ಕೆಎಸ್ಆರ್ಟಿಸಿ ಬಸ್ ಗುದ್ಧಿ ಇಬ್ಬರು ಮಹಿಳೆಯರ ಧಾರಣ ಸಾವು, ತುಮಕೂರು ಬಸ್ ನಿಲ್ದಾಣದಲ್ಲಿ ಘಟನೆ.

ಕೆಎಸ್ಆರ್ಟಿಸಿ ಬಸ್ ಗುದ್ಧಿ ಇಬ್ಬರು ಮಹಿಳೆಯರ ಧಾರಣ ಸಾವು, ತುಮಕೂರು ಬಸ್ ನಿಲ್ದಾಣದಲ್ಲಿ ಘಟನೆ.

 

 

 

ತುಮಕೂರು – ದೇವಸ್ಥಾನಕ್ಕೆಂದು ಬಸ್ ತೆರಳಲು ಬಸ್ಸಿಗಾಗಿ ಕಾಯುತ್ತಿದ್ದ ಇಬ್ಬರು ಮಹಿಳೆಯರಿಗೆ ಬಸ್ ಗುದ್ದಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತುಮಕೂರಿನ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ನಡೆದಿದೆ.

 

 

 

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆ ಶೆಟ್ಟಿಹಳ್ಳಿ ಗ್ರಾಮದ ಆರು ಮಹಿಳೆಯರು ತುಮಕೂರಿನ ಗೊರವನಹಳ್ಳಿ ದೇವಸ್ಥಾನಕ್ಕೆ ಆಗಮಿಸಿದ್ದು ತುಮಕೂರಿನ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಗೊರವನಹಳ್ಳಿಗೆ ತೆರಳಲು ಬಸ್ಸಿಗಾಗಿ ಕಾಯುತ್ತಿದ್ದ ಮಹಿಳೆಯರು.

 

 

 

ಬಸ್ ನಿಲ್ದಾಣಕ್ಕೆ ಬಂದ ಕೂಡಲೇ ಬಸ್ ಹತ್ತಲು ಮುಂದಾದಾಗ ಬಸ್ ಏಕಾಏಕಿ ಹಿಂಬದಿ ಚಲಿಸಿದ್ದು ಎರಡು ಬಸ್ಗಳ ನಡುವೆ ಸಿಲುಕಿದ ಇಬ್ಬರು ಮಹಿಳೆಯರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

 

 

 

 

ಘಟನೆಯಲ್ಲಿ ಮೃತಪಟ್ಟ ಮಹಿಳೆಯರನ್ನ ಶ್ರೀರಂಗಪಟ್ಟಣ ತಾಲೂಕಿನ ಕೆ ಶೆಟ್ಟಿಹಳ್ಳಿ ಗ್ರಾಮದ ಪುಟ್ಟತಾಯಮ್ಮ ಹಾಗೂ ಪಂಕಜ ಎಂಬುವವರೇ ಮೃತಪಟ್ಟ ದುರ್ದೈವಿಗಳು.

 

 

 

ಇನ್ನು ಅವರ ಜೊತೆಯಲ್ಲಿದ್ದ ನಾಲ್ವರು ಮಹಿಳೆಯರಾದ ರೇಣುಕಾ ಅನುಸೂಯ ಪುಷ್ಪ ಹಾಗೂ ಮಂಜಮ್ಮ ಎಂಬುವವರು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ.

 

ಇದು ಘಟನೆ ನಡೆದ ಕೂಡಲೇ ಕೆಎಸ್ಆರ್ಟಿಸಿ ಬಸ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದು ಮೃತಪಟ್ಟ ಮಹಿಳೆಯರ ಶವಗಳನ್ನು ತುಮಕೂರಿನ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.

 

 

 

 

ಇನ್ನು ಸ್ಥಳದಲ್ಲೇ ಕುಟುಂಬಸ್ಥರ ಆಕ್ರಂದನ ಇನ್ನು ಮೃತಪಟ್ಟ ಮಹಿಳೆಯರ ಕುಟುಂಬಸ್ಥರು ಹಾಗೂ ಸ್ನೇಹಿತರ ಆಕ್ರಂದನ ಮುಗಿಲು ಮುಟ್ಟಿತ್ತು.

 

ಫ್ರೀ ಬಸ್ ಎಂದು ದುಂಬಾಲು ಬಿದ್ದು ದೇವಸ್ಥಾನಕ್ಕೆ ಬಂದಿದ್ದ ಮಹಿಳೆಯರು.

 

 

ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಮಹಿಳೆಯರಿಗಾಗಿ ಫ್ರೀ ಉಚಿತ ಬಸ್ ಪ್ರಯಾಣ ಜಾರಿಗೆ ತಂದಿದ್ದು ಇದೇ ಮೊದಲ ಬಾರಿಗೆ ಬಸ್ನಲ್ಲಿ ದೇವಸ್ಥಾನಕ್ಕಾಗಿ ತೆರಳಿದ್ದ ಮಹಿಳೆಯರು ದಾರುಣ ಸಾವನ್ನಪ್ಪಿರುವುದು ನಿಜಕ್ಕೂ ಶೋಚನೀಯ. ಇದೇ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿರುವ ಪುಷ್ಪ ಎಂಬುವವರು ಇದೇ ಮೊದಲ ಬಾರಿಗೆ ಫ್ರೀ ಬಸ್ ಎಂದು ದೇವಸ್ಥಾನಕ್ಕಾಗಿ ಆಗಮಿಸಿದ್ದು ಇದೇ ಸಂದರ್ಭದಲ್ಲಿ ಇಂತಹ ಘಟನೆ ನಡೆದಿದೆ ಎಂದು ತಿಳಿಸಿದ್ದಾರೆ

 

 

ತುಮಕೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version