ಕರೋನ ಬಂದಾಗಿನಿಂದ ರಾಜ್ಯಾದ್ಯಂತ ಪದವಿ ಕಾಲೇಜುಗಳು ಮುಚ್ಚಲ್ಪಟ್ಟಿತು ಅದರಿಂದ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿತ್ತು ಆದ್ದರಿಂದ ಇಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಜುಲೈ 26ರಿಂದ ಎಲ್ಲ ಪದವಿ ಕಾಲೇಜುಗಳನ್ನು ತೆರೆಯಲು ಅವಕಾಶ ನೀಡಲಾಗಿದೆ.
ಪದವಿ ತರಗತಿಗೆ ಹಾಜರಾಗುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಮೊದಲ ಡೂಸ್ ಲಸಿಕೆ ಪಡೆಯಲು ಕಡ್ಡಾಯಗೊಳಿಸಿದೆ ಕನಿಷ್ಠ ಮೊದಲ ಡೋಸ್ ಪಡೆದ ವಿದ್ಯಾರ್ಥಿಗಳಿಗೆ ಮಾತ್ರ ತರಗತಿಗೆ ಹಾಜರಾಗಲು ಸರ್ಕಾರ ಅನುಮತಿ ನೀಡಿದೆ.
ಕಳೆದ ಕೆಲ ದಿನಗಳ ಹಿಂದೆ ಉನ್ನತ ಶಿಕ್ಷಣ ಸಚಿವರಾದ ಅಶ್ವಥ್ ನಾರಾಯಣ ರವರು ಕಳೆದ ಕೆಲ ದಿನಗಳ ಹಿಂದೆ ಪದವಿ ತರಗತಿಗಳ ತಡೆಯುವ ಸಲುವಾಗಿ ಸುಳಿವು ನೀಡಿದರು. ಇಂದು ನಡೆದ ಮುಖ್ಯಮಂತ್ರಿಗಳ ಸಭೆಯಲ್ಲಿ ಜುಲೈ 26ರಿಂದ ಪದವಿ ತರಗತಿಗಳು ಅನುಮತಿ ನೀಡಲಾಗಿದ್ದು ಪದವಿ ಕಾಲೇಜುಗಳ ಎಲ್ಲಾ ಶೈಕ್ಷಣಿಕ ಚಟುವಟಿಕೆಗಳು 26ರಿಂದ ಪ್ರಾರಂಭವಾಗಲಿದೆ .
ನಾಳೆಯಿಂದ ಚಿತ್ರಮಂದಿರಗಳು ಓಪನ್.
ಹಾಗೆಯೇ ರಾಜ್ಯದ್ಯಂತ ನಾಳೆಯಿಂದ ಚಿತ್ರಮಂದಿರಗಳನ್ನು ತೆರೆಯಲು ಸಹ ಅವಕಾಶ ನೀಡಲಾಗಿದೆ. ಇನ್ನು ಅನ್ಲಾಕ್ ಪ್ರಕ್ರಿಯೆಗೆ ಸಂಬಂಧಿಸಿದಂತೆ ಚಿತ್ರಮಂದಿರಗಳನ್ನು ತೆರೆಯಲು ಸಾಕಷ್ಟು ಒತ್ತಡಗಳು ಬಂದಿದ್ದು ಇದಕ್ಕೆ ಮಣಿದ ಸರ್ಕಾರ ನಾಳೆಯಿಂದ ರಾಜ್ಯಾದ್ಯಂತ ಚಿತ್ರಮಂದಿಗಳ ನನ್ನ ತೆರೆಯಲು ಅವಕಾಶ ನೀಡಲಾಗಿದೆ.