ಕರ್ನಾಟಕ ಭೀಮ್ ಸೇನೆ ವತಿಯಿಂದ ನಂಜನಗೂಡು ಪ್ರವಾಸಿ ಮಂದಿರದಲ್ಲಿ ರಾಜ್ಯ ಮುಖಂಡರ ಸಭೆ

ಕರ್ನಾಟಕ ಭೀಮ್ ಸೇನೆ ವತಿಯಿಂದ ನಂಜನಗೂಡು ಪ್ರವಾಸಿ ಮಂದಿರದಲ್ಲಿ ರಾಜ್ಯ ಮುಖಂಡರ ಸಭೆ

ಮೈಸೂರು :- ಜಿಲ್ಲೆಯ ನಂಜನಗೂಡು ತಾಲೂಕಿನ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ಭೀಮ್ ಸೇನೆ ಸಂಘಟನೆ ರಾಜ್ಯ ಮುಖಂಡರುಗಳಿಂದ ಭಾನುವಾರದಂದು ಸಭೆ ನಡೆಸಲಾಯಿತು. ಮೊದಲಿಗೆ ನಂಜನಗೂಡಿನ ಮೈಸೂರು ಮುಖ್ಯ ರಸ್ತೆ ಭಾಗದಲ್ಲಿ ಇರುವ ಬಾಬಾಸಾಹೇಬರ ಪುತ್ತಳಿಗೆ ಎಲ್ಲಾ ಪದಾಧಿಕಾರಿಗಳು ಸೇರಿ ಮಾಲಾರ್ಪಣೆ ಮಾಡಿ ಜೈಭೀಮ್ ಘೋಷಣೆ ಕೂಗುತ್ತ ಗೌರವಿಸಲಾಯಿತು.ಹಾಗೂ ನಂಜನಗೂಡು ತಾಲೂಕು ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಹಾಗೂ ಮಂಡ್ಯ.ಮೈಸೂರು. ಚಾಮರಾಜನಗರ. ಜಿಲ್ಲೆಗಳಿಂದ ಬಂದಿದ್ದಂತಹ ಪದಾಧಿಕಾರಿಗಳು. ವಿವಿಧ ವಿಚಾರಗಳ ಕುರಿತು ಚರ್ಚೆ ಮಾಡಿದರು ಸರ್ಕಾರದಿಂದ ಬರುವ ಸೌಲಭ್ಯ ಸೌಕರ್ಯ ಗಳನ್ನು ಸಮರ್ಪಕವಾಗಿ ತಲುಪಿಸುವ ಕೆಲಸವನ್ನು ನಮ್ಮ ಸಂಘಟನೆ ಮಾಡಬೇಕು. ರಾಜ್ಯದಲ್ಲಿ ಬಡವರ್ಗದ ಜನರಿಗೆ ಆಗುತ್ತಿರುವ ಅನ್ಯಾಯ ಶೋಷಣೆ ವಿರುದ್ಧ ನಾವು ಧ್ವನಿ ಯಾಗಿ ನಿಲ್ಲಬೇಕು.

 

 

 

 

 

 

 

ಶಿಕ್ಷಣ ಅರೋಗ್ಯ ಪ್ರತಿಯೊಬ್ಬ ಭಾರತೀಯರಿಗೂ ಉಚಿತವಾಗಿ ಸಿಗಬೇಕು. ಅಂತಹ ವ್ಯವಸ್ಥೆ ಯನ್ನು ಜಾರಿ ಮಾಡುವ ರಾಜಕೀಯ ನಾಯಕರ ಅಗತ್ಯವಿದೆ.ನಮ್ಮ ಕರ್ನಾಟಕ ಭೀಮ್ ಸೇನೆ ಸಂಘಟನೆ ಧ್ವನಿ ಇಲ್ಲದವರಿಗೆ ಧ್ವನಿಯಾಗಿ ನಿಲ್ಲಬೇಕು ಪ್ರಾಮಾಣಿಕವಾಗಿ ಜನರ ಸೇವೆ ಮಾಡಬೇಕು ಬಾಬಾಸಾಹೇಬರ ವಿಚಾರ ಸಿದ್ದಂತಾಗಳನ್ನು ಅಳವಡಿಸಿಕೊಂಡು ಅವರು ತೋರಿಸಿಕೊಟ್ಟ ದಾರಿಯಲ್ಲಿ ಪ್ರಾಮಾಣಿಕವಾಗಿ ನ್ಯಾಯಯುತವಾದ ಕೆಲಸವನ್ನು ಮಾಡುವ ನಿಟ್ಟಿನಲ್ಲಿ ನಮ್ಮ ಸಂಘಟನೆ ಕೆಲಸ ಮಾಡೋಣ ಎಂದು ಎಲ್ಲಾ ವಿವಿಧ ಜಿಲ್ಲೆ ಮತ್ತು ಸಂಘಟನಾಕಾರರು ಚರ್ಚೆ ನಡೆಸಿದರು.

 

 

 

 

 

 

 

 

 

 

 

 

 

 

ಇನ್ನು ಇದೆ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ಭೀಮ್ ಸೇನೆ ಸಂಸ್ಥಪಾಕ ರಾಜ್ಯದಕ್ಷರು ಶಂಕರ್ ರಾಮಲಿಂಗಯ್ಯ ರವರು ನಮ್ಮ ಸಂಘಟನೆ ಬೇರೆ ಸಂಘಟನೆಗಳಿಗಿಂತ ವಿಶೇಷವಾದದ್ದು ಯಾಕೆಂದ್ರೆ ರಾಜಕೀಯವಾಗಿ ನಾವು ಯಾವುದೇ ಒಂದು ಪಕ್ಷಕ್ಕೆ ಗುಲಾಮರಾಗಿಲ್ಲ ಪ್ರತಿಯೊಂದು ಪಕ್ಷಕ್ಕೂ ಅವರ ತಪ್ಪು ಸರಿಗಳನ್ನ ತಿದ್ದುವ ಕೆಲಸ ನಾವು ಮಾಡೋಣ ನಮ್ಮ ಆದ್ಯತೆ ಶಿಕ್ಷಣ ಮತ್ತು ಅರೋಗ್ಯ ಪ್ರತಿಯೊಬ್ಬರಿಗೂ ಉಚಿತವಾಗಿ ಸಿಗಬೇಕು ನೊಂದವರಿಗೆ ನ್ಯಾಯ ದೊರಕಿಸೋ ಕೆಲಸ ನಾವುಗಳು ಮಾಡೋಣ ನಮ್ಮ ಸಿದ್ದಂತಾವನ್ನು ಪ್ರತಿಯೊಬ್ಬರೂ ಗಮನದಲ್ಲಿಟ್ಟು ನಿಮ್ಮ ಸೇವೆ ಸಲ್ಲಿಸಿ. ಯಾವುದೇ ಸಮಸ್ಯೆಗಳು ಬಂದರೂ ರಾಜ್ಯಾದಂತ್ಯ ನಾವೆಲ್ಲ ಸೇರಿ ಒಗ್ಗಟ್ಟಿನಲ್ಲಿ ನ್ಯಾಯಯುತವಾದ ಕೆಲಸ ಮಾಡೋಣ. ಬಾಬಾಸಾಹೇಬ್ ಅಂಬೇಡ್ಕರ್ ರವರು ಕೊಟ್ಟಂತ ಶಿಕ್ಷಣ ಅರಿತ ನಾವು ನ್ಯಾಯಕ್ಕಾಗಿ ಹುಲಿಯಂತೆ ಗರ್ಜನೆ ಮಾಡೋಣ.

 

 

 

 

 

 

 

 

 

 

 

 

 

ರಾಜ್ಯದ ಎಲ್ಲಾ ಪದಾಧಿಕಾರಿಗಳು ಒಗ್ಗಟ್ಟಿನಲ್ಲಿ ಸೇರಿ ಸಂಘಟನೆ ಮಾಡೋಣ ನಾನು ಸಂಘಟನೆಯ ರಾಜ್ಯದಕ್ಷ ಅಲ್ಲ ಜನರ ಸೇವೆ ಮಾಡುವ ಸೇವಕ ಎಂದು ಹೇಳಿದರು.ಇದೆ ವೇಳೆಯಲ್ಲಿ ರಾಜ್ಯ ಸಂಘಟನೆ ಕಾರ್ಯದರ್ಶಿ ಮಂಜುನಾಥ್ ಮೈಸೂರು ಜಿಲ್ಲಾ ಅಧ್ಯಕ್ಷರು ಅಶೋಕ್. ಮೈಸೂರು ಜಿಲ್ಲಾ ಗೌರವ ಅಧ್ಯಕ್ಷರು ವೈರಮುಡಿ ಚಾಮರಾಜನಗರ ಜಿಲ್ಲಾ ಅಧ್ಯಕ್ಷರು ಮನು ಮೌರ್ಯ. ನಂಜನಗೂಡು ತಾಲೂಕು ಅಧ್ಯಕ್ಷರು ಶಿವಸ್ವಾಮಿ. ಹಾಗೂ ಚಾ ನಗರ. ಮೈಸೂರು. ಮಂಡ್ಯ ಜಿಲ್ಲೆಗಳ ವಿವಿಧ ತಾಲೂಕುಗಳ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು ರಾಜ್ಯ ಮಟ್ಟದ ಪದಾಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

 

ವರದಿ :- ನಾಗೇಂದ್ರ ಪ್ರಸಾದ್

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version