ಮಧುಗಿರಿ:- ನನ್ನನ್ನು ತುಮಕೂರಿನ ಖಾಸಗಿ ಆಸ್ಪತ್ರೆಯಲ್ಲಿ ಭೇಟಿ ಮಾಡಿದ ಶಾಸಕ ಎಂ. ವಿ ವೀರಭದ್ರಯ್ಯ ಆರೋಗ್ಯ ವಿಚಾರಿಸಿದರೆ ಹೊರತು ಪಡಿಸಿದರೆ ಯಾವುದೇ ಹಣ ಸಹಾಯ ಮಾಡಿಲ್ಲ. ತಾಲ್ಲೂಕಿನಲ್ಲಿ ಕೆಲವು ಜೆಡಿಎಸ್ ಮುಖಂಡರುಗಳು ಹಣ ನೀಡಿದ್ದಾರೆಂದು ಅಪಪ್ರಚಾರ ಮಾಡುತ್ತಿರುವುದು ನನಗೆ ನೋವುಂಟಾಗಿದೆ ಎಂದು ಸಿದ್ದಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ವೀರಣ್ಣ ಪತ್ರಿಕೆಗೆ ತಿಳಿಸಿದ್ದಾರೆ.
ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಗೆ ದಾಖಲಾಗಿದ್ದು ದೂರವಾಣಿ ಮೂಲಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಶಾಸಕ ಎಂ. ವಿ. ವೀರಭದ್ರಯ್ಯ ಐವತ್ತು ಸಾವಿರ ನೀಡಿದ್ದಾರೆ ಎಂದು ಒಬ್ಬರು ಹೇಳಿದರೆ 5ಲಕ್ಷ ನೀಡಿದ್ದಾರೆಂದು ಹೇಳುತ್ತಿರುವುದು ನನ್ನ ಗಮನಕ್ಕೆ ಬಂದು ನಾನಿರುವ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನನಗೆ ತುಂಬಾ ನೋವಾಗಿದೆ. ಶಸ್ತ್ರಚಿಕಿತ್ಸೆಗೂ ಮುನ್ನವೇ ಜನರಿಗೆ ಸತ್ಯ ಹೇಳುವ ಸಲುವಾಗಿ ಮಾತನಾಡುತ್ತಿದ್ದೇನೆ ಎಂದರು.
ಮಾಜಿ ಶಾಸಕ ಕೆ ಎನ್ ರಾಜಣ್ಣನವರು ನಾನು ಆಸ್ಪತ್ರೆಗೆ ದಾಖಲಾದ ಮೊದಲ ದಿನದಿಂದ ಇಲ್ಲಿಯವರೆಗೂ ನಿರಂತರ ಸಂಪರ್ಕದಲ್ಲಿದ್ದು ನನ್ನ ರೋಗವನ್ನು ಗುಣಪಡಿಸುವ ಸಲುವಾಗಿ ಸಂಬಂಧಪಟ್ಟ ತಜ್ಞ ವೈದ್ಯರ ಸಲಹೆಗಳನ್ನು ಪಡೆದು ಜಯದೇವ ಹೃದ್ರೋಗ ಸಂಸ್ಥೆಯ ಮುಖ್ಯಸ್ಥ ರಾದ ಡಾ. ಮಂಜುನಾಥ್ ರವರೊಂದಿಗೂ ಸಹಾ ಮಾತನಾಡಿ ತುಮಕೂರಿ ನಿಂದ ಬೆಂಗಳೂರಿನ ಆಸ್ಪತ್ರೆಗೆ ಸೇರಿಸಲು ಮುಂದಾದರು. ಕೆ ಎನ್ ರಾಜಣ್ಣ ನವರೊಂದಿಗೆ ಅವರ ಪುತ್ರ ಆರ್ .ರಾಜೇಂದ್ರ, ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ .ನಾಗೇಶ್ ಬಾಬು ,ಕೆಎನ್ ಆರ್ ಅಭಿಮಾನಿಗಳು, ಆರ್.ಆರ್. ಅಭಿಮಾನಿಗಳು ನಿತ್ಯವೂ ನನ್ನ ಆರೋಗ್ಯವನ್ನು ವಿಚಾರಿಸುತ್ತಿರುವುದಕ್ಕೆ ಚಿರರುಣಿಯಾಗಿದ್ದೇನೆ ಎಂದರು.
ಮಾಜಿ ಶಾಸಕ ಕೆ ಎನ್ ರಾಜಣ್ಣನವರು ಆರ್ಥಿಕ ಸಹಾಯ ಮಾಡುತ್ತಿರುವುದಲ್ಲದೆ ಇದರ ಜತೆಗೆ ಮನೋಧೈರ್ಯವನ್ನು ತುಂಬುತ್ತಿದ್ದಾರೆ. ಇದರಿಂದಾಗಿ ನನಗೆ ರೋಗವೇ ಇಲ್ಲ ಎಂಬಂತಾಗಿದೆ .ನನಗಿರುವ ರೋಗ ಗುಣಮುಖವಾಗಲು ಇನ್ನೇನು ಬೇಕು, ಆದರೆ ಇಂಥ ಸಂದರ್ಭದಲ್ಲಿ ಎಂ.ವಿ. ವೀರಭದ್ರಯ್ಯನವರ ಭೇಟಿಯನ್ನು ರಾಜಕೀಯ ಸಂಚಲನ ಮತ್ತು ಮಾನವಿಯತೆ ಮೆರೆದಿದ್ದಾರೆಂಬುದು ತಪ್ಪು ಸಂದೇಶ ವಾಗುತ್ತದೆಂದರು.
ನಾನು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದೇನೆ. ಇಂಥ ಸಂದರ್ಭದಲ್ಲಿ ರಾಜಕಾರಣ ಬೆಸೆಯುವುದು ಎಷ್ಟು ಸರಿ ನನ್ನನ್ನು ಹಾರೈಸಿದವರೆಲ್ಲರಿಗೂ ಕೃತಜ್ಞತೆಗಳು. ನನ್ನ ಸ್ನೇಹಿತರು ಸಹ ಹಣ ಸಹಾಯ ಮಾಡಿದ್ದಾರೆ .ಆದರೆ ಹಣವೇ ನೀಡದೆ ಪುಕ್ಕಟೆ ಪ್ರಚಾರ ಬೇಕಿತ್ತು ಎಂದು ಸಿದ್ದಾಪುರ ವೀರಣ್ಣನವರ ಮನದಾಳದ ಮಾತಾಗಿದೆ.