ಸರ್ಕಾರ ಹೇಳಿದ ಅವಧಿಗೆ ಮೀಸಲಾತಿ ನೀಡಿದೆ ಇದ್ದರೆ ಮತ್ತೆ ಹೋರಾಟ ಪ್ರಾರಂಭ: ಜಯಮೃತ್ಯುಂಜಯ ಸ್ವಾಮಿಜಿ.

 

ಸರ್ಕಾರ ಹೇಳಿದ ಅವಧಿಗೆ ಮೀಸಲಾತಿ ನೀಡಿದೆ ಇದ್ದರೆ ಮತ್ತೆ ಹೋರಾಟ ಪ್ರಾರಂಭ: ಜಯಮೃತ್ಯುಂಜಯ ಸ್ವಾಮಿಜಿ.

 

ಅಥಣಿ: ಕೇಂದ್ರ ಬಿಜೆಪಿ ವರಿಷ್ಠರು ಪಂಚಮಸಾಲಿ ಜನಾಂಗಕ್ಕೆ ಮುಖ್ಯಮಂತ್ರಿ ಸ್ಥಾನದ ಅವಕಾಶ ಕಲ್ಪಿಸಿಕೊಡುತ್ತಾರೆಂದು ನಾಡಿನ ಸಮಾಜ ಬಾಂಧವರು ನಂಬಿದ್ದರು. ಆದರೆ ಕಾಣದ ಕೈಗಳ ಒತ್ತಾಡದಿಂದ ಕೈತಪ್ಪಿ ಸಮಾಜಕ್ಕೆ ಅಗೌರವವಾಗಿದೆಯೆಂದು ಸಮಾಜ ಭಾಂದವರಲ್ಲಿ ಆಕ್ರೋಶ ವ್ಯಕ್ತವಾಗಿದೆಂದು ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮಿಜಿ ಅವರು ಹೇಳಿದರು.

ಬಸವರಾಜ ಬೊಮ್ಮಾಯಿ ಅವರು ನಮ್ಮ ಸಮಾಜದವರು ‌ಅವರ ಮೇಲೆ ಸಂಪೂರ್ಣ ವಿಶ್ವಾಸ ಇದೆ. ಪಂಚಮಸಾಲಿ ಸಮಾಜದ 2ಎ ಮೀಸಲಾತಿ

ಹಕ್ಕೊತ್ತಾಯವನ್ನು ಸರ್ಕಾರ ಕೊಟ್ಟ ಕಲಾವಕಾಶದೊಳಗೆ ಅನುಷ್ಠಾನಗೊಳ್ಳದಿದ್ದರೆ ಅಕ್ಟೋಬರ್ 1 ರಂದು ಜೆ ಎಚ್ ಪಟೇಲ್ ಜಯಂತಿಯಂದು ಧರಣಿ ಸತ್ಯಾಗ್ರಹವನ್ನು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಮತ್ತೆ ಮುಂದುವರೆಸಲಾಗುವುದು. ಸರ್ಕಾರ ಇದಕ್ಕೆ ಅವಕಾಶ ನೀಡಬಾರದು ಎಂದು ತಿಳಿಸಿದರು.

 

ಪ್ರತಿಜ್ಞಾ ಪಂಚಾಯತ್ ಎಂಬ ಧೈಯ ವಾಕ್ಯದೊಂದಿಗೆ ಅಭಿಯಾನವನ್ನು , ಪಂಚಮಸಾಲಿ ಗೌಡ ಹಾಗೂ ದೀಕ್ಷಾ ಪಂಚಮಸಾಲಿ ಸಮಾಜದವರನ್ನು ಒಗ್ಗೂಡಿಸಿಕೊಂಡು ರಾಜ್ಯದ ಪ್ರತಿ ತಾಲ್ಲೂಕಿನಲ್ಲೂ ಜಾಗೃತಿ ಕೈಗೊಳ್ಳಲು ನಿರ್ಧರಿಸಲಾಗಿದೆ .ಕೂಡಲೇ ಆಗಿರುವ ಅನ್ಯಾಯವನ್ನು ಸರ್ಕಾರ ಸರಿಪಡಿಸಲಿ, ಜನಸಂಖ್ಯೆ ಅನುಗುಣವಾಗಿ ಸಮಾಜಕ್ಕೆ ಉನ್ನತ ಅವಕಾಶವನ್ನು ಬಿಜೆಪಿ ವರಿಷ್ಠರು ಕಲ್ಪಿಸಿಕೊಡುತ್ತಾರೆಂದು ನಾವು ನಂಬಿದ್ದೇವೆ . ಒಂದು ವೇಳೆ ಕಡೆಗಣಿಸಿದರೆ ಮೀಸಲಾತಿ ಹಾಗೂ ಮುಖ್ಯಮಂತ್ರಿ ಸ್ಥಾನ ಎರಡನ್ನು ಕಲ್ಪಿಸದೆ ಸಮಾಜಕ್ಕೆ ಬಿಜೆಪಿ ವರಿಷ್ಠರು ಅಗೌರವ ಮಾಡಿದ್ದಾರೆಂದು ಭಾವಿಸಿ ಮುಂದಿನ ದಿನಗಳಲ್ಲಿ ಸಮಜದರು ತಮ್ಮ ಅಸಮಾಧಾನವನ್ನು ಚುನಾವಣೆ ಸಂದರ್ಭದಲ್ಲಿ ತೋರಿಸುವ ಸಾಧ್ಯತೆ ಇದೆ ಎಂದು ಹೇಳಬಹುದು.

 

ಸದ್ಯ ಸಚಿವ ಸಂಪುಟ ಪುನಾರಚನೆ ಇರುವುದರಿಂದ ಸಮಾಜಕ್ಕೆ ಸಚಿವ ಸ್ಥಾನ ನೀಡುವಂತೆ ಒತ್ತಾಯ ಮಾಡುವುದಿಲ್ಲ, ಸಮಾಜಕ್ಕೆ ೨ಎ ಮೀಸಲಾತಿ ನಿಡುವಂತೆ ಒತ್ತಾಯ ಮಾಡುತ್ತೇನೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version