ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಬಾಗಲಕೋಟೆಯ ಬನಹಟ್ಟಿಯಲ್ಲಿ ನೇಕಾರ ಸಮುದಾಯದವರ ಜತೆ ಅವರ ಸಂಕಷ್ಟ ಕುರಿತು ಭಾನುವಾರ ಸಂವಾದ ನಡೆಸಿದರು.
ಇನ್ನು ಕರೋನಾ ಸಂಕಷ್ಟ ಕಾಲದಲ್ಲಿ ನೇಕಾರರ ಕುಟುಂಬಗಳು ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದ ಅದನ್ನೇ ನಂಬಿ ಬದುಕುತ್ತಿದ್ದ ಕುಟುಂಬಗಳು ಇಂದು ಬೀದಿಗೆ ಬೀಳುವಂತಹ ಸ್ಥಿತಿಗೆ ಬಂದಿದ್ದು . ಇದರಿಂದ ಅನೇಕ ನೇಕಾರರ ಕುಟುಂಬಗಳು ತಮ್ಮಲ್ಲಿರುವ ಅನೇಕ ಸಮಸ್ಯೆಗಳನ್ನು ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್ ಅವರ ತೋಡಿಕೊಂಡರು.
ಸಂವಾದದ ನಂತರ ಡಿಕೆ ಶಿವಕುಮಾರ್ವರು ಚರಕದಲ್ಲಿ ನೂಲುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು ವಿಶೇಷವಾಗಿತ್ತು. ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ್, ಮಾಜಿ ಸಚಿವೆ ಉಮಾಶ್ರೀ, ಶಾಸಕ ಆನಂದ ನ್ಯಾಮಗೌಡ, ಮಾಜಿ ಶಾಸಕ ಎಂ.ಡಿ. ಲಕ್ಷ್ಮಿನಾರಾಯಣ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ನಂಜಯ್ಯನಮಠ ಮತ್ತಿತರರು ಭಾಗವಹಿಸಿದ್ದರು.