ಸಿರಾ ತಾಲೂಕು ಜೆಡಿಎಸ್ ಘಟಕದ ವತಿಯಿಂದ ಸಮಿತಿ ರಚನೆ ಕಾರ್ಯಕರ್ತರ ಸಭೆ ಹಾಗೂ ಪಕ್ಷ ಸಂಘಟನೆ ಸಭೆ ನಡೆಯಿತು.

 

 

ಶಿರಾ ತಾಲೂಕಿನಲ್ಲಿ ಜೆಡಿಎಸ್ ಘಟಕದ ವತಿಯಿಂದ ಶಿರಾ ನಗರದಲ್ಲಿ ಶಿರಾ ತಾಲೂಕು ಬೂತ್ ಕಮಿಟಿ ರಚನೆ ಹಾಗೂ ಕಾರ್ಯಕರ್ತರ ಸಭೆ ನಡೆಯಿತು. ಕಾರ್ಯಕ್ರಮದಲ್ಲಿ ಪಕ್ಷದ ವತಿಯಿಂದ ಪಕ್ಷ ಸಂಘಟನೆ, ನಗರಸಭೆ ,ಹೋಬಳಿವಾರು ,ಗ್ರಾಮಮಟ್ಟದ ಕಮಿಟಿ ರಚನೆ ಹಾಗೂ ಪಕ್ಷದ ಸದಸ್ಯರ ನೊಂದಣಿ ಸೇರಿದಂತೆ ಹಲವು ವಿಚಾರಗಳನ್ನು ಚರ್ಚಿಸಲಾಯಿತು. ದೇವೇಗೌಡರ ಮಾರ್ಗದರ್ಶನ ದಂತೆ ಪಕ್ಷ ಸಂಘಟನೆಗೆ ಒತ್ತು ನೀಡಿ ಸಕ್ರಿಯ ಕಾರ್ಯಕರ್ತರನ್ನು ಗುರುತಿಸಿ ರವರಿಗೆ ನಗರ ವ್ಯಾಪ್ತಿ, ಗ್ರಾಮ ಪಂಚಾಯಿತಿ ವ್ಯಾಪ್ತಿ ,ಹೋಬಳಿ ಹಾಗೂ ತಾಲೂಕು ಮಟ್ಟದ ಕಾರ್ಯಕರ್ತರನ್ನು ಗುರುತಿಸಿ. ಅವರಿಗೆ ಹೆಚ್ಚುವರಿ ಜವಾಬ್ದಾರಿಗಳನ್ನು ನೀಡಿ ಪಕ್ಷ ಸಂಘಟನೆ ಮಾಡಬೇಕಾಗಿದ್ದು. ಅದರಂತೆ ಶಿರಾ ತಾಲೂಕಿನ ಕಾರ್ಯಕರ್ತರ ಸಭೆ ನಡೆಯಿತು.

 

 

ಕಾರ್ಯಕ್ರಮದಲ್ಲಿ ಮಾತನಾಡಿದ ಬೆಳ್ಳಿ ಲೋಕೇಶ್ ರವರು ಪ್ರತಿ ಭೂತ್ ಕಮಿಟಿಗೆ 10 ಜನರಂತೆ ಎಲ್ಲಾ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಿ ಎಲ್ಲಾ ಸಮುದಾಯದ ವತಿಯಿಂದ ಒಬ್ಬ ಕಾರ್ಯಕರ್ತರನ್ನು ಗುರುತಿಸಿ ಒಂದು ಕಮಿಟಿ ರಚನೆ ಮಾಡಿ. ಗ್ರಾಮಮಟ್ಟದಿಂದ ಜೆಡಿಎಸ್ನ ಬಲಪಡಿಸಬೇಕಾಗಿದೆ ಅದಕ್ಕಾಗಿ ಎಲ್ಲರ ಸಹಕಾರ ಅತ್ಯಗತ್ಯ ಎಂದರು. ಮುಂಬರುವ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯಿತಿ ಚಲಾವಣೆ ಸಮೀಪಿಸುತ್ತಿದ್ದು ಕಾರ್ಯಕರ್ತರನ್ನು ತಳಮಟ್ಟದಿಂದ ಪಡಿಸಬೇಕಾಗಿದೆ ಎಂದರು. ಶಿರಾ ತಾಲೂಕಿನ 26 ತಾಲೂಕು ಪಂಚಾಯಿತಿ, 36 ಗ್ರಾಮ ಪಂಚಾಯಿತಿ, 31 ನಗರಸಭೆ ಕ್ಷೇತ್ರಗಳಿದ್ದು. ಎಲ್ಲಾ ಕ್ಷೇತ್ರದಲ್ಲೂ ಜೆಡಿಎಸ್ ನ ಕಾರ್ಯಕರ್ತರು ಸಕ್ರಿಯರಾದ ಬೇಕಾಗಿದೆ. ಪಕ್ಷ ಸಂಘಟನೆಗೆ ಹಲವು ಮಾನದಂಡಗಳನ್ನು ಅನುಸರಿಸಿ ಬೂತ್ ಕಮಿಟಿ ರಚನೆ ಮಾಡುತ್ತಿದ್ದು ಎಲ್ಲಾ ಸಮುದಾಯಕ್ಕೂ ಸಮಾನತೆ ನೀತಿ ಅನುಸರಿಸಿ ಘಟಕಗಳನ್ನು ರಚನೆ ಮಾಡಲಾಗುತ್ತಿದೆ ಎಂದು ಬೆಳ್ಳಿ ಲೋಕೇಶ್ ತಿಳಿಸಿದರು .

 

ಕಾರ್ಯಕ್ರಮದಲ್ಲಿ ತುಮಕೂರು ಜೆಡಿಎಸ್ನ ಜಿಲ್ಲಾಧ್ಯಕ್ಷರಾದ ಆರ್ ಸಿ ಆಂಜಿನಪ್ಪ, ಎಂಎಸ್ಸಿ ತಿಪ್ಪೇಸ್ವಾಮಿ, ಕೊರಟಗೆರೆ ಕ್ಷೇತ್ರದ ಮಾಜಿ ಶಾಸಕರಾದ ಸುಧಾಕರ್ ಲಾಲ್ ,ಬೆಳ್ಳಿ ಲೋಕೇಶ್ ,ಶಿರಾ ಜೆಡಿಎಸ್ ಉಗ್ರೇಷ್ ಸೇರಿದಂತೆ ಜೆಡಿಎಸ್ ನ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version