್ಲೆಗೆ ಹೆಮ್ಮೆಯ ವಿಷಯವಾಗಿರುತ್ತದೆ, ಸರ್ಕಾರಗಳು ಶಿಕ್ಷಣಕ್ಕೆ ನೀಡುತ್ತಿರುವ ಸೌಲಭ್ಯವನ್ನ ಸದುಪಯೋಗ ಪಡಿಸಿಕೊಳ್ಳಬೇಕೆಂದರು,
ಈ ಕಾರ್ಯಕ್ರಮದಲ್ಲಿ,ಮುದ್ದಾಪುರ ಗ್ರಾಮ ಪಂಚಾಯತ್ ಸದಸ್ಯರಾದ ಎಸ್.ಚಂದ್ರಶೇಖರ ಗೌಡ, ಛಲವಾದಿ ಸಮಾಜದ ಯುವ ಮುಖಂಡರಾದ ಛಲವಾದಿ ರಾಮಪ್ಪ,ಛಲವಾದಿ ನಾಗರಾಜ್, ಛಲವಾದಿ ತಳಕಲ್ ರಾಮಪ್ಪ, ಛಲವಾದಿ ಮಹೇಶ್, ಮಲ್ಲಿಕಾರ್ಜುನ್, ಛಲವಾದಿ ಅನಿಲ್ ಕುಮಾರ್, ವಿರೂಪಣ್ಣ, ದುರುಗೇಶ್, ಕಾಂತಪ್ಪ, ವೆಂಕಟೇಶ್, ಹೇಮಂತ್ ಕುಮಾರ್. ಡಿ!