ಸಿಇಓರವರು ಸ್ಥಳೀಯ ಸಂಸ್ಥೆಗಳಲ್ಲಿ ಹಸ್ತಕ್ಷೇಪ ನಿಲ್ಲಿಸದಿದ್ದರೆ ಪ್ರತಿ ಗಾಮಪಂಚಾಯಿತಿಗಳ ಮುಂದೆ ಉಗ್ರ ಹೋರಾಟದ ಎಚ್ಚರಿಕೆ-ಕಾಡಶೆಟ್ಟಿಹಳ್ಳಿ ಸತೀಶ್

ಸಿಇಓರವರು ಸ್ಥಳೀಯ ಸಂಸ್ಥೆಗಳಲ್ಲಿ ಹಸ್ತಕ್ಷೇಪ ನಿಲ್ಲಿಸದಿದ್ದರೆ ಪ್ರತಿ ಗಾಮಪಂಚಾಯಿತಿಗಳ ಮುಂದೆ ಉಗ್ರ ಹೋರಾಟದ ಎಚ್ಚರಿಕೆ-ಕಾಡಶೆಟ್ಟಿಹಳ್ಳಿ ಸತೀಶ್

ತುಮಕೂರು : ತುಮಕೂರು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಗ್ರಾಮ ಪಂಚಾಯತಿಗಳು ಸ್ಥಳೀಯ ಸ್ವಯಂ ಸರ್ಕಾರಗಳೇ ಎಂಬುದನ್ನು ಸ್ಪಷ್ಟಪಡಿಸದಿರುವ ಹಾಗೂ ಗ್ರಾಮ ಪಂಚಾಯತಿಗಳ ಆಡಳಿತದಲ್ಲಿ ಹಸ್ತಕ್ಷೇಪ ಮಾಡಿತ್ತಿರುವುದನ್ನು ನಿಲ್ಲಿಸಿ, ನಮ್ಮ ಜೊತೆ ಮಾತುಕತೆ ನಡೆಸದಿದ್ದರೆ ಪ್ರತಿ ಗ್ರಾಮ ಪಂಚಾಯತಿ ಮತ್ತು ತಾಲ್ಲೂಕು ಪಂಚಾಯಿತಿಗಳ ಮುಂದೆ ತೀವ್ರತರ ಹೋರಾಟ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ಸದಸ್ಯರ ಮಹಾ ಒಕ್ಕೂಟದ ಕಾಡಶೆಟ್ಟಿಹಳ್ಳಿ ಸತೀಶ್ ಆಗ್ರಹಿಸಿದರು.

 

 

 

 

 

ಅವರಿಂದು ಸಿಇಒ ರವರ ನಡೆಯನ್ನು ಖಂಡಿಸಿ ತುಮಕೂರಿನ ಜಿಲ್ಲಾಧಿಕಾರಿಗಳ ಕಛೇರಿಯ ಬಳಿ ಧರಣಿ ಸತ್ಯಾಗ್ರಹ ನಂತರ ಜಿಲ್ಲಾಧಿಕಾರಿ ಶುಭ ಕಲ್ಯಾಣ ಅವರಿಗೆ ಮುಖ್ಯಮಂತ್ರಿಗಳಿಗೆ ಕ್ರಮಕ್ಕೆ ಆಗ್ರಹಿಸಿ ಮನವಿ ಪತ್ರ ಸಲ್ಲಿಸಿದ ಸಂದರ್ಭದಲ್ಲಿ ಮಾತನಾಡುತ್ತಿದ್ದರು.

 

 

 

 

 

ಅಕ್ಟೋಬರ್ ೩೧ರಂದು ಪತ್ರ ನೀಡಿದ್ದರೂ ಇದುವರೆವಿಗೂ ಒಂದು ಸ್ಥಳೀಯ ಜನಪ್ರತಿನಿಧಿಗಳಿಗೆ ಉತ್ತರ ನೀಡದಿರುವುದಕ್ಕೆ, ಧರಣಿ ನಡೆಸುವುದಾಗಿ ಪತ್ರ ನೀಡಿದರೂ ನಮ್ಮ ಜೊತೆ ಸಿಇಓ ಅವರು ಮಾತುಕತೆ ನಡೆಸಿಲ್ಲ ಭಾರತದ ಸಂವಿಧಾನದ ಭಾಗ ೪ ರ( ರಾಜ್ಯ ನೀತಿಯ ನಿರ್ದೇಶಕ ತತ್ವಗಳು) ಪ್ರಕರಣ ೪೦ ರ ಅನ್ವಯ ರಾಜ್ಯವು ಗ್ರಾಮ ಪಂಚಾಯತಿಗಳನ್ನು ಸಂಘಟಿಸಲು ಕ್ರಮ ಕೈಗೊಳ್ಳತ್ತಕ್ಕದ್ದು ಮತ್ತು ಸ್ವಯಂ ಆಡಳಿತ ಘಟಕಗಳಾಗಿ ಅವು ಕೆಲಸ ಮಾಡುವುದಕ್ಕೆ ಅವಶ್ಯವಾಗಬಹುದಾದಂಥ ಅಧಿಕಾರಗಳನ್ನು ಮತ್ತು ಪ್ರಾಧಿಕಾರಗಳನ್ನು ಅವುಗಳಿಗೆ ಕೊಡತಕ್ಕದ್ದು ಎಂದು ಹೇಳಿದರು.

 

 

 

 

 

ಪ್ರಕರಣ ೩೭: ಈ ಭಾಗದಲ್ಲಿ ಅಡಕವಾಗಿರುವ ಉಪಬಂಧಗಳನ್ನು ಯಾವುದೇ ನ್ಯಾಯಾಲಯದ ಮೂಲಕ ಜಾರಿಗೋಳಿಸಲು ಅವಕಾಶವಿರತಕ್ಕದ್ದಲ್ಲ; ಆದಾಗ್ಯೂ ಈ ಭಾಗದಲ್ಲಿ ಹೇಳಲಾಗಿರುವ ತತ್ವಗಳು ದೇಶದ ಆಡಳಿತ ವ್ಯವಸ್ಥೆಯಲ್ಲಿ ಮೂಲಭೂತವಾದವುಗಳಾಗಿರುತ್ತವೆ ಮತ್ತು ಕಾನೂನುಗಳನ್ನು ಮಾಡುವಲ್ಲಿ ಈ ತತ್ವಗಳನ್ನು ಅನ್ವಯಿಸುವುದು ರಾಜ್ಯದ ಕರ್ತವ್ಯವಾಗಿರತಕ್ಕದ್ದು, ಎಂದಿದೆ.

 

 

 

 

 

 

ಸಂವಿಧಾನದ ೭೩ ನೆಯ ತಿದ್ದುಪಡಿಯ ಅನ್ವಯ ಸೇರಿಸಲಾದ ಭಾಗ ೯ರ ಪ್ರಕರಣ ೨೪೩ಜಿ ರ ಅನ್ವಯ ಈ ಸಂವಿದಾನದ ಉಪಬಂಧಗಳಿಗೆ ಒಳಪಟ್ಟು ಒಂದು ರಾಜ್ಯದ ವಿಧಾನ ಮಂಡಲವು, ಕಾನೂನಿನ ಮೂಲಕ ಆ ಪಂಚಾಯತಿಗಳಿಗೆ, ಅವು ಸ್ವಯಂ ಆಡಳಿತ ಸಂಸ್ಥೆಗಳಾಗಿ ಕಾರ್ಯನಿರ್ವಹಿಸುವುದಕ್ಕೆ ಅನುಕೂಲವಾಗಲು ಅವಶ್ಯವಾಗಬಹುದಾದಂಥ ಅಧಿಕಾರಗಳನ್ನು ಮತ್ತು ಪ್ರಾಧಿಕಾರಗಳನ್ನು ನೀಡಬಹುದು ಎಂದು ತಿಳಿಸಿದರು.

 

 

 

 

 

ಆದರೆ , ತುಮಕೂರು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಗ್ರಾಮ ಪಂಚಾಯತಿಗಳನ್ನು ಸ್ಥಳೀಯ ಸ್ವಯಂ ಸರ್ಕಾರಗಳೆಂದು ಭಾವಿಸದೆ, ತಮ್ಮ ಶಾಖಾ ಕಛೇರಿಗಳೆಂದು ಪರಿಭಾವಿಸಿ ತಮಗೆ ಬೇಕಾದ ಹಾಗೆ ಆದೇಶಗಳನ್ನು ಮಾಡುತ್ತಾ, ತಮ್ಮ ನೇರ ನಿಯಂತ್ರಣದಲ್ಲಿರುವ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಮೂಲಕ, ತಮ್ಮಿಚ್ಛೆಯ ಕಾರ್ಯಕ್ರಮಗಳನ್ನು, ಪ್ರಜಾಸತ್ತಾತ್ಮಕವಾಗಿ ಗ್ರಾಮ ಸಭೆಗಳಲ್ಲಿ ಚರ್ಚಿಸದೆ, ಜನರಿಂದ ಆಯ್ಕೆಯಾದ ಗ್ರಾಮ ಪಂಚಾಯತಿಗಳ ಸಭೆಯಲ್ಲಿ ಚರ್ಚಿಸದೆ, ಗ್ರಾಮಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರನ್ನು ಸಂಪೂರ್ಣವಾಗಿಕಡೆಗಣಿಸಿ ನೇರವಾಗಿ ತಮ್ಮ ಆದೇಶಗಳನ್ನು ಅನುಷ್ಠಾನಗೊಳಿಸುವಂತೆ ಮಾಡುತ್ತಿದ್ದಾರೆ. ಇದು ಸಂವಿಧಾನ ವಿರೋಧಿ ಹಾಗೂ ಪ್ರಜಾಪ್ರಭುತ್ವ ವಿರೋಧಿ ನಡೆಯಾಗಿದೆ. ಇದನ್ನು ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ಸದಸ್ಯರ ಮಹಾ ಒಕ್ಕೂಟ ಖಂಡಿಸುತ್ತದೆ ಎಂದು ಹೇಳಿದರು.

 

 

 

 

 

 

೨೪೩ಜಿ೯(ಬಿ); ಹನ್ನೊಂದನೆಯ ಅನುಸೂಚಿಯಲ್ಲಿ ಪಟ್ಟಿಮಾಡಿದ ವಿಷಯಗಳಿಗೂ ಸೇರಿದಂತೆ, ಪಂಚಾಯತಿಗಳಿಗೆ ವಹಿಸಬುದಾದಂಥ ಆರ್ಥಿಕಾಭಿವೃದ್ಧಿಯ ಮತ್ತು ಸಾಮಾಜಿಕ ನ್ಯಾಯದ ಪರಿಯೋಜನೆಗಳ ಅನುಷ್ಠಾನಕ್ಕೆ ಎಂದು ಹೇಳುತ್ತದೆ.

 

 

 

 

 

ಆದರೆ ಸಿಇಒ ರವರು ಉದ್ಯೋಗಖಾತ್ರಿ ಯೋಜನೆಯಲ್ಲಿ ಗ್ರಾಮ ಪಂಚಾಯತಿಗಳು ಗ್ರಾಮಸಭೆಗಳ ಮೂಲಕ ರೂಪಿಸಿದ ವಾರ್ಷಿಕ ಕ್ರಿಯಾಯೋಜನೆಗಳನ್ನು ಧಿಕ್ಕರಿಸಿ, ತಾವು ಗ್ರಾಮಪಂಚಾಯತಿ ಅಧಿಕಾರಿಗಳು ಮತ್ತು ನೌಕರರ ಮೂಲಕ ಕೇವಲ ಉದಿಬದ ಕಾಮಗಾರಿಗಳ ಯೋಜನೆ ರೂಪಿಸಿ(ಮಿಷನ್-೫೦೦) ಅದನ್ನೇ ಅನುಷ್ಠಾನಮಾಡುವಂತೆ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಮೇಲೆ ಒತ್ತಡ ಹೇರಿ ಅನುಷ್ಠಾನಗೊಳಿಸುತ್ತಿರುವುದನ್ನು ಖಂಡಿಸುವುದಾಗಿ ಹೇಳಿದರು.

 

 

 

 

 

 

ಸ್ವಚ್ಛಭಾತರ ಮಿಷನ್ ಯೋಜನೆಯಲ್ಲೂ ಎಲ್ಲಾ ಪಂಚಾಯತಿಗಳು ವೀಡ್ ಕಟಿಂಗ್ ಮೆಷಿನ್ ಖರೀದಿ ಮಾಡಿ ತಾವ ಹೇಳಿದಂತೆ ರಸ್ತೆ ಬದಿಯಲ್ಲಿ ಸ್ವಚ್ಛಮಾಡುವಂತೆ ಒತ್ತಾಯ ಹಾಕಿ, ತಾವು ಹೇಳಿದ ಕಾರ್ಯಕ್ರವಗಳನ್ನು ಕನಿಷ್ಠ ಗ್ರಾಮ ಪಂಚಾಯತಿ ಸಭೆಗಳಲ್ಲಿ ಅಧ್ಯಕ್ಷರ ಸದಸ್ಯರ ಗಮನಕ್ಕೂ ತಾರದೇ ತಾವು ಹೇಳಿದ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಿಸುತ್ತಿದ್ದಾರೆ, ಇದು ಸಂಪೂರ್ಣವಾಗಿ ಸಂವಿಧಾನ ಮತ್ತು ಪ್ರಜಾಪ್ರಭುತ್ವ ವಿರೋಧಿ ಹಾಗೂ ವಿಕೇಂದ್ರೀಕರಣ ವಿರೋಧಿ ಕ್ರಮವಾಗಿದೆ ಎಂದು ಹೇಳಿದರು.

 

 

 

 

 

ಕೂಸಿನ ಮನೆ ಒಂದು ಅವ್ಶೆಜ್ಞಾನಿಕ ಯೋಜನೆಯಾಗಿದೆ, ಅದನ್ನು ಅನುಷ್ಠಾನವೊಂದೇ ಸಿಇಓರವರ ಕೆಲಸವೇ! ಹೀಗೆ ಎಲ್ಲಾ ತೀರ್ಮನಗಳನ್ನೂ ಮೇಲಿನ ಹಂತದ ಅಧಿಕಾರಿಗಳು ಮಾಡಿ ಸ್ಥಳೀಯ ಸ್ವಯಂ ಸರ್ಕರಗಳಾದ ಗ್ರಾಮ ಪಂಚಾಯತಿಗಳ ಮೇಲೆ ತಮ್ಮ ಅಧಕಾರದ ವ್ಯಾಪ್ತಿ ಮೀರಿ ಹೇರುವುದು, ಸಂವಿಧಾನ, ಪ್ರಜಾಪ್ರಭುತ್ವ ಹಾಗೂ ವಿಕೇಂದ್ರೀಕರಣ ವಿರೋಧಿಯಾಗುತ್ತದೆ ಎಂದು ಹೇಳಿದರು.

 

 

 

 

 

 

ಆದ್ದರಿಂದ ಸಿಇಓ ರವರು ಈ ಕೂಡಲೇ ಸಂವಿಧಾನಾತ್ಮಕ ಸ್ಥಳೀಯ ಸ್ವಯಂ ಸರ್ಕಾರಗಳಾದ ಗ್ರಾಮ ಪಂಚಾಯತಿಗಳ ಆಡಳಿತದಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳನ್ನು ಅಮಾನತ್ತು ಮಾಡುವ ಬೆದರಿಕೆ ಹಾಕುವ ಮೂಲಕ ಹಸ್ತಕ್ಷೇಪ ಮಾಡುವುದನ್ನು ನಿಲ್ಲಿಸಬೇಕು ಎಂದು ತಮ್ಮಲ್ಲಿ ಆಗ್ರಹಿಸಿ ದಿನಾಂಕ ೩೧-೧೦-೨೦೨೩ ರಂದು ಸಿಇಒ ರವರಿಗೆ ಪತ್ರ ಬರೆಯಲಾಗಿತ್ತು. ಇಲ್ಲವಾದಲ್ಲಿ ರಾಜ್ಯ ಸಕಾರದ ಗಮನಕ್ಕೆ ಈ ವಿಷಯವನ್ನು ತರುವುದಲ್ಲದೆ, ತುಮಕೂರು ಜಿಲ್ಲಾ ಪಂಚಾಯತ್ ಕಛೇರಿಯ ಮುಂದೆ ಪ್ರತಿಭಟನೆ ಮಾಡಲಾಗುವುದು ಎಂಬುದನ್ನು ಸಹ ಸಿಇಒ ರವರ ಅವಗಾಹನೆಗೆ ತರಲಾಗಿತ್ತು ಇದುವರೆವಿಗೂ ಉತ್ತರ ನೀಡದೆ ಪ್ರಜಾಪ್ರಭುತ್ವವನ್ನು ದಿಕ್ಕಾರಿಸಿದ್ದಾರೆ ಎಂದು ಹೇಳಿದರು.

 

 

 

 

 

 

 

ಗ್ರಾಮ ಪಂಚಾಯತಿಗಳು ಜಿಲ್ಲಾ ಪಂಚಾಯತಿಯ ಶಾಖಾ ಕಛೇರಿಗಳೇ? ಅಥವಾ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾಗಿರುವ ಸ್ಥಳೀಯ ಸ್ವಯಂ ಸರ್ಕಾರಗಳೇ? ಎಂಬುದನ್ನು ಸ್ಪಷ್ಠಪಡಿಸಬೇಕೆಂದು ಪತ್ರದ ಮೂಲಕ ತಮ್ಮಲ್ಲಿ ಕೋರಲಾಗಿತ್ತು. ಆದರೆ ಇದುವರೆವಿಗೂ ತಾವು ಗ್ರಾಮಪಂಚಾಯತಿಗಳನ್ನು ತಮ್ಮ ಶಾಖಾ ಕಛೇರಿಗಳಂತೆ ನಡೆಸಿಕೊಳ್ಳುವುದನ್ನು ನಿಲ್ಲಿಸಿರುವುದಿಲ್ಲ. ಗ್ರಾಮಸಭೆಯ ಹಾಗೂ ಗ್ರಾಮ ಪಂಚಾಯತಿಗಳ ನಿರ್ಣಯಗಳಿಗೆ ಬೆಲೆಯಿಲ್ಲದಂತಾಗಿದೆ ಗ್ರಾಮ ಪಂಚಾಯತಿಗಳು ಜಿಲ್ಲಾ ಪಂಚಾಯತಿಯ ಶಾಖಾ ಕಛೇರಿಗಳೇ? ಅಥವಾ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾಗಿರುವ ಸ್ಥಳೀಯ ಸ್ವಯಂ ಸರ್ಕಾರಗಳೇ? ಎಂಬುದನ್ನು ಸ್ಪಷ್ಠಪಡಿಸಿರುವುದಿಲ್ಲ.

 

 

 

 

 

 

ಸಿಇಒ ರವರು ಸಂವಿಧಾನ ವಿರೋಧಿ, ಪ್ರಜಾಪ್ರಭುತ್ವ ವಿರೋಧಿ ನಡೆಗೆ ಕಡಿವಾಣ ಹಾಕ ಬೇಕೆಂದು, ತನ್ಮೂಲಕ ಗ್ರಾಮ ಸಭಾ ಸದಸ್ಯರ ಹಾಗೂ ಗ್ರಾಮ ಪಂಚಾಯತಿಗಳ ಹಕ್ಕುಗಳನ್ನು ರಕ್ಷಣೆ ಮಾಡದೆ ಅಕ್ಷೇಪ ಮಾಡಿದಲ್ಲಿ ಜಿಲ್ಲೆಯ ಪ್ರತಿ ಗ್ರಾಮಪಂಚಾಯತಿ ಮತ್ತು ತಾಲ್ಲೂಕು ಪಂಚಾಯಿತಿಗಳ ಮುಂದೆ ತೀವ್ರತರ ಪ್ರತಿಭಟನೆ, ಧರಣಿ ಹಮ್ಮಿಕೊಳ್ಳುವುದಾಗಿ ಕಾಡಶೆಟ್ಟಿಹಳ್ಳಿ ಸತೀಶ್ ಎಚ್ಚರಿಸಿದರು.

 

 

 

 

 

 

ಧರಣಿಯಲ್ಲಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ಸದಸ್ಯರ ಮಹಾ ಒಕ್ಕೂಟದ ಕಾರ್ಯದರ್ಶಿ ಚಲಪತಿ, ಜಿಲ್ಲಾ ಗ್ರಾಮ ಪಂಚಾಯತಿ ಸದಸ್ಯರ ಜಿಲ್ಲಾಧ್ಯಕ್ಷರಾದ ವಿಜಯಪ್ರಕಾಶ್ ದೊಡ್ಡೇರಿ ಮತ್ತು ಮುಳಬಾಗಿಲು ತಾಲ್ಲೂಕು ಗ್ರಾ.ಪಂ. ಅಧ್ಯಕ್ಷರಾದ ಶಂಕರ್ ಹಾಗೂ ಪದಾಧಿಕಾರಿಗಳು ಮತ್ತು ಗ್ರಾಮ ಪಂಚಾಯತಿ ಸದಸ್ಯರುಗಳು ಭಾಗವಹಿಸಿದ್ದರು

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version