ಪೋಲಿಸ್ ಠಾಣೆಯ ರೆಕಾರ್ಡ್ ರೂಂನಲ್ಲಿ ಹಾವು ಪ್ರತ್ಯಕ್ಷ , ರಕ್ಷಿಸಿ ಕಾಡಿಗೆ ರವಾನೆ.

ಪೋಲಿಸ್ ಠಾಣೆಯ ರೆಕಾರ್ಡ್ ರೂಂನಲ್ಲಿ ಹಾವು ಪ್ರತ್ಯಕ್ಷ , ರಕ್ಷಿಸಿ ಕಾಡಿಗೆ ರವಾನೆ.

 

 

ತುಮಕೂರು_ತುಮಕೂರಿನ ಕ್ಯಾತ್ಸಂದ್ರ ಪೊಲೀಸ್ ಠಾಣೆಯ ರೆಕಾರ್ಡ್ ರೂಮಿಗೆ ಕೇರೆ ಹಾವೊಂದು ಎಂಟ್ರಿಕೊಟ್ಟು ಠಾಣೆಯ ಸಿಬ್ಬಂದಿಗಳಿಗೆ ಪೇಚಿಗೆ ಸಿಲುಕಿಸಿದೆ.

 

ಕೂಡಲೇ ಠಾಣೆಯ ರೆಕಾರ್ಡ್ ಸೆಕ್ಷನಲ್ಲಿ ಇದ್ದ ಹಾವು ಕಂಡ ಪೊಲೀಸ್ ಸಿಬ್ಬಂದಿಗಳು ತುಮಕೂರಿನ ವನ್ಯಜೀವಿ ಜಾಗೃತಿ ಹಾಗೂ ಉರಗ ಸಂರಕ್ಷಣಾ ಸಂಸ್ಥೆ ಗೆ ಕರೆ ಮಾಡಿ ಮಾಹಿತಿ ನೀಡಿದರು.

 

 

ಕೂಡಲೇ ಸ್ಥಳಕ್ಕೆ ಆಗಮಿಸಿದ ವರ್ಕೊ ಸಂಸ್ಥೆಯ ಉರಗತಜ್ಞ ಮನು ಮತ್ತು ತಂಡದವರು ಪೊಲೀಸ್ ಠಾಣೆಯ ಬೀರುವಿನ ಹಿಂದೆ ಸೇರಿಕೊಂಡಿದ್ದ ಸುಮಾರು ನಾಲ್ಕುವರೆ ಉದ್ದದ ಕೇರೆ ಹಾವನ್ನು ರಕ್ಷಣೆ ಮಾಡಿ ಸ್ಥಳೀಯ ಅರಣ್ಯ ಪ್ರದೇಶಕ್ಕೆ ರವಾನಿಸಿದ್ದಾರೆ.

 

 

ವರ್ಕೊ ಸಂಸ್ಥೆಯ ಸಹಾಯವಾಣಿ _9964519576

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version