ಕಣದಿಂದ ಹಿಂದೆ ಸರಿದ ಸ್ವತಂತ್ರ ಅಭ್ಯರ್ಥಿ ಜಿ.ಕೆ ಶ್ರೀನಿವಾಸ್

ಕಣದಿಂದ ಹಿಂದೆ ಸರಿದ ಸ್ವತಂತ್ರ ಅಭ್ಯರ್ಥಿ ಜಿ.ಕೆ ಶ್ರೀನಿವಾಸ್

 

 

ತುಮಕೂರು – ತುಮಕೂರು ನಗರ ವಿಧಾನಸಭಾ ಕ್ಷೇತ್ರಕ್ಕೆ ಸ್ವತಂತ್ರ ಅಭ್ಯರ್ಥಿಯಾಗಿ ಅರ್ಜಿ ಸಲ್ಲಿಸಿದ್ದ ಜಿ ಕೆ ಶ್ರೀನಿವಾಸ್  ಬಿಜೆಪಿಗೆ ಬೆಂಬಲ ಸೂಚಿಸಿ ನಾಮಪತ್ರ  ವಾಪಾಸ್ ಪಡೆಯುತ್ತಿದ್ದಾರೆ ಎಂದು ತುಮಕೂರು ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಹೆಬ್ಬಾಕ ರವಿ  ಹೇಳಿದರು

 

 

ಇದೇ ಸಂದರ್ಭದಲ್ಲಿ ನಾಮಪತ್ರ ಹಿಂಪಡೆಯುವ ಬಗ್ಗೆ ಮಾಹಿತಿ ನೀಡಿದ ಅಭ್ಯರ್ಥಿ ಜಿ.ಕೆ ಶ್ರೀನಿವಾಸ ಮಾತನಾಡಿ  ಪ್ರಾಮಾಣಿಕ ಕಾರ್ಯಕರ್ತನಾಗಿ ಹಲವಾರು ವರ್ಷಗಳಿಂದ ದುಡಿಯುತ್ತಿದ್ದೇನೆ ಅದರಂತೆ ಮೋದಿ ನಾಯಕತ್ವ ಹಾಗೂ ಬಿಜೆಪಿಯನ್ನು ತುಮಕೂರು ನಗರದಲ್ಲಿ ಗೆಲ್ಲಿಸುವ ಸಾಧುದ್ದೇಶದಿಂದ ನಾನು ಉಮೇದುವಾರಿಕೆ ಹಿಂಪಡೆಯುತ್ತಿದ್ದೇನೆ.

 

 

ಭಾರತವನ್ನು ಒಟ್ಟುಗುಡಿಸುವ ಹಾಗೂ ಪಾಕಿಸ್ತಾನದಂತಹ ಕೆಲವು ಶತೃ ರಾಷ್ಟ್ರಗಳು ಭಾರತವನ್ನು ಹೊಡೆಯುವಂತಹ ಕೆಲಸ ಮಾಡುತ್ತಿದೆ ಅದಕ್ಕೆ ನಾವು ವಿಶ್ವ ಹಿಂದೂ ಪರಿಷದ್, ಆರ್ ಎಸ್ ಎಸ್ ಬಿಜೆಪಿ ಭಾರತವನ್ನು ಸಮೃದ್ಧ ರಾಷ್ಟ್ರವನ್ನು ಮಾಡುವಂತಹ ಕಾರ್ಯಕ್ಕೆ ಮುಂದಾಗಿದ್ದೇವೆ ಅದಕ್ಕೆ ಎಲ್ಲರ ಸಹಕಾರ ಅತ್ಯಗತ್ಯ ಎಂದು ಬಿಜೆಪಿಯ ಹರ್ಯಾಣ ಸಂಸದರು ಸಂಜಯ್ ಬಾಟಿಯ ಹೇಳಿದರು.

 

 

 

 

ಇನ್ನು ಇದೆ ಮಾಧ್ಯಮ ಗೋಷ್ಠಿಗೆ ಆಗಮಿಸಿದ ಮಾಜಿ ಸಂಸದ ಮುದ್ದಾಹನುಮೇಗೌಡ ಮಾತಾನುಡುತ್ತ ನಾನು ಸಹ ಕುಣಿಗಲ್ ಕ್ಷೇತ್ರದ ಆಕಾಂಕ್ಷೆ ಆಗಿದ್ದು ಸತ್ಯ ಆದರೆ ನನ್ನ ಪಕ್ಷ ಕೆಲವೊಂದು ನಿರ್ಧಾರ ಕೈಗೊಂಡಿತು ಅದಕ್ಕೆ ನಾನು ತಲೆ ಬಾಗಿ ಅವರ ನಿರ್ಧಾರ ಗೌರವಿಸುವುದು ನನ್ನ ಕರ್ತವ್ಯ ಆಗಿದ್ದ ಪರಿಣಾಮ ನಾನು ಪಕ್ಷದ ನಿಷ್ಠಾವಂತನಾಗಿ ದುಡಿದು ಕುಣಿಗಲ್ ಮಾತ್ರವಲ್ಲದೆ ಜಿಲ್ಲೆಯ ಎಲ್ಲಾ ಕ್ಷೇತ್ರದಲ್ಲಿ ನಮ್ಮ ಪಕ್ಷ ಗೆಲ್ಲಲು ಶ್ರಮವಹಿಸಿ ಕೆಲಸ ಮಾಡುತ್ತೇನೆ ಎಂದರು

 

 

 

ನಮ್ಮ ಪಕ್ಷ ಜನಸ್ನೇಹಿ ಪಕ್ಷವಾಗಿದ್ದು ನಾನು ಈ ಪಕ್ಷಕ್ಕೆ ಮಾಡುತ್ತೋರುವಿದು ಅಳಿಲು ಸೇವೆ ಅಷ್ಟೇ ಎಂದು ಹೇಳಿದರು ಹಾಗೂ ನಾನು ನನ್ನ ಕಾರ್ಯಕರ್ತರು ಬಿಜೆಪಿ ಪಕ್ಷದಲ್ಲಿ ಸಾಕಾರಾತ್ಮಕವಾಗಿ ಹಾಗೂ ಸಕ್ರಿಯವಾಗಿದ್ದೇವೆಂದರು

 

 

 

ನಾನು ಪಕ್ಷಕ್ಕಾಗಿ ಕೆಲಸ ಮಾಡುತ್ತಿದ್ದೇನೆ ಯಾವುದೇ ಒಬ್ಬ ವ್ಯಕ್ತಿಗಾಗಿ ನಾನು ಚುನಾವಣಾ ಪ್ರಚಾರ ಮಾಡಲ್ಲ ಎಂದ ಮಾಜಿ ಸಂಸದ ಮುದ್ದಾಹನುಮೇಗೌಡ

 

 

 

ನಮ್ಮ ಪಕ್ಷಕ್ಕೆ ಅಭಿವೃದ್ಧಿಯೇ ಶ್ರೀ ರಕ್ಷೆ ಹಾಗಾಗಿ ಬಿಜೆಪಿ ತುಮಕೂರಿಗೆ ಜಿಲ್ಲೆಯಲ್ಲಿ ಹೆಚ್ಚಿನ ಸೀಟ್ ಗಳನ್ನು ಗೆಲ್ಲಲು ಸಹಕರಿಯಾಗಿದೆ ಎಂದರು.

 

 

ಇನ್ನು ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ  ಹೆಬ್ಬಾಕ ರವಿ, ಶಾಸಕ  ಜ್ಯೋತಿ ಗಣೇಶ್, ಚಿದಾನಂದ ಗೌಡ, ಕೃಷ್ಣಕುಮಾರ್, ಸದಾಶಿವಯ್ಯ, ಜಿ ಕೆ ಶ್ರೀನಿವಾಸ್, ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version