ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದ ನ್ಯಾಯಾಧೀಶರನ್ನು ಝೀರೋ ಟ್ರಾಫಿಕ್ ಮೂಲಕ ಬೆಂಗಳೂರಿಗೆ ರವಾನೆ.
ತುಮಕೂರು_ಶಿವಮೊಗ್ಗ ಕೋರ್ಟ್ನ ನಿವೃತ್ತ ನ್ಯಾಯಾಧೀಶರಾದ ಸದಾನಂದ ಎಂ. ಕಲಾಲ್ ರವರು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು ಹಾಗಾಗಿ ತುರ್ತುಚಿಕಿತ್ಸೆಯ ನಿಮಿತ್ತ ಶಿವಮೊಗ್ಗ ನಗರದಿಂದ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಜೀರೋ ಟ್ರಾಫಿಕ್ ಮೂಲಕ ಆಂಬುಲೆನ್ಸ್ ನಲ್ಲಿ ಬೆಂಗಳೂರಿಗೆ ರವಾನೆ ಮಾಡಲು ಕ್ರಮ ಕೈಗೊಳ್ಳಲಾಗಿತ್ತು.
ಶಿವಮೊಗ್ಗ ನಗರದಿಂದ ಭದ್ರಾವತಿ ,ತುಮಕೂರು, ನೆಲಮಂಗಲ, ಮಾರ್ಗವಾಗಿ ಬೆಂಗಳೂರು ವರೆಗೂ ಪೊಲೀಸ್ ಇಲಾಖೆ ಜೀರೋ ಟ್ರಾಫಿಕ್ ಮಾಡುವ ಮೂಲಕ ಸಂಚಾರ ಮುಕ್ತಗೊಳಿಸಿ ಆಂಬುಲೆನ್ಸ್ ತೆರಳಲು ವ್ಯವಸ್ಥೆ ಮಾಡಿದ್ದಾರೆ.
ಆದರೆ ತುಮಕೂರಿಗೆ ಆಗಮಿಸಿದಾಗ ನ್ಯಾಯಾಧೀಶರ ಆರೋಗ್ಯ ತೀವ್ರ ಹದಗೆಟ್ಟಿದ್ದು ಕೂಡಲೇ ತುಮಕೂರಿನ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿ ತೀವ್ರ ನಿಗಾ ಘಟಕದಲ್ಲಿ ಇಡಲಾಗಿದ್ದು ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದ ಕೂಡಲೇ ಬೆಂಗಳೂರಿಗೆ ರವಾನಿಸುವ ಬಗ್ಗೆ ವೈದ್ಯರು ನಿರ್ಧಾರ ಕೈಗೊಳ್ಳಲಿದ್ದಾರೆ .
ಹಾಗಾಗಿ ಕೂಡಲೇ ನ್ಯಾಯಾಧೀಶರು ತುಮಕೂರಿನ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ನಾಳೆ ಬೆಂಗಳೂರಿಗೆ ರವಾನಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ