ಜಗತ್ತಿನ ಹೊಸ ಸಮಸ್ಯೆಯನ್ನು ಲೆಕ್ಕಿಸದೆ ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಸುವುದು ಸರಿಯಲ್ಲ_ಎಚ್ ವಿಶ್ವನಾಥ್

 

 

ಜಗತ್ತಿನ ಹೊಸ ಸಮಸ್ಯೆಯನ್ನು ಲೆಕ್ಕಿಸದೆ ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಸುವುದು ಸರಿಯಲ್ಲ ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಹೊರಹಾಕಿದರು .

 

ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ದಿನಾಂಕ ನಿಗದಿ ಹಿನ್ನೆಲೆ ಯಲ್ಲಿ ಇಂದು ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪ್ರತಿಕ್ರಿಯಿಸಿದ ಅವರು ಮುಖ್ಯಮಂತ್ರಿಗಳು ನಾನು ಹೇಳಿದ್ದೆ ಸರಿ , ನಾನು ಮಾಡಿದ್ದೇ ಸರಿ ಎಂಬ ಲೆಕ್ಕಾಚಾರದಲ್ಲಿದ್ದಾರೆ . ಶಿಕ್ಷಣ ಇಲಾಖೆ ತುಂಬಾ ಸೆನ್ಸಿಟೀವ್ ಇಲಾಖೆ , ರಾಜ್ಯದ ಪ್ರತಿ ಮನೆಯೂ ಇಲಾಖೆ ವ್ಯಾಪ್ತಿಯಲ್ಲಿದೆ . ಹತ್ತನ್ನೆರಡು ದಿನದಲ್ಲಿ ಡೆಲ್ಟಾ ಹೆಚ್ಚಾಗುತ್ತೆ ಅಂತ ಅಂತರರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ .

 

ಮಗು ನಾಡಿನ ಆಸ್ತಿ , ಪ್ರತಿ ಮಗು ಶಾಲೆಗೆ ಬರುತ್ತೆ . ಶಿಕ್ಷಣ ಪ್ರತಿ ಮಗುವಿನ ಹಕ್ಕು . ಮಗುವನ್ನು ಸಾವಿನ ಕೂಪಕ್ಕೆ ತಳ್ಳುತ್ತಿದ್ದೇವೆ . ಎಲ್ಲರೂ ಸೇರಿ ಮಗುವನ್ನು ಸಾಯಿಸುತ್ತಿದ್ದೇವೆ . ವಿಧಾನಸೌಧದಲ್ಲಿ ಸಭೆ ಮೇಲೆ ಸಭೆ ನಡೆಸ್ತೀರ . ವಿಚಾರದಲ್ಲಿ ನಿಮಗೆ ಗೊತ್ತಾಗಲಿಲ್ಲ . ಪರೀಕ್ಷೆ ವಿಚಾರದಲ್ಲಿ ಸರ್ವ ಪಕ್ಷಗಳ ಸಭೆ ನಡೆಸಿ ತೀರ್ಮಾನ ಕೈಗೊಳ್ಳಬೇಕಿತ್ತು ಎಂದು ವಾಗ್ದಾಳಿ ನಡೆಸಿದರು . ಕೇಂದ್ರ ಸರ್ಕಾರವೇ 12 ನೇ ತರಗತಿಯ ಸಿಬಿಎಸ್‌ಸಿ ಎಕ್ಸಾಂ ಬೇಡ ಎಂದಿದೆ . ಆದರೆ ನಮ್ಮ ರಾಜ್ಯ ಸರ್ಕಾರ ಹಠಕ್ಕೆ ಬಿದ್ದಿದೆ . ಯಾವ ಹಠಕ್ಕೆ ಈ ಪರೀಕ್ಷೆ ನಡೆಸುತ್ತಿದ್ದೀರಾ ? ಯಾವ ತಜ್ಞರು ಈ ಐಡಿಯಾ ಕೊಟ್ಟರು ಗೊತ್ತಿಲ್ಲ . 40 ಮಾರ್ಕ್ಸ್‌ಗೆ ಪರೀಕ್ಷೆ ಬರೆದ್ರೆ ಸಾಕಂತೆ . ಈ ಪುರುಷಾರ್ಥಕ್ಕೆ ಯಾಕ್ರಿ ಎಕ್ಸಾಂ ಕಂಡಕ್ಟ್ ಮಾಡಿದ್ದೀರಾ ? ಪ್ರಧಾನಿ ಮೋದಿಯೇ ಹೇಳಿದ್ದಾರೆ ಜೀವನಕ್ಕಿಂತ ಜೀವ ಮುಖ್ಯ ಅಂತ . ನೀವ್ಯಾಕೆ ಮಕ್ಕಳ ಜೀವ ತೆಗೆಯಲು ಮುಂದಾಗಿದ್ದೀರಾ ಎಂದು ರಾಜ್ಯ ಸರ್ಕಾರ ಶಿಕ್ಷಣ ಸಚಿವರ ವಿರುದ್ಧ ಆಕ್ರೋಶ ಹೊರಹಾಕಿದರು . ಸರ್ಕಾರದ ನಿರ್ಧಾರದಿಂದ ಮಕ್ಕಳನ್ನು ಸಾವಿನ ಕೂಪಕ್ಕೆ ತಳ್ಳಲಾಗುತ್ತಿದೆ . ಈ ಸಂದರ್ಭದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ಬೇಕಾಗಿರಲಿಲ್ಲ . ಸರ್ಕಾರ ಹಾಗೂ ಸಚಿವರು ಇಗೋ ಬಿಟ್ಟು ಕೆಲಸ ಮಾಡಬೇಕಿದೆ . ಮಗುವನ್ನು ಮರೆತ ಸರ್ಕಾರ ಇದು . 10-15 ದಿನದಲ್ಲಿ ಮೂರನೇ ಅಲೆ ಪ್ರಾರಂಭವಾಗುತ್ತೆ ಎಂದು ಹೇಳಲಾಗುತ್ತಿದೆ . ಆದರೆ ಈ ಸಂದರ್ಭದಲ್ಲಿ ಪರೀಕ್ಷೆ ಮಾಡಲು ಮುಂದಾಗಿದ್ದಾರೆ . ತಜ್ಞರ ಸಲಹೆ ಪಡೆದಿಲ್ಲ . ಹಿಂದೆ ಶಿಕ್ಷಣ ಇಲಾಖೆಯಲ್ಲಿ ಸಚಿವರಾಗಿ ಕೆಲಸ ಮಾಡಿದವರ ಸಲಹೆ ಪಡೆದಿಲ್ಲ . ಏಕಾ ಏಕಿ ನಿರ್ಧಾರ ತೆಗೆದುಕೊಂಡು ಮಕ್ಕಳನ್ನು ಸಾವಿನ ಕೂಪಕ್ಕೆ ತಳ್ಳಲಾಗುತ್ತಿದೆ . ಇಡೀ ಜಗತ್ತೆ ಕೊರೊನಾ ಸವಾಲನ್ನು ಎದುರಿಸುತ್ತಿದೆ . ಇಂತಹ ಸಂಧರ್ಭದಲ್ಲಿ ಪರೀಕ್ಷೆ ಮಾಡುವುದು ಅವೈಜ್ಞಾನಿಕ ಎಂದು ಕಿಡಿಕಾರಿದರು .

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version