ಜಿ.ಟಿ ದೇವೇಗೌಡ ರವರು ಪಕ್ಷದಲ್ಲಿ ಉಳಿಸಿಕೊಳ್ಳುವ ನಮ್ಮ ಪ್ರಯತ್ನ ಕೈ ಕೂಡಬಹುದು_ಹೆಚ್ ಡಿ ದೇವೇಗೌಡ.

ಜಿ.ಟಿ ದೇವೇಗೌಡ ರವರು ಪಕ್ಷದಲ್ಲಿ ಉಳಿಸಿಕೊಳ್ಳುವ ನಮ್ಮ ಪ್ರಯತ್ನ ಕೈ ಕೂಡಬಹುದು_ಹೆಚ್ ಡಿ ದೇವೇಗೌಡ.

 

ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ ದೇವೇಗೌಡ ರವರನ್ನು ಪಕ್ಷದಲ್ಲೇ ಉಳಿಸಿಕೊಳ್ಳುವ ಬಗ್ಗೆ ಸಾಕಷ್ಟು ಮಾತುಕತೆ ನಡೆದಿದೆ ಮುಂದಿನ ದಿನದಲ್ಲಿ ಅವರು ಪಕ್ಷದಲ್ಲೇ ಉಳಿದುಕೊಳ್ಳಬಹುದು ಎನ್ನುವ ಮೂಲಕ ಹೆಚ್ ಡಿ ದೇವೇಗೌಡ ಅಚ್ಚರಿ ಹೇಳಿಕೆಯನ್ನು ನೀಡಿದ್ದಾರೆ.

 

 

ತುಮಕೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಜೆಡಿಎಸ್ ವರಿಷ್ಠರಾದ ದೇವೇಗೌಡ ರವರು

ಜಿ ಟಿ ದೇವೇಗೌಡರವರು ನನ್ನ ಆತ್ಮೀಯ ಸ್ನೇಹಿತರು ನಾನು ಮೈಸೂರಿನಲ್ಲಿ ಅವರನ್ನು ಉತ್ತಮ ನಾಯಕರನ್ನಾಗಿ ಬೆಳೆಸುವ ಬಗ್ಗೆ ಸಾಕಷ್ಟು ಮನಸ್ಸು ಹೊಂದಿದ್ದೆವು ಅದರಂತೆ ಅವರು ಸಹ ಉತ್ತಮ ನಾಯಕತ್ವ ಹೊಂದಿರುವ ವ್ಯಕ್ತಿ. ಇನ್ನು ಹಳೆ ಮೈಸೂರು ಭಾಗದಲ್ಲಿ ಚಿಕ್ಕ ಗೌಡ, ಪುಟ್ಟಸ್ವಾಮಿ ನಿಧನದ ನಂತರ ಒಬ್ಬ ಉತ್ತಮ ನಾಯಕನಾಗಿ ಜಿಟಿ ದೇವೇಗೌಡ ರವರು ಸಮರ್ಥರಿದ್ದಾರೆ .

 

ರಾಜಕೀಯ ಎಂದ ಮೇಲೆ ಅಡೆತಡೆ ಅಸಮಾಧಾನ ಇವೆಲ್ಲವೂ ಸಹಜ ಆದ್ದರಿಂದ ರಾಜಕೀಯದಲ್ಲಿ ಇವೆಲ್ಲವನ್ನೂ ಉಳಿಸಿಕೊಂಡು ಹೋಗುವ ತಾಳ್ಮೆ ಇರಬೇಕು ಜಿ ಟಿ ದೇವೇಗೌಡ ಹಾಗೂ ನಮ್ಮ ಕುಟುಂಬ ಸಾಕಷ್ಟು ಉತ್ತಮ ಬಾಂಧವ್ಯ ಹೊಂದಿದೆ ನಮ್ಮ ಮೊಮ್ಮಕ್ಕಳ ಜೊತೆಯಲ್ಲೂ ಸಹ ಜಿಟಿ ದೇವೇಗೌಡರ ಮಗ ಉತ್ತಮ ಒಡನಾಟ ಹೊಂದಿದ್ದಾರೆ.

 

ಜಿಟಿ ದೇವೇಗೌಡ ರವರು ಸಹ ಉತ್ತಮ ವ್ಯಕ್ತಿ ಅವರ ಸ್ನೇಹ ತುಂಬಾ ದೊಡ್ಡದು ನಾವೆಲ್ಲ ಒಂದು ಶಕ್ತಿ ಇದ್ದಂತೆ ಎಂದಿದ್ದಾರೆ .

 

ಇನ್ನು ಅವರನ್ನು ಪಕ್ಷದಲ್ಲೇ ಉಳಿಸಿಕೊಳ್ಳುವ ಬಗ್ಗೆ ನಮ್ಮ ಮೊಮ್ಮಗ ಹಾಗೂ ಜಿಟಿ ದೇವೇಗೌಡ ರವರು ಮಗನ ಮೂಲಕ ಸಾಕಷ್ಟು ಮಾತುಕತೆ ನಡೆಯುತ್ತಿದ್ದು ಮುಂದಿನ ದಿನದಲ್ಲಿ ನಮ್ಮ ಎಲ್ಲಾ ಪ್ರಯತ್ನ ಕೈ ಕೊಡಬಹುದು ಎಂದು ಹೇಳುವ ಮೂಲಕ ಜಿ ಟಿ ದೇವೇಗೌಡರ ಅವರನ್ನು ಪಕ್ಷದಲ್ಲೇ ಉಳಿಸಿಕೊಳ್ಳುವ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version