ಬಿಜೆಪಿಯ ಡಿ ಕೃಷ್ಣಕುಮಾರ್ ಗೆ ಬೆಂಬಲ ಘೋಷಿಸಿದ ಮಾಜಿ ಸಂಸದ -ಮುದ್ದಹನುಮೇಗೌಡ.

ಬಿಜೆಪಿಯ ಡಿ ಕೃಷ್ಣಕುಮಾರ್ ಗೆ ಬೆಂಬಲ ಘೋಷಿಸಿದ ಮಾಜಿ ಸಂಸದ -ಮುದ್ದಹನುಮೇಗೌಡ.

 

 

ತುಮಕೂರು – ಇದುವರೆಗೂ ಕುಣಿಗಲ್ ಕ್ಷೇತ್ರಕ್ಕೆ ಬಿಜೆಪಿ ಪಕ್ಷದಿಂದ ತಾವು ಸಹ ಆಕಾಂಕ್ಷಿ ಎಂದು ಹೇಳಿದ್ದ ಮಾಜಿ ಸಂಸದ ಮುದ್ದಹನುಮೆಗೌಡ ರವರು ಕೊನೆಗಳಿಗೆಯಲ್ಲಿ ಕುಣಿಗಲ್ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ಪಕ್ಷದಿಂದ ಟಿಕೆಟ್ ಗಾಗಿ ಪ್ರಬಲ ಪೈಪೋಟಿ ನೀಡಿ ಟಿಕೆಟ್ ವಂಚಿತರಾದ ಕಾರಣ ತಾವು ಸಹ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುತ್ತೇನೆ ಎಂದು ತಿಳಿಸಿದ್ದ ಮಾಜಿ ಸಂಸದರು ಇಂದು ಕುಣಿಗಲ್ ಕ್ಷೇತ್ರದ ಅಭ್ಯರ್ಥಿ ಡಿ ಕೃಷ್ಣಕುಮಾರ್ ರವರಿಗೆ ಬೆಂಬಲ ಸೂಚಿಸಿ ಅಚ್ಚರಿಗೆ ಕಾರಣರಾಗಿದ್ದಾರೆ.

 

 

 

 

 

ಇನ್ನು ತುಮಕೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಮುದ್ದಹನುಮೆಗೌಡರವರು ಇನ್ನು ತಾವು ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತ, ಪಕ್ಷದ ವರಿಷ್ಠರು ,ನಾಯಕರ ಆಶಯದಂತೆ ಅವರ ಮಾತಿಗೆ ಗೌರವ ಇಟ್ಟು ತಾವು ಕುಣಿಗಲ್ ಕ್ಷೇತ್ರದ ಅಭ್ಯರ್ಥಿ ಡಿ ಕೃಷ್ಣಕುಮಾರ್ ಸೇರಿದಂತೆ ತುಮಕೂರು ಜಿಲ್ಲೆಯ ಎಲ್ಲಾ ಬಿಜೆಪಿ ಅಭ್ಯರ್ಥಿಗಳಿಗೂ ಬೆಂಬಲ ಸೂಚಿಸಿ ಅವರೊಂದಿಗೆ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಪಕ್ಷದ ಗೆಲುವಿಗೆ ಶ್ರಮ ವಹಿಸಿ ಕೆಲಸ ನಿರ್ವಹಿಸುತ್ತೇನೆ ಎಂದರು.

 

 

 

 

 

 

ಇನ್ನು ಪಕ್ಷದ ಹೈಕಮಾಂಡ್ ಹಾಗೂ ವರಿಷ್ಠರು ಯಾವ ರೀತಿ ಆದೇಶ ನೀಡುವರೋ ಆ ರೀತಿ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುತ್ತೇನೆ ಆ ಮೂಲಕ ಜಿಲ್ಲಾದ್ಯಂತ ಸಂಚರಿಸಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಕೆಲಸ ಮಾಡುವೆ ಎಂದರು.

 

 

 

 

 

 

ಪಕ್ಷದ ಟಿಕೆಟ್ ಕೈತಪ್ಪಿರುವ ಬಗ್ಗೆ ತಮಗೂ ಸಹ ಬೇಸರ ಇದೆ ಇನ್ನು ಸಂಸದ ಹಾಗೂ ಶಾಸಕನಾಗಿ ಕೆಲಸ ನಿರ್ವಹಿಸಿ ಸಾರ್ವಜನಿಕರ ಸಂಕಷ್ಟಕ್ಕೆ ನೆರವಾದ ತೃಪ್ತಿ ಸಹ ನಮಗಿದ್ದು ಪಕ್ಷದ ಹಿರಿಯರ ಮಾತಿಗೂ ಸಹ ಗೌರವ ಕೊಡುವುದು ಪಕ್ಷದ ನಿಷ್ಠಾವಂತ ಕಾರ್ಯಕರ್ತರ ಕೆಲಸವಾಗಿದೆ ಅದೇ ರೀತಿ ಪಕ್ಷದ ತೀರ್ಮಾನದಂತೆ ತಾವು ಕೆಲಸ ನಿರ್ವಹಿಸುತ್ತೇವೆ ಎಂದರು.

 

 

ರಾಜ್ಯ ಹಾಗೂ ದೇಶದ ಮತದಾರರ ಮನದಲ್ಲಿ ಬಿಜೆಪಿ ಅಲೆ ಇದೆ.

 

ಕರ್ನಾಟಕ ರಾಜ್ಯ ಹಾಗೂ ದೇಶಾದ್ಯಂತ ಮತದಾರ ರ ಮನಸ್ಸಿನಲ್ಲಿ ಬಿಜೆಪಿ ಅಲೆ ಇದೆ ಎಂದರು.

 

 

 

 

 

ಪಕ್ಷಕ್ಕೆ ಕಂಡೀಶನ್ ಹಾಕುವ ದೊಡ್ಡ ಮನುಷ್ಯ ನಾನಲ್ಲ.

 

ಇನ್ನು ಪಕ್ಷದ ವರಿಷ್ಠರಿಗೆ ಕಂಡೀಶನ್ ಹಾಕಿದ್ದೀರ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ತಾವು ಪಕ್ಷ ಹಾಗೂ ಪಕ್ಷದ ವರಿಷ್ಠರಿಗೆ ಶರತ್ತು ಹಾಕುವ ದೊಡ್ಡ ಮನುಷ್ಯ ನಾನಲ್ಲ ಹಾಗೆಂದ ಮಾತ್ರಕ್ಕೆ ತಾವು ರಾಜಕಾರಣದಲ್ಲಿ ಸನ್ಯಾಸಿ ಅಲ್ಲ ತಮ್ಮ ರಾಜಕಾರಣದ ನಡೆ ನಿರಂತರವಾಗಿ ಇರುತ್ತದೆ ಎಂದರು.

 

 

 

 

ವರದಿ ಮಾರುತಿ ಪ್ರಸಾದ್ ತುಮಕೂರು

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version