ಅಂಗನವಾಡಿ ಮೇಲ್ಚಾವಣಿ ಕುಸಿದು ನಾಲ್ಕು ವರ್ಷದ ಮಗುವಿಗೆ ಗಾಯ ಅಜ್ಜಿ ಪಾರು.
ತುರುವೇಕೆರೆ – ತಾಲೂಕಿನ ಹಡವನಹಳ್ಳಿ ಗ್ರಾಮದ ಅಂಗನವಾಡಿಯ ಮೇಲ್ಚಾವಣಿ ಕುಸಿದು ನಾಲ್ಕು ವರ್ಷದ ಮಗುವಿಗೆ ಗಂಭೀರ ಗಾಯ ಆಗಿರುವ ಘಟನೆ ವರದಿಯಾಗಿದೆ.
ಇನ್ನು ಅಂಗನವಾಡಿ ಕೇಂದ್ರದಲ್ಲಿ ಅಭ್ಯಾಸ ಮಾಡುತ್ತಿರುವ ನಾಲ್ಕು ವರ್ಷದ ಪುಟ್ಟ ಮಗುವಿನ ತಲೆಗೆ ಅಂಗನವಾಡಿಯ ಮೇಲ್ಚಾವಣಿಯ ಚೂರುಗಳು ಏಕಏಕಿ ಬಿದ್ದು ತಲೆಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು ಮಗುವಿನ ಪೋಷಕರು ಅಂಗನವಾಡಿಯ ಸ್ಥಿತಿಗೆ ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ಇನ್ನು ಮಗು ಅಂಗನವಾಡಿ ಶಾಲೆಗೆ ಬಂದ ಕೂಡಲೇ ಏಕಾಏಕಿ ಮೇಲ್ಚಾವಣಿ ಕುಸಿದಿದ್ದು ಇದೇ ಸಂದರ್ಭದಲ್ಲಿ ಮಗುವಿನ ಜೊತೆಯಲ್ಲಿದ್ದ ಅಜ್ಜಿಯ ಕಾಲಿಗೂ ಸಹ ಪೆಟ್ಟು ಬಿದ್ದಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಘಟನೆಯ ಬಗ್ಗೆ ಮಾಹಿತಿ ನೀಡಿರುವ ಸ್ಥಳೀಯರು ಅಂಗನವಾಡಿ ಕೇಂದ್ರದ ಕಳಪೆ ಕಾಮಗಾರಿಯೇ ಇಂದಿನ ದುರ್ಘಟನೆಗೆ ಸಾಕ್ಷಿ ಎಂದು ಆಕ್ರೋಶ ಹೊರಹಾಕಿದ್ದಾರೆ
ಲಕ್ಷಾಂತರ ರೂ ಖರ್ಚು ಮಾಡಿ ಗ್ರಾಮಕ್ಕೆ ಒಂದು ಅಂಗನವಾಡಿ ಕೇಂದ್ರ ನಿರ್ಮಿಸಿ ಅವುಗಳ ನಿರ್ವಹಣೆಗೆ ಲಕ್ಷಾಂತರ ರೂಗಳನ್ನು ಕರ್ಚುಮಾಡಿ ಮಕ್ಕಳ ಪೋಷಣೆಗೆ ಅಂಗನವಾಡಿ ಕೇಂದ್ರಗಳನ್ನ ನಿರ್ಮಾಣ ಮಾಡಿದ್ದು ಇನ್ನು ಜಿಲ್ಲೆಯಲ್ಲಿ ಹಲವು ಅನೇಕ ಅಂಗನವಾಡಿ ಕೇಂದ್ರಗಳು ದುಸ್ಥಿತಿಗೆ ತಲುಪಿದೆ ಎಂಬುದಕ್ಕೆ ಇಂದು ತುರುವೇಕೆರೆ ಹಡವನಹಳ್ಳಿ ಗ್ರಾಮದಲ್ಲಿ ನಡೆದಿರುವ ಘಟನೆಯೇ ಪ್ರತ್ಯಕ್ಷ ಸಾಕ್ಷಿಯಾಗಿದೆ.
ಘಟನೆ ಗಮನಕ್ಕೆ ಬಂದ ಕೂಡಲೇ ಮಾನವ ಹಕ್ಕುಗಳ ಸೇವಾ ಕೇಂದ್ರದ ಮುಖ್ಯಸ್ಥರಾದ ಸಿದ್ದಲಿಂಗೆಗೌಡರು ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ತುರ್ತಾಗಿ ಪತ್ರ ಬರೆದು ಅಂಗನವಾಡಿಯ ಕಳಪೆ ಕಾಮಗಾರಿಗೆ ಕಾರಣರಾದ ಸ್ಥಳೀಯ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿ ಸೇವೆಯಿಂದ ವಜಾ ಮಾಡುವಂತೆ ಪತ್ರ ಬರೆದಿದ್ದಾರೆ.
ಇನ್ನು ತುಮಕೂರು ಜಿಲ್ಲಾ ಪಂಚಾಯತ್ ಆಡಳಿತದಲ್ಲಿ ತಾಂತ್ರಿಕತೆ ನೂರರಷ್ಟು ಹಾಳಾಗಿದ್ದು ಜಿಲ್ಲಾ ಪಂಚಾಯತ್ ನಲ್ಲಿ ಹೇಳುವವರು…. ಕೇಳುವವರು…. ಯಾರು ಇಲ್ಲದಂತಾಗಿದ್ದು ಕೂಡಲೇ ಘಟನೆಗೆ ಕಾರಣರಾಗಿರುವ ಗುತ್ತಿಗೆದಾರರು ಸೇರಿದಂತೆ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ದಾರೆ.