ತುಮಕೂರು ಜಿಲ್ಲೆಗೆ ಬರಲಿದೆ ಜೆಡಿಎಸ್ ಪಂಚರತ್ನ ಯಾತ್ರೆ

ತುಮಕೂರು ಜಿಲ್ಲೆಗೆ ಬರಲಿದೆ ಜೆಡಿಎಸ್ ಪಂಚರತ್ನ ಯಾತ್ರೆ

ತುಮಕೂರು : ಜೆ.ಡಿ.ಎಸ್. ಪಕ್ಷದ ಮಹತ್ವಾಕಾಂಕ್ಷೆಯ ಅಜೆಂಡವನ್ನು ಹೊತ್ತು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪ್ರವಾಸ ಮಾಡುತ್ತಿರುವ ಪಂಚರತ್ನ ಯಾತ್ರೆಯ ಸಾರಥ್ಯವನ್ನು ವಹಿಸಿಕೊಂಡಿರುವ ಜೆಡಿಎಸ್ ಪಕ್ಷದ ಹಿರಿಯರು ಹೆಚ್.ಡಿ.ದೇವೇಗೌಡರವರ ನೇತೃತ್ವದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿಯವರು ಹಾಗೂ ಪಕ್ಷದ ರಾಜ್ಯಾಧ್ಯಕ್ಷರಾದ ಸಿ.ಎಂ.ಇಬ್ರಾಹಿಂರವರ ನಾಯಕತ್ವದಲ್ಲಿ ನಡೆಸಲಾಗುತ್ತಿದೆಂದು ಜಿಲ್ಲಾ ಜೆಡಿಎಸ್ ಅಧ್ಯಕ್ಷರಾದ ಆರ್.ಸಿ.ಆಂಜಿನಪ್ಪನವರು ತಿಳಿಸಿದರು.

 

ಮುಂದುವರೆದು ಈಗಾಗಲೇ ಈ ಯಾತ್ರೆಯು ಕೋಲಾರದಲ್ಲಿ ಯಶಸ್ವಿಯಾಗಿ ಪೂರ್ಣಗೊಳಿಸಿ ಪ್ರಸ್ತುತ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆಯುತ್ತಿದೆ ಇದರ ಮುಂದುವರೆದ ಭಾಗವಾಗಿ ತುಮಕೂರು ಜಿಲ್ಲೆಗೆ ಡಿಸೆಂಬರ್ ೧ ರಂದು ಆಗಮಿಸಲಿದ್ದು ಪ್ರಥಮವಾಗಿ ತುಮಕೂರು ನಗರಕ್ಕೆ ಆಗಮಿಸಿ ಶ್ರೀ ಸಿದ್ಧಗಂಗಾ ಮಠದಲ್ಲಿ ಪೂಜೆಯನ್ನು ನೆರವೇರಿಸಿ ನಂತರ ಬಟವಾಡಿ, ಗಂಗೋತ್ರಿ ನಗರ ಮಾರ್ಗವಾಗಿ ಉಪ್ಪಾರಹಳ್ಳಿ, ಶೆಟ್ಟಿಹಳ್ಳಿ ಆಂಜನೇಯಸ್ವಾಮಿಯ ದರ್ಶನ ಪಡೆದು ನಂತರ ಕುಣಿಗಲ್ ಮುಖ್ಯರಸ್ತೆಯಲ್ಲಿರುವ ಕೆ.ಎನ್.ಎಸ್ ಮಿಲ್ ಬಳಿ ಬೃಹತ್ ಸಮಾವೇಶ ನಂತರ ಟೌನ್ ಹಾಲ್ ವೃತ್ತ, ಎಂ.ಜಿ.ರಸ್ತೆ ಮಾರ್ಗವಾಗಿ ಕೋಟೆ ಆಂಜನೇಯಸ್ವಾಮಿ ವೃತ್ತ ಶಿರಾ ಗೇಟ್ ನಲ್ಲಿ ಸಭೆಯನ್ನು ನಡೆಸಿ ತದನಂತರ ಹನುಮಂತಪುರ ತಲುಪಿ ರಾತ್ರಿಯ ವಾಸ್ತವ್ಯವನ್ನು ದಿಬ್ಬೂರಿನ ಮಾನ್ಯ ಮಾಜಿ ಮುಖ್ಯಮಂತ್ರಿಗಳು ಮಾಡಲಿದ್ದಾರೆಂದು ತುಮಕೂರು ನಗರ ಜೆಡಿಎಸ್ ಪಕ್ಷದ ಶಾಸಕ ಸ್ಥಾನದ ಆಕಾಂಕ್ಷಿ ಗೋವಿಂದರಾಜು ತಿಳಿಸಿದರು.

 

ನಂತರ ಮಧುಗಿರಿ, ಕೊರಟಗೆರೆ, ಪಾವಗಡ, ಶಿರಾ, ಗುಬ್ಬಿ, ಚಿಕ್ಕನಾಯಕನಹಳ್ಳಿ, ತುರುವೇಕೆರೆ, ಕುಣಿಗಲ್ ಆದ ನಂತರ ತುಮಕೂರು ಗ್ರಾಮಾಂತರದಲ್ಲಿ ಕೊನೆಗೊಳ್ಳಲಿದೆಂದು ಎಂ.ಎಲ್.ಸಿ. ತಿಪ್ಪೇಸ್ವಾಮಿರವರು ತಿಳಿಸಿದರು.

 

ಆಯಾಯ ಕ್ಷೇತ್ರದ ಶಾಸಕ ಸ್ಥಾನದ ಅಪೇಕ್ಷಿತ ಅಭ್ಯರ್ಥಿಗಳು, ಅವರ ಸ್ಪರ್ಧಿಸುವ ಕ್ಷೇತ್ರದ ಮುಂದಾಳತ್ವವನ್ನು ವಹಿಸುತ್ತಾರೆ, ಪ್ರತಿಯೊಂದು ಯೋಜನೆಗಳನ್ನು ಅವರೇ ನಿರ್ಧರಿಸುತ್ತಾರೆ, ಜೊತೆಗೆ ಅಪಾರ ಕಾರ್ಯಕರ್ತರು, ಮುಖಂಡರು, ಸ್ಥಳೀಯ ನಾಯಕರು, ಮುಖಂಡರು ಎಲ್ಲರೂ ಒಗ್ಗಟ್ಟಾಗಿ ಈ ಪಂಚರತ್ನ ಯಾತ್ರೆಯನ್ನು ಯಶಸ್ವಿಪೂರ್ಣವಾಗಿ ತುಮಕೂರು ಜಿಲ್ಲೆಯಲ್ಲಿ ನಡೆಸಲು ಜಿಲ್ಲಾ ಜೆಡಿಎಸ್ ಘಟಕವು ಸನ್ನಧವಾಗಿದೆಂದು ತಿಳಿಸಿದರು.

 

ಈ ಪಂಚರತ್ನ ಯಾತ್ರೆಯಿಂದ ಗ್ರಾಮೀಣ ಭಾಗದ ಜನರಿಗೆ ಶಿಕ್ಷಣ, ಮೂಲಸೌಕರ್ಯ, ಉದ್ಯೋಗ, ಕೃಷಿ ಹಾಗೂ ಇನ್ನಿತರೆ ಸೌರ್ಕಯಗಳ ಕುರಿತು ಜಾಗೃತಿ ಮೂಡಿಸುವುದರೊಂದಿಗೆ ಪಕ್ಷವನ್ನು ಗ್ರಾಮೀಣ ಮಟ್ಟದಲ್ಲಿ ಬಲಪಡಿಸುವ ಉದ್ದೇಶ ನಮ್ಮದಾಗಿರುತ್ತದೆಂದು ತಿಳಿಸಿದರು.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version