ತುಮಕೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ರೈತ , ಪ್ರಗತಿಪರ ಸಂಘಟನೆ ಮುಖಂಡರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ ವಿರೋಧಿ ಕಾರ್ಮಿಕ ವಿರೋಧಿ ನೀತಿಗಳನ್ನು ವಿರೋಧಿಸಿ ರೈತರು ದಲಿತರು ,ಕಾರ್ಮಿಕರು ,ವಿದ್ಯಾರ್ಥಿ, ಯುವಜನ ಮತ್ತು ಮಹಿಳೆಯರ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಮಾರ್ಚ್ 22 ರಂದು ಬೆಂಗಳೂರಿನಲ್ಲಿ ಬೃಹತ್ ಹೋರಾಟವನ್ನು ಸಂಯುಕ್ತಕರ್ನಾಟಕ ಸಂಘಟಿಸುತ್ತಿದ್ದು ರಾಜ್ಯದ ರೈತರು ,ದಲಿತರು ,ಕಾರ್ಮಿಕರು, ವಿದ್ಯಾರ್ಥಿ ,ಯುವಜನರು ಹಾಗೂ ಮಹಿಳೆಯರು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿ ಹೋರಾಟವನ್ನು ಯಶಸ್ವಿ ಗೊಳಿಸಬೇಕೆಂದು ಸಂಯುಕ್ತ ಹೋರಾಟ ಕರ್ನಾಟಕ ಸಮಿತಿ ಸದಸ್ಯರು ಮನವಿ ಮಾಡಿದ್ದಾರೆ .
ಬೆಂಗಳೂರಿನಲ್ಲಿ ಮಾರ್ಚ್ 22ರ ಬೆಳಗ್ಗೆ 11 ಗಂಟೆಗೆ ನಗರದ ರೈಲು ನಿಲ್ದಾಣದಿಂದ ಮೆರವಣಿಗೆ ಆರಂಭವಾಗಿ ಫ್ರೀಡಂ ಪಾರ್ಕ್ ನಲ್ಲಿ ಮಧ್ಯಾಹ್ನ 1ಗಂಟೆಗೆ ಸೇರಿಕೊಂಡು ಬೃಹತ್ ಬಹಿರಂಗ ಸಭೆ ನಡೆಯಲಿದೆ ಎಂದು ಸಂಯುಕ್ತ ಹೋರಾಟ ಕರ್ನಾಟಕ ಸಮಿತಿಯ ಯತಿರಾಜು ತಿಳಿಸಿದರು.
ಬೃಹತ್ ಹೋರಾಟದಲ್ಲಿ ದೆಹಲಿಯ ಹೋರಾಟಗಾರರಾದ ರಾಕೇಶ್ ಸಿಂಗ್ ಟಿಕಾಯತ್, ಡಾಕ್ಟರ್ ದರ್ಶನ್ ಪಾಲ್, ಯದುವೀರ್ ಸಿಂಗ್ ಹಾಗೂ ಸಂಯುಕ್ತ ಹೋರಾಟ ಕರ್ನಾಟಕದ ಮುಖಂಡರು ಅಲ್ಲದೆ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ,ಸಾಣೇಹಳ್ಳಿ ಮಠ , ಮುಖಂಡರಾದಬಾಬು ಗೌಡ ಪಾಟೀಲ್ ,ನಂಜುಂಡಸ್ವಾಮಿ ,ಕುರುಬೂರು ಶಾಂತಕುಮಾರ್ ಹಾಗೂ ಬಿ ಆರ್ ಪಾಟೀಲ್ ರವರು ಮಾತನಾಡಲಿದ್ದಾರೆ .
ರೈತಪರ ಪ್ರಯತ್ನಗಳಿಗೆ ಹಾಗೂ ಹೋರಾಟಗಳಿಗೆ ರಾಜ್ಯದ ದುಡಿಯುವ ಜನತೆ ಮತ್ತಷ್ಟು ಶಕ್ತಿ ತುಂಬಬೇಕು,ಹಾಗೂ ಜನವಿರೋಧಿ ನೀತಿಗಳನ್ನು ತಂದು ಸಾಮಾನ್ಯ ಜನರ ಮೇಲೆ ಬರೆ ಎಳೆದು ಸಾಮಾನ್ಯ ಜನರ ಹಕ್ಕುಗಳನ್ನು ಕಸಿಯುವ ಮೂಲಕ ಕಾರ್ಪೊರೇಟ್ ಸಂಸ್ಥೆಗಳಿಗೆ ಅನುಕೂಲ ಮಾಡುವ ಉದ್ದೇಶದಿಂದ ಹ ದೇಶದಲ್ಲಿ ಹಲವು ರಂಗಗಳಲ್ಲಿ ಖಾಸಗೀಕರಣದ ಮೂಲಕ ಪ್ರಹಾರ ಮಾಡಿ ಸಾಮಾನ್ಯ ಜನರ ಹಕ್ಕುಗಳನ್ನು ಕಸಿಯುವ ಪ್ರಯತ್ನ ಕೇಂದ್ರ ಸರ್ಕಾರ ಮಾಡುತ್ತಿದೆ.
ರೈತ ವಿರೋಧಿ ,ಕಾರ್ಮಿಕ ವಿರೋಧಿ ಕಾನೂನುಗಳನ್ನು ತಂದು ಕೆಲ ಕಾರ್ಪೊರೇಟ್ ವ್ಯಕ್ತಿಗಳಿಗೆ ಅನುಕೂಲ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ರೀತಿ ನಡೆದುಕೊಳ್ಳುತ್ತಿದೆ. ಇದರ ವಿರುದ್ಧ ನಾವು ಎಂದು ಧ್ವನಿ ಎತ್ತದಿದ್ದರೆ ಮುಂದಿನ ದಿನಗಳಲ್ಲಿ ಸಾಮಾನ್ಯ ನಾಗರಿಕರು, ರೈತರು, ಕಾರ್ಮಿಕರು, ದಲಿತರ ಹಕ್ಕುಗಳನ್ನು ಕಲಿಯುವ ಎಲ್ಲ ಹುನ್ನಾರಗಳನ್ನು ಕೇಂದ್ರ ಸರಕಾರ ಅನುಸರಿಸುತ್ತಿದೆ ಎಂದು ರೈತ ಸಂಘಟನೆಯ ಮುಖಂಡ ಗೋವಿಂದರಾಜು ತಿಳಿಸಿದರು.
ಪ್ರಗತಿಪರ ಚಿಂತಕ ದೊರೆರಾಜು ಮಾತನಾಡಿ ದೇಶದಲ್ಲಿ ಇಂದು ಸಾಮಾನ್ಯ ನಾಗರಿಕರು ನೆಮ್ಮದಿ ಜೀವನ ನಡೆಸಲು ಆಗುತ್ತಿಲ್ಲ. ರೈತರು ,ಬಡವರು ನಿತ್ಯ ಬಳಸುವ ವಸ್ತುಗಳ ಬೆಲೆ ಗಗನಕ್ಕೇರಿದ್ದು ಅವುಗಳ ಬೆಲೆ ನಿಯಂತ್ರಿಸುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ ರೈತರು ಹಾಗೂ ಸಾಮಾನ್ಯ ಜನರ ಹಕ್ಕುಗಳನ್ನು ಕಸಿಯುವಲ್ಲಿ ನಿರತರಾಗಿದ್ದಾರೆ ಹಾಗಾಗಿ ಮಾರ್ಚ್ 22ರ ಬೆಂಗಳೂರು ಚಲೋ ಹೋರಾಟಕ್ಕೆ ಎಲ್ಲರೂ ಸಹಕಾರ ನೀಡಬೇಕು ಜಿಲ್ಲೆಯಿಂದ 10 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಉಮೇಶ್ ,ಅಜ್ಜಪ್ಪ, ಧನಂಜಯ, ದಲಿತ ಮುಖಂಡ ಪಿಎಂ ರಾಮಯ್ಯ, ಗೋವಿಂದಪ್ಪ ಸೇರಿದಂತೆ ಹಲವು ನಾಯಕರು ಭಾಗವಹಿಸಿದ್ದರು.