ಬೈಕ್ ಮುಖಾಮುಖಿ ಡಿಕ್ಕಿ ಶಾಲಾ ಬಾಲಕಿ ಸ್ಥಳದಲ್ಲೇ ಸಾವು.

ಬೈಕ್ ಮುಖಾಮುಖಿ ಡಿಕ್ಕಿ ಶಾಲಾ ಬಾಲಕಿ ಸ್ಥಳದಲ್ಲೇ

ಸಾವು

 .

 

ಕೊರಟಗೆರೆ: ದ್ವಿಚಕ್ರ ವಾಹನಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ವಿದ್ಯಾಗಮ ತರಗತಿ ಮುಗಿಸಿ ಮನೆಗೆ ತೆರಳುತ್ತಿದ್ದ ಬಾಲಕಿಯೋರ್ವಳು ಸ್ಥಳದಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಪಟ್ಟಣದ ದೊಡ್ಡೇಗೌಡ ಪೆಟ್ರೋಲ್ ಬಂಕ್ ಬಳಿ ಘಟನೆ ಸಂಭವಿಸಿದ್ದು, ಸಿ.ಎನ್.ದುರ್ಗ ಹೋಬಳಿ ಮಾಲಿಂಗನಹಟ್ಟಿ ಗ್ರಾಮದ ನಿವಾಸಿ ಗೋಪಾಲಕೃಷ್ಣ ಎಂಬುವರ ಪುತ್ರಿ ವರ್ಷಿತಾ(12) ಮೃತ ದುರ್ದೈವಿ. 7ನೇ ತರಗತಿ ಓದುತ್ತಿರುವ ಗುರುವಾರ ಸಂಜೆ ವಿದ್ಯಾಗಮ ತರಗತಿ ಮುಗಿಸಿಕೊಂಡು ತನ್ನ ತಂದೆ ಗೋಪಾಲಕೃಷ್ಣ ಅವರೊಂದಿಗೆ ಬೈಕ್ ನಲ್ಲಿ ತೆರಳುತ್ತಿದ್ದಳು. ಈ ವೇಳೆ ತುಮಕೂರು ಕಡೆಯಿಂದ ಬಂದ ಮತ್ತೊಂದು ಬೈಕ್ ಮತ್ತು ವರ್ಷಿತಾಳ ತಂದೆ ಚಲಾಯಿಸುತ್ತಿದ್ದ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ.

 

ಅಪಘಾತದ ರಭಸಕ್ಕೆ ನೆಲಕ್ಕೆ ಬಿದ್ದ ವರ್ಷಿತಾಳ ತಲೆಗೆ ತೀವ್ರವಾದ ಪೆಟ್ಟಾಗಿದ್ದು ವಿಪರೀತ ರಕ್ತಸ್ರಾವವಾಗಿ ಆಕೆ ಸ್ಥಳದಲ್ಲಿಯೇ ಒದ್ದಾಡಿ  ಪ್ರಾಣ ಬಿಟ್ಟಿದ್ದಾಳೆ. ಗಂಭೀರವಾಗಿ ಗಾಯಗೊಂಡಿರುವ ಆಕೆಯ ತಂದೆ ಗೋಪಾಲಕೃಷ್ಣ ಅವರನ್ನು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು ಕೊರಟಗೆರೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version