ವಿಚಾರಣೆ ನೆಪದಲ್ಲಿ ಅಮಾನುಷ ಹಲ್ಲೆ ಮಾಡಿದ್ರ ಪೊಲೀಸ್ ಸಿಬ್ಬಂದಿಗಳು ಕ್ರಮ ಕೈ ಗೊಳ್ಳುವರೆ ಹಿರಿಯ ಅಧಿಕಾರಿಗಳು….????

ವಿಚಾರಣೆ ನೆಪದಲ್ಲಿ ಅಮಾನುಷ ಹಲ್ಲೆ ಮಾಡಿದ್ರ ಪೊಲೀಸ್ ಸಿಬ್ಬಂದಿಗಳು ಕ್ರಮ ಕೈ ಗೊಳ್ಳುವರೆ ಹಿರಿಯ ಅಧಿಕಾರಿಗಳು….????

 

 

ತುಮಕೂರು – ಯುವಕನೊಬ್ಬನನ್ನು ಪೊಲೀಸರು ಸಾರ್ವಜನಿಕವಾಗಿ ಅಮಾನುಷವಾಗಿ ಹಲ್ಲೆ ಮಾಡಿರುವ ವಿಡಿಯೋ ವೈರಲ್ ಆಗಿದೆ.

 

 

 

ತುಮಕೂರು ನಗರದ ಟೌನ್ ಹಾಲ್ ವೃತ್ತದ ಬಳಿ ಹಳೆ ಡಿ ಹೆಚ್ ಒ ಕಚೇರಿ ಬಳಿ ಡಿಸೆಂಬರ್ 14ರಂದು ರಾತ್ರಿ 9:30 ಸಮಯದಲ್ಲಿ ಸುಮಾರು ನಾಲ್ವರು ಪೊಲೀಸ್ ಸಿಬ್ಬಂದಿಗಳು ಯುವಕನೊಬ್ಬನನ್ನ ಸಾರ್ವಜನಿಕವಾಗಿ ಲಾಟಿ ಹಾಗೂ ಬೂಟು ಕಾಲಿನಲ್ಲಿ ಒದ್ದು ಹಲ್ಲೆ ಮಾಡಿದ್ದು ಪೊಲೀಸರ ವರ್ತನೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

 

 

ಪೊಲೀಸರು ವಿಚಾರಣೆ ನೆಪದಲ್ಲಿ ಯುವಕನಿಗೆ ಅಮಾನವೀಯವಾಗಿ ಹಲ್ಲೆ ಮಾಡಿರುವುದು ನಿಜಕ್ಕೂ ಶೋಚನೀಯ , ಪೋಲೀಸರಿಗೆ ಸಾರ್ವಜನಿಕವಾಗಿ ಭೂಟು ಕಾಲಿನಲ್ಲಿ ಒದೆಯುವ ಅಧಿಕಾರ ಕೊಟ್ಟವರಾರು ಎಂಬ ಪ್ರಶ್ನೆ ಕೂಡ ಎದುರಾಗಿದೆ,ಕಾನೂನು ಉಲ್ಲಂಘನೆ ಮಾಡಿ ಸಾರ್ವಜನಿಕ ಸ್ತಳದಲ್ಲೇ ಈ ರೀತಿ ವರ್ತಿಸಿರುವ ಪೊಲೀಸರ ನಡೆ ತೀವ್ರ ಜನಾಕ್ರೋಶಕ್ಕೆ ಕಾರಣವಾಗಿದೆ. ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಮಾನವ ಹಕ್ಕುಗಳ ಆಯೋಗ ಅಮಾನವೀಯವಾಗಿ ವರ್ತಿಸಿರುವ ಪೊಲೀಸರ ಮೇಲೆ ಯಾವ ಕ್ರಮ ಕೈಗೊತ್ತಾರೆ ಎಂಬುದನ್ನು ಕಾದುನೋಡಬೇಕಿದೆ…..?????

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version