ತುಮಕೂರು ಡಿವೈಎಸ್ಪಿ ಇಂದ ಲೈಂಗಿಕ ಕಿರುಕುಳ ಆರೋಪ, ಡಿವೈಎಸ್ಪಿ ಸೇರಿದಂತೆ ಹಲವರ ಮೇಲೆ ಮತ್ತೊಂದು ದೂರು ಸಲ್ಲಿಕೆ.
ತುಮಕೂರು _ ತುಮಕೂರಿನ ಯಲ್ಲಾಪುರದಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯೊಬ್ಬಳನ್ನು ವಿಚಾರಣೆ ಮಾಡುವ ಸಲುವಾಗಿ ತುಮಕೂರಿನ ಡಿವೈಎಸ್ಪಿ ಕಚೇರಿಗೆ ಕರೆದು 9 ದಿನಗಳ ವರೆಗೂ ವಿಚಾರಣೆ ನಡೆಸುವ ಹೆಸರಲ್ಲಿ ಲೈಂಗಿಕ ಕಿರುಕುಳವನ್ನು ತುಮಕೂರು ಡಿವೈಎಸ್ಪಿ ನೀಡಿದ್ದಾರೆ ಎಂದು ಯುವತಿ ಆರೋಪಿಸಿ ತುಮಕೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಸೆಪ್ಟಂಬರ್ 7ರಂದು ಯುವತಿ ದೂರು ನೀಡಿದ್ದರು.
ಇನ್ನು ಯುವತಿ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ದೂರು ನೀಡಿದ ಹಿನ್ನೆಲೆಯಲ್ಲಿ ಪ್ರಾಧಿಕಾರದ ನ್ಯಾಯಾಧೀಶರೂ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ಕ್ರಮ ಕೈಗೊಂಡು ತೆಗೆದುಕೊಂಡ ಕ್ರಮಗಳ ಬಗ್ಗೆ ಪ್ರಾದಿಕಾರಕ್ಕೆ ಮಾಹಿತಿ ನೀಡುವಂತೆ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಕಾನೂನು ಸೇವೆಗಳ ಪ್ರಾಧಿಕಾರದ ಮುಖ್ಯಸ್ಥರು ಸೂಚಿಸಿದ್ದು ಪ್ರಕರಣ ಮತ್ತೊಂದು ಹಂತ ತಲುಪಿದೆ.
ನಿರ್ಗಮಿತ ಎಸ್ಪಿ ಹಾಗೂ ಡಿವೈಎಸ್ಪಿ ಸೇರಿದಂತೆ ಹಲವರ ವಿರುದ್ಧ ಮತ್ತೊಂದು ದೂರು ದಾಖಲು.
ಇನ್ನು ಡಿವೈಎಸ್ಪಿ ತನಗೆ ಲೈಂಗಿಕ ಕಿರುಕುಳ ನೀಡಿದ್ದು ಹಾಗೂ ತಾವು ಸೂಚಿಸಿದ ಯುವಕನ ಮೇಲೆ ಸುಳ್ಳು ರೇಪ್ ಕೇಸ್ ಹಾಕುವುದು,ಅಕ್ರಮ ಸಂಬಂಧ ಇಟ್ಟುಕೊಂಡು ಆತನನ್ನ ಟ್ರ್ಯಾಪ್ ಮಾಡಿ ತಮಗೆ ಮಾಹಿತಿ ನೀಡಬೇಕು ಎಂದು ಒತ್ತಾಯಿಸಿರುವ ಬಗ್ಗೆ ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದ ಹಿನ್ನೆಲೆಯಲ್ಲಿ ದೂರಿನಲ್ಲಿ ಉಲ್ಲೇಖಿಸಿದ ತುಮಕೂರಿನ ಯುವಕ ಚಂದು ( ಲಕ್ಷ್ಮಿಕಾಂತ್ ) ಎಂಬುವವರು ಯುವತಿ ನೀಡಿರುವ ದೂರಿನಲ್ಲಿ ತನ್ನ ಹೆಸರು ಪ್ರಸ್ತಾಪಿಸಿರುವ ಹಿನ್ನೆಲೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಂಡು ನ್ಯಾಯ ದೊರಕಿಸಿ ಕೊಡಬೇಕೆಂದು ತುಮಕೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.
ದೂರು ಸಲ್ಲಿಸಿರುವ ಯುವಕ ಚಂದು ಪ್ರಕರಣಕ್ಕೆ ಸಂಬಂಧಿಸಿದಂತೆ ದೂರಿನಲ್ಲಿ ಯುವತಿ ಪ್ರಸ್ತಾಪಿಸಿರುವ ಅಂಶಗಳನ್ನು ಉಲ್ಲೇಖಿಸಿ ಅದರೊಂದಿಗೆ ಯುವತಿ ಪ್ರಾಧಿಕಾರಕ್ಕೆ ದೂರು ನೀಡಿರುವ ಬೆನ್ನಲ್ಲೇ ತನ್ನನ್ನ ಕೊಲ್ಲಲು ಅಹಮದ್ ಆಸಿಮ್ ಇಕ್ಬಾಲ್, ನೂರುಲ್ಲಾ ಶರೀಫ್ ಮತ್ತು ಇತರರಿಗೆ ಸೂಪಾರಿ ನೀಡಿರುತ್ತಾರೆ ಹಾಗೂ ತನ್ನ ನ್ನು ಯಾವುದೇ ಕ್ಷಣದಲ್ಲಿ ತನ್ನನ್ನು ಕೊಲ್ಲಬಹುದು ಹಾಗೂ ತನ್ನನ್ನ ಕೊಂದರೆ ಮೇಲ್ಕಾಣಿಸಿದ ವ್ಯಕ್ತಿಗಳು ಸೇರಿದಂತೆ ತುಮಕೂರಿನ ನಿರ್ಗಮಿತ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ತುಮಕೂರಿನ ಡಿವೈಎಸ್ಪಿ ನೇರ ಕಾರಣರಾಗಿರುತ್ತಾರೆ ಹಾಗೂ ಒಂದು ವೇಳೆ ತನ್ನ ಕೊಲೆ ಆದಲ್ಲಿ ಅದಕ್ಕೆ ಪ್ರಮುಖ ಕಾರಣ ಮೇಲ್ಕನಿಸಿದ ಎಲ್ಲಾ ವ್ಯಕ್ತಿಗಳು ಕಾರಣ ಹಾಗಾಗಿ ಅವರ ಮೇಲೆ ಕಾನೂನು ಕ್ರಮ ಕೈಗೊಂಡು ನ್ಯಾಯ ದೊರಕಿಸಿ ಕೊಡಬೇಕು ಎನ್ನುವ ಹಲವು ಅಂಶಗಳನ್ನು ಒಳಗೊಂಡಂತೆ ದೂರಿನಲ್ಲಿ ಉಲ್ಲೇಖಿಸಲಾಗಿದ್ದು ಯುವಕ ಲಕ್ಷ್ಮಿಕಾಂತ್ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದು ಪ್ರಕರಣ ದಿನ ಕಳೆದಂತೆ ಮತ್ತಷ್ಟು ತಿರುವು ಪಡೆಯುತ್ತಿದೆ.
ಇನ್ನು ಗೃಹ ಸಚಿವರ ಸ್ವಕ್ಷೇತ್ರದಲ್ಲೇ ಹಿರಿಯ ಪೊಲೀಸ್ ಅಧಿಕಾರಿಗಳ ಮೇಲೆ ಗಂಭೀರ ಆರೂಪದಗಳು ಕೇಳಿ ಬಂದಿದ್ದರು ಸಹ ಇದುವರೆಗೂ ಯಾವುದೇ ಕ್ರಮ ಕೈಗೊಳ್ಳದೆ ಇರುವುದು ಸಾಕಷ್ಟು ಅನುಮಾನಗಳಿಗೂ ಸಹ ಎಡೆ ಮಾಡಿಕೊಡುತ್ತಿದ್ದು.
ಯುವತಿ ನೀಡಿರುವ ದೂರು ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಯ ಮೇಲಿದ್ದು ಮುಂದೆ ಯಾವ ಹಂತ ತಲುಪಲಿದೆ ಎಂಬುದನ್ನು ಕಾದು ನೋಡಬೇಕಿದೆ.