ತುಮಕೂರು ತಾಲ್ಲೂಕು ಆಫೀಸ್ ಭೂ ದಾಖಲೆಗಳ ವಿಭಾಗದ ಮೇಲ್ವಿಚಾರಕ ಲಕ್ಷ್ಮಯ್ಯ ಎಸಿಬಿ ಬಲೆಗೆ
ತುಮಕೂರು ತಾಲ್ಲೂಕು ಅಜ್ಜಿಪ್ಪನಹಳ್ಳಿ ಸರ್ವೇ ನಂಬರ್ ನಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲುಗಣಿಗಾರಿಕೆ ಸಂಬಂಧಪಟ್ಟ ಭೂ ದಾಖಲೆಗಳ ನೀಡಲು 5 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಲಕ್ಷ್ಮಯ್ಯ.
ಅಕ್ರಮ ಗಣಿಗಾರಿಕೆಯ ವಿರುದ್ಧ ಭ್ರಷ್ಟಾಚಾರದ ವಿರುದ್ಧ ನಿರಂತರವಾಗಿ ಹೋರಾಟ ಮಾಡುತ್ತಿರುವ ಸಾಮಾಜಿಕ ಕಾರ್ಯಕರ್ತ ಪತ್ರಕರ್ತ ಜೆಟ್ಟಿ ಅಗ್ರಹಾರ ನಾಗರಾಜು ಅವರ ದೂರಿನ ಮೇರೆಗೆ ಐದು ಸಾವಿರ ಲಂಚಕ್ಕೆ ಬೇಡಿಕೆ ಇಟ್ಟು 1000 ಮುಂಗಡವಾಗಿ ಪಡೆದು ಇನ್ನುಳಿದ 4000 ಲಂಚ ಪಡೆಯುವಾಗ ಭ್ರಷ್ಟಅಧಿಕಾರಿ ಲಕ್ಷ್ಮಯ್ಯ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದು ಎಸಿಬಿ ಅಧಿಕಾರಿಗಳ ಅತಿಥಿಯಾಗಿದ್ದಾನೆ
ರೆಕಾರ್ಡ್ ರೂಂ ಶಿರಸ್ತೆದಾರ ಮತ್ತು ತಹಸೀಲ್ದಾರ್ ಮೋಹನ್ ತಾಲ್ಲೂಕು ಕಛೇರಿಯಲ್ಲಿ ನೆಡೆಯುತ್ತಿರುವ ಈ ಭ್ರಷ್ಟಾಚಾರ ಅಕ್ರಮಗಳಿಗೆ ಕಾರಣ ಎಂದಿದ್ದಾರೆ ಲಕ್ಷಕ್ಕೂ ಅಧಿಕ ಹಣ ಪಡೆದು ತಹಸೀಲ್ದಾರ್ ಕೊರ್ಟ್ ನಲ್ಲಿ ಆದೇಶ ಮಾಡುತ್ತಿದ್ದಾರೆ ತನಿಖೆ ಮಾಡಲು ಸಾಮಾಜಿಕ ಕಾರ್ಯಕರ್ತ ಜೆಟ್ಟಿ ಅಗ್ರಹಾರ ನಾಗರಾಜು ಎಸಿಬಿ ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ.
ಎಸಿಬಿ ಬಲೆಗೆ ಬಿದ್ದ ಲಕ್ಷ್ಮಯ್ಯ ಅವರನ್ನು ಸಿಬಿಐ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.